ಹಾಸನ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ತಾಲೂಕು ಘಟಕ, ಮಹಿಳಾ ಘಟಕ ಹಾಗೂ ಮಹಾನಗರ ಪಾಲಿಕೆ ಘಟಕದ ಸಂಯುಕ್ತ ಆಶ್ರಯದಲ್ಲಿ ಫುಟ್ ಪಲ್ಸ್ ಥೆರಪಿ (Foot Pulse Therapy) ಶಿಬಿರಕ್ಕೆ ಗುರುವಾರ ಶಾಂತಿನಗರದ ಉಮಾಮಹೇಶ್ವರಿ ಸಮುದಾಯ ಭವನದಲ್ಲಿ ಚಾಲನೆ ನೀಡಲಾಯಿತು.
ಶಿಬಿರವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಾಟೀಲ್, ಮಹಾನಗರ ಪಾಲಿಕೆ ಘಟಕದ ಅಧ್ಯಕ್ಷ ರೋಹಿತ್ ಹಾಗೂ ಸಹ ಕಾರ್ಯದರ್ಶಿ ವಿಕಾಸ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ನಿರ್ದೇಶಕರಾದ ಇಂದಿರಾ ಸತೀಶ್, ಸುಶೀಲ, ಅನಸೂಯಾ, ಮಾಲಾ ಸೇರಿದಂತೆ ಮಹಾಸಭೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಶಿಬಿರದ ಮೊದಲ ದಿನವೇ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೇವೆಯ ಪ್ರಯೋಜನ ಪಡೆದರು.
ಶಿಬಿರವು ಆಗಸ್ಟ್ 19, 2026ರವರೆಗೆ ನಡೆಯಲಿದ್ದು, ಆರೋಗ್ಯದ ಬಗ್ಗೆ ಆಸಕ್ತಿ ಹೊಂದಿರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.
