ತುಮಕೂರು:ಧಾರ್ಮಿಕ ಮುಖಂಡರಾದ ಸನ್ಯಾಸಿಗಳು ಕೇವಲ ಪೂಜೆ,ಪುನಸ್ಕಾರಗಳಲ್ಲಿ ಮಾತ್ರ ತೊಡಗಿಕೊಳ್ಳದೆ,ಇಂತಹ ರೈತ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಯುವ ರೈತರು ಸಾವಯುವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಣೆ ನೀಡಬೇಕಾಗಿದೆ ಎಂದು ವಿಶ್ವಒಕ್ಕಲಿಗರ ಸಂಸ್ಥಾನ ಮಠದ ಡಾ.ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಟೌನ್ಹಾಲ್ ಮುಂಭಾಗದಲ್ಲಿ ದೊಡ್ಡಹೊಸೂರಿನ ರೈತರ ಸತ್ಯಾಗ್ರಹದ ಎರಡನೇ ದಿನ ಕ್ರಾಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ರೈತರ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಪೂಜೆಗಳು ಮನಸ್ಸಿಗೆ ಶಾಂತಿ ನೀಡಿದರೆ,ಇಂತಹ ಕಾರ್ಯಕ್ರಮಗಳು ದೇಶದಲ್ಲಿ ಸಮೃದ್ಧಿ ತರಲಿವೆ.ಹಾಗಾಗಿ ಸ್ವಾಮೀಜಿಗಳು ಸಹ ಕೃಷಿಕರನ್ನು ಪ್ರೋತ್ಸಾಹಿಸುವುದನ್ನು ತಮ್ಮ ದೈನಂದಿನ ಚಟುವಟಿಕೆಯ ಭಾಗವಹಿಸಿಕೊಳ್ಳುವ ಅಗತ್ಯವಿದೆಎಂದರು.
ರೈತರು ಮಣ್ಣಿನ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ದೊಡ್ಡ ಹೊಸೂರಿನ ಗಾಂಧಿ ಸಹಜ ಬೇಸಾಯ ಆಶ್ರಮದಲ್ಲಿ ಕೈಗೊಂಡಿರುವ ಹಲವಾರು ಕ್ರಮಗಳನ್ನು ಅನುಸರಿಸಿದರೆ ಜನರಿಗೆ ವಿಷ ಮುಕ್ತ ಆಹಾರ ನೀಡುವುದರ ಜೊತೆಗೆ, ಅದಾಯವನ್ನು ಗಳಿಸಲು ಅವಕಾಶವಿದೆ.ಯುವಜನರು ಇಂತಹ ತೋಟಗಳಿಗೆ ಭೇಟಿ ನೀಡಿ,ಇಲ್ಲಿ ಅನುಸರಿಸುತ್ತಿರುವ ವಿಧಿ ವಿಧಾನಗಳನ್ನು ಕಲಿತು,ತಮ್ಮ ಹೊಲ, ಗದ್ದೆಗಳಲ್ಲಿ ಅಳವಡಿಸಿ ಕೊಂಡರೆ ಸಾವಯವ ಕೃಷಿ ಮತ್ತಷ್ಟು ಉತ್ತುಂಗಕ್ಕೆ ತೆಗೆದುಕೊಂಡು ಹೋಗಬಹುದು.ಮಣ್ಣು ಮತ್ತು ನೀರು ಕಲುಷಿತವಾಗದಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ.ಆ ಮೂಲಕ ದೇಹಕಲುಷಿತವಾಗದಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ ಎಂದು ಡಾ.ಶ್ರೀನಿಶ್ಚಲಾನಂದ ಸ್ವಾಮೀಜಿ ತಿಳಿಸಿದರು.
ಚಿಕ್ಕನಾಯಕನಹಳ್ಳಿಯ ಇಮ್ಮಡಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ,ಆಸೆ ಬಿದ್ದರೈತ ಕೃಷಿಗೆ ಬೇಕಾದ ಮಣ್ಣು ಮತ್ತು ನೀರನ್ನು ಕುಲುಷಿತಗೊಳಿಸಿಕೊಂಡಿದ್ದಾನೆ.ಇದರ ಜೊತೆಗೆ ರೈತರ ಫಲವತ್ತಾದ ಭೂಮಿ ಕೈಗಾರಿಕೆ, ರಸ್ತೆ, ಕಾರಿಡಾರ್, ರಿಂಗ್ರಸ್ತೆ ಹೆಸರಿನಲ್ಲಿ ಬಂಡವಾಳಶಾಹಿಗಳ ಪಾಲಾಗುತ್ತಿರುವುದು ವಿಷಾದದ ಸಂಗತಿಯಾಗಿದೆ.ವ್ಯಾಪಾರಕ್ಕೆ ಬಂದ ಬ್ರಿಟಿಷರು ಭಾರತವನ್ನು 200 ವರ್ಷಗಳ ಕಾಲ ಆಳಿದರು. ಇಂದು ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಭೂಮಿ ಮತ್ತು ನೀರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗಿವೆ. ಇದಕ್ಕೆ ನಾವು ಎಂದಿಗೂ ಅವಕಾಶ ಮಾಡಿಕೊಡಬಾರದು.ಡಾ.ಮಂಜುನಾಥ್ ಅವರು ಈ ನಿಟ್ಟಿನಲ್ಲಿರೈತರನ್ನುಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.ಈ ಮಣ್ಣಿನ ಮೇಲೆ ಮನುಷ್ಯನಷ್ಟೇಅಲ್ಲ, ಗಿಡ, ಮರ, ಪ್ರಾಣಿ ಪಕ್ಷಗಳಿಗೂ ಹಕ್ಕಿದೆ.ಬುದ್ದಿವಂತನಾದ ಮನುಷ್ಯ ಅವುಗಳನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ನೀಡುವ ಕೆಲಸ ಮಾಡಬೇಕು.ಈ ನಿಟ್ಟಿನಲ್ಲಿಎಲ್ಲರೂಇಂತಹ ಹೋರಾಟಗಳಿಗೆ ಕೈಜೋಡಿಸಬೇಕೆಂದರು.
ಪ್ರತಿಭಟನೆಯಲ್ಲಿ ಎ.ಗೋವಿಂದರಾಜು ಚಿಕ್ಕನಾಯಕನಹಳ್ಳಿಯ ಶ್ರೀಮೃತ್ಯುಂಜನ ದೇಶಿಕೇಂದ್ರ ಸ್ವಾಮೀಜಿ, ಸಿ.ಯತಿರಾಜು, ಕೃಷಿ ವಿಜ್ಞಾನಿ ಡಾ.ಮಂಜುನಾಥ್, ರವೀಶ್, ಚಿಕ್ಕಬೋರೇಗೌಡ,ಗುಬ್ಬಿ ಲೋಕೇಶ್, ನಂದಿಹಳ್ಳಿ ಉದಯಕುಮಾರ್, ರಮೇಶ, ನಿಂಗರಾಜು, ರಾಜಶೇಖರ್,ಸುರೇಶ್ ಕೃಷಿ ವಿಜ್ಞಾನಿಗಳು, ಯುವರೈತರು,ರೈತ ಮಹಿಳೆಯರು ಪಾಲ್ಗೊಂಡಿದ್ದರು.
* ಚಂದ್ರಚೂಡ ಕೆ.ಬಿ.
