ತುಮಕೂರು: ದೇಶದಲ್ಲಿಅರಾಜಕತೆ ಸೃಸ್ಟಿಸುತ್ತಿರುವ ಹಾಗೂ ರಾಜ್ಯದಲ್ಲಿ ಬಿಜೆಪಿ ಶಾಸಕರ ಮೇಲೆ ಗೂಂಡಾಗಿರಿ ನಡೆಸುತ್ತಿರುವ ಕಾಂಗ್ರೆಸ್ ಧೋರಣೆ ಖಂಡಿಸಿ ಗುರುವಾರ ಜಿಲ್ಲಾ ಬಿಜೆಪಿ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಬಿಜಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ವರ್ತನೆ ಖಂಡಿಸಿದರು.
ಈ ವೇಳೆ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜನರಿಂದ ತಿರಸ್ಕೃತರಾಗಿರುವ ಕಾಂಗ್ರೆಸ್,ಜನರ ವಿಶ್ವಾಸ ಗಳಿಸಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಅಭದ್ರಗೊಳಿಸಲು ಹೊರಟಿರುವುದು ನಾಚಿಕೆಗೇಡು.ನೀಟ್ ಪರೀಕ್ಷೆ ನೆಪ ಮಾಡಿಕೊಂಡು ದೇಶದ್ರೋಹಿಗಳ ಜೊತೆ ಸೇರಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡುವ ಮೂಲಕ ರಾಜಕೀಯ ಲಾಭ ಪಡೆಯಲು ಹೊರಟ ಕಾಂಗ್ರೆಸ್ ಉದ್ದೇಶ ಈಡೇರುವುದಿಲ್ಲ ಎಂದು ಕಿಡಿಕಾರಿದರು.
ಕಾಕ್ರೋಚ್ ಜನತಾಪಾರ್ಟಿಗೆ ಭಾರತದ ಬಗ್ಗೆ ಗೌರವವಿಲ್ಲ, ಅಂತಹವರ, ನೇಪಾಳದಂತೆ, ಶ್ರೀಲಂಕಾದಂತೆ, ಬಾಂಗ್ಲಾದಂತೆ ಭಾರತದಲ್ಲಿಅರಾಜಕತೆ ಸೃಷ್ಟಿ ಮಾಡುತ್ತೇವೆಎನ್ನುವ ದೇಶದ್ರೋಹಿಗಳ ಜೊತೆ ಸೇರಿರುವಕಾಂಗ್ರೆಸ್ನಉದ್ದೇಶದೇಶದಜನರಿಗೆ ತಿಳಿದಿದೆ.ಮುಂದಿನ ಚುನಾವಣೆಯಲ್ಲಿತಕ್ಕಪಾಠ ಕಲಿಸುತ್ತಾರೆ.ವಿಶ್ವದ ಅನೇಕ ರಾಷ್ಟ್ರಗಳ ಅಭದ್ರತೆಯಲ್ಲಿರುವಾಗ ಪ್ರಧಾನಿ ಮೋದಿಯವರ ಆಡಳಿತದಿಂದಾಗಿ ಭಾರತ ಸುಭದ್ರವಾಗಿದೆ.ಸರ್ಕಾರದಉತ್ತಮ ಆಡಳಿತ ಸಹಿಸದಕಾಂಗ್ರೆಸ್ ದೇಶದ್ರೋಹಿಗಳ ಜೊತೆ ಸೇರಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳು ಮಾಡುತ್ತಿದೆಎಂದು ಟೀಕಿಸಿದರು.
ನೀಟ್ ಪರೀಕ್ಷೆ ವಿಚಾರವಾಗಿ ದೆಹಲಿಯಲ್ಲಿ ನಡೆಯುತ್ತಿರುವ ಪರೀಕ್ಷೆಯಲ್ಲಿ ಕೆಲವೇ ವಿದ್ಯಾರ್ಥಿಗಳಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಗೂಂಡಾಗಳು ಸೇರಿಕೊಂಡಿದ್ದಾರೆ.ಕಾಂಗ್ರೆಸ್ ಪಕ್ಷ ಅವರಿಗೆ ಬೆಂಬಲವಾಗಿ ನಿಂತಿರುವುದು ದುರಾದೃಷ್ಟಕರ, ಇದು ಕಾಂಗ್ರೆಸ್ನ ಅವಸಾನ. ಇದನ್ನೇ ನೆಪ ಮಾಡಿಕೊಂಡು ಕಾಂಗ್ರೆಸ್ ದೇಶದಲ್ಲಿ ಗಲಭೆ ಎಬ್ಬಿಸಲು ಹೊರಟಿದೆ.ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಮೇಲೆ ಕಾಂಗ್ರೆಸ್ನವರು ಹಲ್ಲೆಮಾಡಿದ್ದಾರೆ, ಮೊಟ್ಟೆ ಎಸೆದಿದ್ದಾರೆ.ಇದು ಖಂಡನೀಯ, ಬಿಜೆಪಿ ಸಹಿಸುವುದಿಲ್ಲ ಎಂದು ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷಎಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ಕಾಂಗ್ರೆಸ್ ಪಕ್ಷ ಅವಸಾನದ ಅಂಚಿನಲ್ಲಿದೆ. ದೇಶದಲ್ಲಿ ಕೇವಲ ಮೂರು ಕಡೆಕಾಂಗ್ರೆಸ್ ಆಡಳಿತದಲ್ಲಿದೆ.ಉತ್ತಮ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿಯವರ ವರ್ಚಸ್ಸು ಕಳೆಯಲು, ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ದೇಶದ್ರೋಹಿಗಳೊಂದಿಗೆ ಸೇರಿ ಗಲಭೆ ಮಾಡಲು ಹೊರಟಿದೆ.ಮೋದಿ ಸರ್ಕಾರ ಇದಕ್ಕೆ ಅವಕಾಶ ನೀಡುವುದಿಲ್ಲ. ಗಲಭೆಕೋರರನ್ನು ಮಟ್ಟಹಾಕುತ್ತದೆ ಎಂದು ಹೇಳಿದರು.
ಟಿ.ಹೆಚ್. ಹನುಮಂತರಾಜು, ಧನುಷ್, ವಿನಯ್ಜೈನ್, ಮುಖಂಡರಾದ ಸತ್ಯಮಂಗಲಜಗದೀಶ್, ಕೆ.ವೇದಮೂರ್ತಿ, ನವಚೇತನ್, ಬಂಬೂಮೋಹನ್, ಪ್ರೀತಂಜೈನ್, ವಿರೂಪಾಕ್ಷಪ್ಪ, ಸಿ.ಎನ್. ರಮೇಶ್, ಮಲ್ಲಿಕಾರ್ಜುನ್, ಪುಟ್ಟರಾಜು, ಹನುಮಂತರಾಜು, ರೇಖಾರಾಜ್, ಸಿದ್ಧಗಂಗಯ್ಯ, ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
