ಗದಗ: ‘ಕಾಮನ್ ಮ್ಯಾನ್ ನಾನೇ ಸಿಎಂ’ ಕನ್ನಡ ಚಲನಚಿತ್ರದ ಪೋಸ್ಟರ್ನ್ನು ಗದಗ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಬಿಡುಗಡೆ ಮಾಡಲಾಯಿತು.
ಕದಂಬ ಸೈನ್ಯ ಕನ್ನಡ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುರಭಿ ಫಿಲಂಸ್ ಸಂಸ್ಥಾಪಕ ಹಾಗೂ ಅಧ್ಯಕ್ಷ, ಚಿತ್ರದ ಕಥೆಗಾರ ಮತ್ತು ನಿರ್ಮಾಪಕ ಡಾ. ಎನ್. ನರಸಿಂಹಮೂರ್ತಿ, ಬೆಂಗಳೂರು ಅವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು. ಚಲನಚಿತ್ರ ನಟಿ ಕು. ಸೋನಾ ಲದ್ವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ರಾಜ್ಯ ಸಮಿತಿ ಸದಸ್ಯರಾದ ಅಪ್ಪಣ್ಣ, ಬಶೆಟ್ಟೆಪ್ಪ, ನೂರಂದಪ್ಪ, ಹುಂಡೇಕಾರ ಬನಶಂಕರಿ, ಲಕ್ಷ್ಮಣ್ ಎಲೆಕೇರಿ, ಚನ್ನಪಟ್ಟಣ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಚಿತ್ರದ ಕಥಾವಸ್ತು, ಉದ್ದೇಶ ಹಾಗೂ ನಿರ್ಮಾಣದ ಕುರಿತು ಡಾ. ಎನ್. ನರಸಿಂಹಮೂರ್ತಿ ಅವರು ವಿವರಿಸಿದರು. ಜನಸಾಮಾನ್ಯರ ಬದುಕು ಹಾಗೂ ಅವರ ಆಶಯಗಳನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರ ನಿರ್ಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
