ಚನ್ನರಾಯಪಟ್ಟಣ ತಾಲೂಕು ದಂಡಿಗನಹಳ್ಳಿ ಹೋಬಳಿ ಸರ್ಕಾರಿ ಪ್ರೌಢಶಾಲೆ,ಆನೇಕೆರೆ ಇಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಗ್ರಾಮಸ್ಥರ ನೆರವಿನಿಂದ ಶಾಲಾ ಮಕ್ಕಳ ಕಲಿಕೆಯ ಅನುಕೂಲಕ್ಕೋಸ್ಕರ ಅಂತರ್ಜಾಲ ವ್ಯವಸ್ಥೆಗಾಗಿ ವೈಫೈ ಕೊಡುಗೆ ನೀಡಿದರು.
ಇದೇ ಸಂದರ್ಭದಲ್ಲಿ ದಾನಿಗಳಾದ ಅಣ್ಣಪ್ಪ ಸ್ವಾಮಿ ಅವರು ಮಕ್ಕಳ ಕಲಿಕೆಗೆ ಅನುಕೂಲವಾಗುವಂತ ಯಾವುದೇ ಸಹಕಾರಕ್ಕೂ ನಾವು ಸಿದ್ಧವಿದ್ದೇವೆ ಜೊತೆಗೆ ಈಗಿನ ಅಂತರ್ಜಾಲ ಯುಗದಲ್ಲಿ ಮಕ್ಕಳ ಕಲಿಕೆಗೆ ವೈಫೈ ತುಂಬಾ ಅವಶ್ಯಕತೆ ಇದೆ ಎಂದು ತಿಳಿಸಿದರು.

ಎಸ್ ಡಿ ಎಂ ಸಿ ಅಧ್ಯಕ್ಷರಾದ ನಂಜುಂಡಸ್ವಾಮಿ ರವರು ನಮ್ಮ ಸರ್ಕಾರಿ ಶಾಲೆಯಲ್ಲಿ ಸಿಗುವ ಎಲ್ಲಾ ಅನುಕೂಲಗಳನ್ನು ಉತ್ತಮವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಏರಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷರು.ಸದಸ್ಯರು. ಹಾಗೂ ಗ್ರಾಮಸ್ಥರಾದ ಅವಿನಾಶ್, ಬಸವರಾಜು,ಗುರು, ಮಂಜುಳ, ಬಾಲರಾಜು ಹಾಗೂ ಡಯಟ್ ಉಪನ್ಯಾಸಕರಾದ ಶ್ರೀಮತಿ ಜಯಂತಿ ಜೆ ಸಿ. ಶಾಲೆಯ ಮುಖ್ಯ ಗುರುಗಳು. ಸಹ ಶಿಕ್ಷಕರು. ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
– ಮಂಜುನಾಥ್ ಐ.ಕೆ.
