ಕೆ.ಆರ್.ಪೇಟೆ: ಕೆ.ಆರ್.ನಗರ ತಾಲ್ಲೂಕಿನ ಹೊಸಅಗ್ರಹಾರ ಹೋಬಳಿಯ ದೊಡ್ಡಕೊಪ್ಪಲು ಗ್ರಾಮದ ಮಹದೇವ್ ಅವರಿಂದ ಸರ್ಕಾರಿ ಕಾಮಗಾರಿ ಕೊಡಿಸುವುದಾಗಿ ಹೇಳಿ 10 ಲಕ್ಷ ರೂಪಾಯಿ ವಸೂಲಿ ಮಾಡಿ,ಈಗ ಹಣ ವಾಪಸ್ ನೀಡದೇ ಕೊಲೆ ಬೆದರಿಕೆ ಹಾಕುತ್ತಿರುವುದಾಗಿ ಆರೋಪ ಕೇಳಿ ಬಂದಿದೆ.
ದೊಡ್ಡಕೊಪ್ಪಲು ಗ್ರಾಮದ ಮಹದೇವ್ ಅವರು, ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಂದಗೆರೆ ಗ್ರಾಮದ ವಿಜಯ್ ಕುಮಾರ್ ಎಂಬುವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಸರ್ಕಾರದ ಕಾಮಗಾರಿ ಕೊಡಿಸುವುದಾಗಿ ನಂಬಿಸಿ ವಿಜಯ್ ಕುಮಾರ್ ಅವರು ಸುಮಾರು 10 ಲಕ್ಷ ರೂಪಾಯಿ ಹಣ ಪಡೆದಿದ್ದಾರೆ. ಆದರೆ ಈವರೆಗೂ ಕಾಮಗಾರಿ ಕೊಡಿಸದೇ, ಹಣವನ್ನೂ ವಾಪಸ್ ನೀಡದೇ ಇದ್ದಾರೆ ಎಂದು ಮಹದೇವ್ ಆರೋಪಿಸಿದರು.
ಈ ಬಗ್ಗೆ ಈಗಾಗಲೇ ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆ ಪೊಲೀಸರ ಸಮ್ಮುಖದಲ್ಲಿ ವಿಜಯ್ ಕುಮಾರ್ ಅವರು ಹಣವನ್ನು ವಾಪಸ್ ನೀಡುವುದಾಗಿ ಕರಾರು ಪತ್ರ ಬರೆದುಕೊಟ್ಟಿದ್ದರು. ಆದರೆ ಕರಾರು ಪತ್ರದ ಆಧಾರದ ಮೇಲೆ ಮನೆಗೆ ಹೋಗಿ ಹಣ ಕೇಳಿದಾಗ ವಿಜಯ್ ಕುಮಾರ್ ಅವರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮಹದೇವ್ ಆರೋಪಿಸಿದ್ದಾರೆ.ನಗೆ ಮೋಸ ಮಾಡಿರುವ ವಿಜಯ್ ಕುಮಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ನನಗೆ ನ್ಯಾಯ ಕೊಡಿಸಬೇಕು ಎಂದು ಮಹದೇವ್ ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಂತಕುಮಾರ್, ಮನೋಹರ್, ನರೇಶ್ ಉಪಸ್ಥಿತರಿದ್ದರು.
