ತುಮಕೂರು: ನಗರದ ಹೊರಪೇಟೆಯ ಕರಿಬಸವೇಶ್ವರಸ್ವಾಮಿ ಮಠದ ಚನ್ನಬಸವರಾಜೇಂದ್ರ ಸ್ವಾಮೀಜಿ ಶನಿವಾರ ಮುಂಜಾನೆ ಶಿವೈಕ್ಯರಾದರು. ಇವರಿಗೆ 98 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಸ್ವಾಮೀಜಿಗಳು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಉರುವಕೊಂಡ ಮಠದಲ್ಲಿ ವಾಸ್ತವ್ಯ ಹೂಡಿದ್ದು ವಯೋಸಹಜ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು, ಮುಂಜಾನೆ 5:30ರ ಹೊತ್ತಿಗೆ ಕೊನೆಯುಸಿರೆಳೆದರು.
ಚನ್ನಬಸವರಾಜೇಂದ್ರ ಸ್ವಾಮೀಜಿಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ನಗರದ ಕರಿಬಸವೇಶ್ವರಸ್ವಾಮಿ ಮಠದಲ್ಲಿ ಭಕ್ತರು ಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತನಮನ ಸಲ್ಲಿಸಿದರು. ಶಾಸಕ ಜಿ.ಬಿ. ಜ್ಯೋತಿಗಣೇಶ್, ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಉಪಾಧ್ಯಕ್ಷ ಟಿ.ಬಿ.ಹರೀಶ್ ಮತ್ತಿತರರು ಆಗಮಿಸಿ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿದರು.
ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ಅಧ್ಯಕ್ಷಟಿ.ಆರ್. ಸದಾಶಿವಯ್ಯ, ಮುಖಂಡರಾದ ಮನೋಜ್ ಹರಳೂರು, ದಯಾನಂದ್, ಟಿ.ಜಿ.ಬಸವರಾಜು, ಪ್ರತಾಪ್, ರವಿಮಲ್ಲಣ್ಣ, ಬಂಬೂಮೋಹನ್, ವಿಕಾಸ್ಆರಾಧ್ಯ, ಪರಿಣಿತ್, ಪ್ರಜ್ವಲ್, ವಿಜಯಕುಮಾರ್, ಹೇಮಂತ್ ಮತ್ತಿತರರು ಭಾಗವಹಿಸಿ ಭಕ್ತಿ ನಮನ ಸಲ್ಲಿಸಿದರು.
– ಕೆ.ಬಿ.ಚಂದ್ರಚೂಡ
