ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರ್ ಜೋಯಾಲುಕ್ಕಾಸ್, ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿರುವ ತನ್ನ ಶೋರೂಮ್ನಲ್ಲಿ ಜುಲೈ ೩೧, ೨೦೨೬ ರಿಂದ ಆಗಸ್ಟ್ ೧೬, ೨೦೨೬ರ ವರೆಗೆ “ಬ್ರಿಲಿಯನ್ಸ್ ವಜ್ರಾಭರಣ ಪ್ರದರ್ಶನ”ದ ಮೂಲಕ ನಗರವಾಸಿಗಳನ್ನು ಮಂತ್ರಮುಗ್ಧಗೊಳಿಸಲು ಸಜ್ಜಾಗಿದೆ. ಈ ವಿಶೇಷ ಪ್ರದರ್ಶನವು ವಜ್ರಾಭರಣಗಳಲ್ಲಿನ ಕಲಾತ್ಮಕತೆ, ಸೊಬಗು ಮತ್ತು ನಾವೀನ್ಯತೆಯ ಅಸಾಧಾರಣ ಸಂಗಮವನ್ನು ಅನಾವರಣಗೊಳಿಸಲಿದೆ.
ಭವ್ಯವಾದ ವೈವಾಹಿಕ ಆಭರಣಗಳಿಂದ ಹಿಡಿದು ದೈನಂದಿನ ಬಳಕೆಗೆ ಸೂಕ್ತವಾದ ಅತ್ಯಾಧುನಿಕ ವಿನ್ಯಾಸಗಳವರೆಗೆ ವೈವಿಧ್ಯಮಯ ಶ್ರೇಣಿಯನ್ನು ಒಳಗೊಂಡಿರುವ ಈ ಪ್ರದರ್ಶನವು, ಸಾಂಪ್ರದಾಯಿಕ ಕರಕುಶಲತೆ ಮತ್ತು ಆಧುನಿಕ ಅಭಿರುಚಿಯ ಸಮ್ಮಿಲನವಾಗಿದೆ. ಇಲ್ಲಿನ ಪ್ರತಿಯೊಂದು ಆಭರಣವೂ ಅತ್ಯುತ್ತಮ ವಿನ್ಯಾಸ ಮತ್ತು ಸೂಕ್ಷ್ಮ ಕಲಾಕೌಶಲವನ್ನು ಪ್ರತಿಬಿಂಬಿಸುತ್ತದೆ; ಇವು ಪ್ರದರ್ಶನದ ಅವಧಿಯಲ್ಲಿ ಮಾತ್ರ ಲಭ್ಯವಿರುತ್ತವೆ.
ಈ ಸಂದರ್ಭದಲ್ಲಿ ಮಾತನಾಡಿದ ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಜೋಯ್ ಆಲುಕ್ಕಾಸ್ ಅವರು, “‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’ ನಮ್ಮ ಶ್ರೇಷ್ಠತೆಯ ಬದ್ಧತೆ ಹಾಗೂ ಸೊಬಗು ಮತ್ತು ವಿಶಿಷ್ಟತೆಯನ್ನು ಸಾರುವ ಆಭರಣಗಳನ್ನು ರೂಪಿಸುವ ನಮ್ಮ ಉತ್ಸಾಹದ ಸಂಕೇತವಾಗಿದೆ. ಬೆಂಗಳೂರು ನಮಗೆ ಯಾವಾಗಲೂ ವಿಶೇಷವಾದ ನಗರವಾಗಿದೆ. ನಮ್ಮ ಗ್ರಾಹಕರಿಗೆ ಅತ್ಯಂತ ಆಕರ್ಷಕ ಮತ್ತು ಪ್ರಕಾಶಮಾನವಾದ ವಜ್ರಗಳ ಸ್ವರೂಪಗಳನ್ನು ಅನುಭವಿಸಲು ಅವಕಾಶ ಕಲ್ಪಿಸುವ ಈ ವಿಶೇಷ ಸಂಗ್ರಹವನ್ನು ಪ್ರಸ್ತುತಪಡಿಸಲು ನಮಗೆ ಸಂತೋಷವಾಗುತ್ತಿದೆ” ಎಂದು ಹೇಳಿದರು.
ಪ್ರದರ್ಶನದ ಆಕರ್ಷಣೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಈ ಅವಧಿಯಲ್ಲಿ ೧ ಲಕ್ಷ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರಾಭರಣ ಖರೀದಿಸುವ ಗ್ರಾಹಕರಿಗೆ ಉಚಿತ ಚಿನ್ನದ ನಾಣ್ಯ ನೀಡಲಾಗುತ್ತದೆ, ಇದು ಈ ಸಂಭ್ರಮವನ್ನು ಇನ್ನಷ್ಟು ಲಾಭದಾಯಕವಾಗಿಸುತ್ತದೆ.
`ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’ ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿರುವ ಜೋಯಾಲುಕ್ಕಾಸ್ ಶೋರೂಮ್ನಲ್ಲಿ ಆಗಸ್ಟ್ ೧೬, ೨೦೨೬ರ ವರೆಗೆ ನಡೆಯಲಿದೆ. ಐಷಾರಾಮಿ, ಅಭಿವ್ಯಕ್ತಿ ಮತ್ತು ಕಾಲಾತೀತ ಸೌಂದರ್ಯ ಪ್ರತಿಬಿಂಬಿಸುವ ವಜ್ರಗಳ ಅದ್ಭುತ ಜಗತ್ತನ್ನು ಕಣ್ತುಂಬಿಕೊಳ್ಳಲು ಆಭರಣಪ್ರಿಯರು ಮತ್ತು ಗ್ರಾಹಕರನ್ನು ಇಲ್ಲಿಗೆ ಆಹ್ವಾನಿಸಲಾಗಿದೆ.
