ಹಾಸನ, ಆ.6: ಹಾಸನದ ಉತ್ತರ ಬಡಾವಣೆಯಲ್ಲಿ 2007ರಲ್ಲಿ ಸ್ಥಾಪಿತವಾದ ನಾಟ್ಯಕಲಾ ನಿವಾಸ್ ಸಂಸ್ಥೆಯ 19ನೇ ವರ್ಷದ ವಾರ್ಷಿಕೋತ್ಸವವು ಆಗಸ್ಟ್ 8ರಂದು (ಶನಿವಾರ) ಸಂಜೆ 4 ಗಂಟೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮೈಸೂರು ವಾಗ್ಗೇಯಕಾರರ ವಿಶೇಷ ರಚನೆಗಳನ್ನು ಆಧರಿಸಿದ ಭರತನಾಟ್ಯ ಪ್ರದರ್ಶನಗಳು ಪ್ರೇಕ್ಷಕರ ಮನಸೂರೆಗೊಳ್ಳಲಿವೆ.
ವೇದಿಕೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಿ.ಡಿ. ಚಂದನದ ಕಾರ್ಯಕ್ರಮ ಮುಖ್ಯಸ್ಥೆ ಶ್ರೀಮತಿ ಹೆಚ್.ಎನ್. ಆರತಿ, ಕನ್ನಡ ಚಲನಚಿತ್ರರಂಗದ ಪೋಷಕ ನಟ ಶ್ರೀ ಸುಂದರ್ ವೀಣಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಸನ ಸಹಾಯಕ ನಿರ್ದೇಶಕ ಹೆಚ್.ಪಿ. ತಾರಾನಾಥ್ ಹಾಗೂ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ನ ಜಂಟಿ ಕಾರ್ಯದರ್ಶಿ ಶ್ರೀಮತಿ ಸೋಫಿಯಾ ಪೆರ್ನಂಡೀಸ್ ಭಾಗವಹಿಸಲಿದ್ದಾರೆ.

ನಾಟ್ಯಕಲಾ ನಿವಾಸ್ನ ಕಲಾ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಶ್ರೀ ವಿದ್ವಾನ್ ಉನ್ನತ್ ಹೆಚ್.ಆರ್. ಕಾರ್ಯಕ್ರಮದ ರೂವಾರಿಯಾಗಿದ್ದು, ರತ್ನಕಲಾ ಪದ್ಮ ಕುಟೀರ ಟ್ರಸ್ಟ್ನ ಟ್ರಸ್ಟಿ ಶ್ರೀ ಹೆಚ್.ಬಿ. ರತ್ನರಾಜು ಉಪಸ್ಥಿತರಿರುವರು.
ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಭರತನಾಟ್ಯ ಪ್ರದರ್ಶನವನ್ನು ವೀಕ್ಷಿಸಿ ಪ್ರೋತ್ಸಾಹಿಸುವಂತೆ ನಾಟ್ಯಕಲಾ ನಿವಾಸ್ನ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಶ್ರೀ ವಿದ್ವಾನ್ ಉನ್ನತ್ ಹೆಚ್.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
