ಚನ್ನರಾಯಪಟ್ಟಣ, ಆ.4: ಚನ್ನರಾಯಪಟ್ಟಣ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಪ್ರಕಾಶ್ ಅವರನ್ನು ಪುರಸಭೆಯ ನಿಕಟ ಪೂರ್ವ ಮುಖ್ಯಾಧಿಕಾರಿ ಹೇಮಂತ್ ಕುಮಾರ್ ಹಾಗೂ ಜೆಡಿಎಸ್ ಯುವ ಮುಖಂಡ ಗೂರನಹಳ್ಳಿ ಶ್ರೀಧರ್ ಅಭಿನಂದಿಸಿ ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ನೂತನ ಮುಖ್ಯಾಧಿಕಾರಿ ಪ್ರಕಾಶ್ ಅವರಿಗೆ ಶುಭ ಹಾರೈಸಿದ ಅವರು, ಪುರಸಭೆಯ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ಹಾರೈಸಿದರು.

ಅಧಿಕಾರ ಸ್ವೀಕಾರದ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಪುರಸಭೆಯ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿದರು.
– ಮಂಜುನಾಥ್ ಐ.ಕೆ.
