ತುಮಕೂರು: ತುಮಕೂರಿನ ಹನುಮಂತಪುರದಲ್ಲಿರುವ ಶ್ರೀ ಪೇಟೆಕೊಲ್ಲಾಪುರದಮ್ಮನವರ ಜಾತ್ರಾ ಮಹೋತ್ಸವವು ಭಕ್ತಿಭಾವದಿಂದ ನೆರವೇರಿತು.
ಜಾತ್ರೆಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್. ನಿಂಗಪ್ಪ ಹಾಗೂ ತುಮಕೂರು ನಿರ್ಮಿತಿ ಕೇಂದ್ರದ ನಿರ್ದೇಶಕ ಡಿ. ರಾಜಶೇಖರ್ ಭಾಗವಹಿಸಿ, ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ಭಕ್ತಿ ಸಮರ್ಪಿಸಿದರು. ಬಳಿಕ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಟಿ.ಎಲ್. ಕುಂಭಯ್ಯ, ಮಾಜಿ ಉಪಮೇಯರ್ ಟಿ.ಕೆ. ನರಸಿಂಹಮೂರ್ತಿ, ಮಾಜಿ ಪಾಲಿಕೆ ಸದಸ್ಯರಾದ ಎ. ಶ್ರೀನಿವಾಸ್ ಮತ್ತು ಎನ್.ಎಸ್. ಶಿವಣ್ಣ, ರವೀಶ್ ಜಾಂಗೀರ್, ರಕ್ಷಿತ್, ಜೆಡಿಎಸ್ ನಗರಾಧ್ಯಕ್ಷ ಟಿ.ಎಚ್. ಜಯರಾಂ, ದಾಂಡೇಲಿ ಗಂಗಣ್ಣ ಸೇರಿದಂತೆ ಹಲವು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ವಿಧಿವಿಧಾನಗಳು ಹಾಗೂ ವಿಶೇಷ ಪೂಜೆಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು.
– ಚಂದ್ರಚೂಡ ಕೆ.ಬಿ
