ತುಮಕೂರು- ರಾಜ್ಯ ಚುನಾವಣಾ ಆಯೋಗ ನಡೆಸುತ್ತಿರುವ ಎಸ್.ಐ.ಆರ್.ನಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾಡಳಿತ, ಚುನಾವಣಾ ಆಯೋಗದ ಸಹಕಾರದಿಂದ ಉತ್ತಮವಾಗಿ ಮತದಾರರ ನೊಂದಣಿ ನಡೆದಿದ್ದು, ಶೇ99.72ರಷ್ಟು ಮತದಾರರಿಗೆ ಎನ್ಮರೇಷನ್ ಫಾರಂ ಹಂಚುವ ಮೂಲಕ ಬಿಎಲ್ಓಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದು ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಶ್ಲಾಘಿಸಿದ್ದಾರೆ.
ನಗರದ 7ನೇ ವಾರ್ಡಿನ ಜಿ.ಸಿ.ಆರ್. ಕಾಲೋನಿಯ ಕೆಲ ಬಡಾವಣೆಗಳಿಗೆ ಭೇಟಿ ನೀಡಿ,ಎಸ್.ಐ.ಆರ್. ಪ್ರಕ್ರಿಯೆ ಕಾರ್ಯವನ್ನು ವೀಕ್ಷಿಸಿದರು, ಕಳೆದ 29 ರಿಂದ ಎಸ್.ಐ.ಆರ್.ಪ್ರಕ್ರಿಯೆ ರಾಜ್ಯದಲ್ಲಿ ಆರಂಭವಾಗಿದ್ದು, ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಐ.ಆರ್. ಬಹಳ ತ್ವರಿತಗತಿಯಲ್ಲಿ ನಡೆಯುತ್ತಿದೆ.ತುಮಕೂರು ನಗರ 132ನೇ ವಿಧಾನಸಭಾ ಕ್ಷೇತ್ರದಲ್ಲಿ 247ಬೂತ್ ಗಳಿದ್ದು,2,83,800 ಮತದಾರರಿದ್ದು,ಈಗಾಗಲೇ ಬಿಎಲ್ಓಗಳು 2,73ಲಕ್ಷ ಎನ್ಮರೇಷನ್ ಫಾರಂನ್ನು ತಲುಪಿಸಿದ್ದು,99.72 ಜನರಿಗೆ ಫಾರಂಗಳು ತಲುಪಿವೆ.ಇವುಗಳಲ್ಲಿ 80500 ಫಾರಂಗಳು ಡಿಜಿಟಲೈಸ್ಡ್ ಆಗಿವೆ. ಬಾಕಿ ಫಾರಂಗಳು ಅಪ್ಲೊಡ್ ನಡೆಯುತ್ತಿದೆ.ಎಲ್ಲಾ ಬಿಎಲ್ಓಗಳು ಮನೆ ಮನೆ ಭೇಟಿಯ ಜೊತೆಗೆ, ಫಾರಂ ತುಂಬಲು ಸಹ ಸಹಕಾರ ನೀಡುತ್ತಿದ್ದಾರೆ. ಹಾಗಾಗಿ ನಾಗರಿಕರ ಪರವಾಗಿ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಡಾ.ಎಸ್.ರಫೀಕ್ ಅಹಮದ್ ನುಡಿದರು.
ಚುನಾವಣಾ ಆಯೋಗವೂ ಜುಲೈ 30ಕ್ಕೆ ಇದ್ದ ಕೊನೆಯ ದಿನಾಂಕವನ್ನು ಆಗಸ್ಟ್ 08ರವರೆಗೆ ಮುಂದೂಡಿದೆ. ಅಷ್ಟರೊಳಗೆ ಎಲ್ಲರೂ ತಮ್ಮ ಬಳಿ ಇರುವ ಫಾರಂನ್ನು ಬಿಎಲ್ಓ ಅವರಿಗೆ ನೀಡಿ, ಅವರಿಂದ ಸ್ವೀಕೃತಿ ಪಡೆದು, ಅದನ್ನು ಭದ್ರಪಡಿಸಿ ಇಟ್ಟುಕೊಂಡು, ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಂದೆಯೇ ಎಂದು ಖಚಿತ ಮಪಡಿಸಿಕೊಳ್ಳುವಂತೆ ಡಾ.ಎಸ್.ರಫೀಕ್ ಅಹಮದ್ ಸಲಹೆ ನೀಡಿದರು.
ಈ ವೇಳೆ ಬಿಎಲ್ಓ ಆದ ದೀಪಿಕಾ, ಬಿಎಲ್ಎ 02ಗಳಾದ ಜಾಕೀರ್ ಪಾಷ, ಹುಸ್ಮಾನ್ ಖಾನ್,ಫೈರೋಜ್ ಫಾರೂಕ್ ಮೆಹಬೂಬ್ ಪಾಷ,ಹಸ್ಮತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
