ತುಮಕೂರು: ಮೇಕೆದಾಟುಯೋಜನೆ ಅನುಷ್ಠಾನ ಆಗಬೇಕು ಎಂದು ಒತ್ತಾಯಿಸಿ ಪಾದಯಾತ್ರೆ ಮಾಡಿದ್ದ ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗ ನಿಮ್ಮದೇ ಸರ್ಕಾರವಿದೆ,ಯೋಜನೆ ಅನುಷ್ಠಾನಗೊಳಿಸಿ ಎಂದು ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜು ಒತ್ತಾಯಿಸಿದರು.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ಕಾವೇರಿ ನೀರು ಹಂಚಿಕೆ ವಿವಾದ, ಮೇಕೆದಾಟುಯೋಜನೆ ಅನುಷ್ಠಾನ,ಮಹದಾಯಿ, ಕಳಸಾ-ಬಂಡೂರಿಯೋಜನೆ, ಬೆಳಗಾವಿ ಗಡಿ ವಿವಾದ, ಎಂಇಎಸ್ ನಿಷೇಧ, ಖಾಸಗಿ ಹಾಗೂ ಸರ್ಕಾರಿ ರಂಗದಲ್ಲಿ ಕನ್ನಡಿಗರಿಗೆ ಉದ್ಯೋಗ, ಕನ್ನಡ ಶಾಲೆಗಳ ಉಳಿವು ಸೇರಿದಂತೆ ಸಮಸ್ಯೆಗಳನ್ನು ನೆಲ, ಜಲ, ನುಡಿ ಸಮಸ್ಯೆಗಳನ್ನು ಬಗೆಹರಿಸಲು ಕನ್ನಡಿಗರ ಹಕ್ಕುಗಳ ರಕ್ಷಣೆಗಾಗಿ ಈ ತಿಂಗಳ 13ರಂದು ಅಖಂಡ ಕರ್ನಾಟಕ ಬಂದ್ಕರೆ ನೀಡಲಾಗಿದೆ.ರಾಜ್ಯಾದ್ಯಂತ ಸುಮಾರು ಎರಡು ಸಾವಿರ ಸಂಘಟನೆಗಳು ಬಂದ್ ಬೆಂಬಲಿಸಿ ಹೋರಾಟದಲ್ಲಿ ಭಾಗವಹಿಸಲಿವೆ. ಅಂದುಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಸಂಪೂರ್ಣ ಬಂದ್ಆಚರಿಸಲಾಗುವುದು ಎಂದು ಹೇಳಿದರು.

ಕಾವೇರಿ ನೀರಿನ ವಿವಾದವನ್ನು ಸರ್ಕಾರ ಸಮರ್ಪಕವಾಗಿ ನಿವಾರಣೆ ಮಾಡುವ ಕಾಳಜಿ ತೋರಿಸುತ್ತಿಲ್ಲ. ಮೊನ್ನೆ ಸರ್ಕಾರಕರೆದ ಸರ್ವಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಒಬ್ಬೊಬ್ಬರು ಭಾಗವಹಿಸಿದ್ದು ದುರಾದೃಷ್ಟಕರ, ನಮ್ಮ ರಾಜಕಾರಣಿಗಳಿಗೆ ನಾಡಿನ ಬಗ್ಗೆ ಅದೆಷ್ಟು ಕಳಕಳಿ ಇದೆ ಎಂದು ಅರ್ಥವಾಗುತ್ತದೆ.ರಾಜಕೀಯ ಪಕ್ಷಗಳೇ ಏಕೆ ನಾಡಿನಲ್ಲಿ ಹಲವಾರು ಸಂಘ-ಸAಸ್ಥೆಗಳಿವೆ, ಅವುಗಳ ಪ್ರತಿನಿಧಿಗಳನ್ನು ಸಭೆಗೆ ಕರೆದು ಚರ್ಚಿಸಬಹುದಿತ್ತಲ್ಲವೆ ಎಂದು ಮುಖ್ಯಮಂತ್ರಿಗಳನ್ನು ಕೇಳಿದರು.
ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ಮೊದಲಿನಿಂದಲೂ ತಕರಾರು ಮಾಡುತ್ತಲೇ ಬಂದಿದೆ.ದೆಹಲಿಯಲ್ಲಿ ಕುಳಿತು ನಿರ್ಧಾರ ತೆಗೆದುಕೊಳ್ಳುವ ಕಾವೇರಿ ನೀರು ನಿರ್ವಹಣಾ ಸಮಿತಿಗೆ ಕೆಆರ್ಎಸ್ನಲ್ಲಿರುವ ನೈಜ ಪರಿಸ್ಥಿತಿ ಅರ್ಥವಾಗುತ್ತಿಲ್ಲ. ಕೃಷ್ಣರಾಜಸಾಗರ ಜಲಾಶಯದಲ್ಲಿ ಸಂಪೂರ್ಣ ನೀರುಖಾಲಿಯಾಗಿದ್ದು, ಮೈದಾನದಂತಾಗಿದೆ. ಇಂತಹ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಹರಿಸಲುಆದೇಶ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಧನಿಯಾ ಕುಮಾರ್, ಗಿರೀಶ್, ಆರ್.ಎನ್. ವೆಂಕಟಾಚಲ, ಅರುಣ್ಕುಮಾರ್, ಹೊಸಕೋಟೆ ನಟರಾಜು, ಮೀಸೆ ಸತೀಶ್, ರಕ್ಷಿತ್ಕರಿಮಣ್ಣೆ, ಬಸವರಾಜು, ಶೈಲೇಂದ್ರ, ವಿಠಲ್, ನಟರಾಜ್, ಶಬ್ಬೀರ್ಅಹ್ಮದ್, ಇಮ್ರಾನ್, ರಫಿಕ್ಅಹಮದ್ ಮೊದಲಾದವರು ಭಾಗವಹಿಸಿದ್ದರು.
– ಚಂದ್ರಚೂಡ ಕೆ.ಬಿ.
