ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕೊಡಮಾಡುವ ಸಾಹಿತಿ ಶ್ರೀ ರಾಂ.ಕೆ. ಹನುಮಂತಯ್ಯ ಹಾಗೂ ಹೆಬ್ಬಗೋಡಿ ಗೋಪಾಲಪ್ಪ ದತ್ತಿ ಪುಸ್ತಕ ಪ್ರಶಸ್ತಿಗೆ 2025–26ನೇ ಸಾಲಿನಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಆಹ್ವಾನಿಸಲಾಗಿದೆ.
ಕಥೆ, ಕಾವ್ಯ, ಕಾದಂಬರಿ ಹಾಗೂ ವಿಮರ್ಶೆ ಸೇರಿದಂತೆ ವಿವಿಧ ಪ್ರಕಾರಗಳ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರಕಾಶಕರು ಅಥವಾ ಲೇಖಕರು ತಮ್ಮ ಕಿರುಪರಿಚಯ ಹಾಗೂ ಭಾವಚಿತ್ರದೊಂದಿಗೆ ಪ್ರಕಟಿತ ಕೃತಿಯ ತಲಾ ಮೂರು ಪ್ರತಿಗಳನ್ನು ಸೆ.28, 2026ರ ಸೋಮವಾರ ಸಂಜೆ ಒಳಗಾಗಿ ಖುದ್ದಾಗಿ, ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಬೇಕು ಎಂದು ಟ್ರಸ್ಟ್ ತಿಳಿಸಿದೆ.
ಕೃತಿಗಳನ್ನು ಈ ವಿಳಾಸಕ್ಕೆ ಕಳುಹಿಸಬಹುದು:
ಡಾ. ಸಿಸಿರಾ,
ಕನ್ನಡ ಉಪನ್ಯಾಸಕರು,
ಶೇಷಾದ್ರಿಪುರಂ ಮೇನ್ ಪಿ.ಯು. ಕಾಲೇಜು,
ಬೆಂಗಳೂರು–560020.
ಮಾಹಿತಿಗಾಗಿ: 9448880985
ಸ್ಪರ್ಧೆಗೆ ಕಳುಹಿಸುವ ಕೃತಿಗಳು ಈ ಹಿಂದೆ ಯಾವುದೇ ಪ್ರಶಸ್ತಿ ಪಡೆದಿರಬಾರದು. ಅಲ್ಲದೆ, ಕೃತಿಗಳ ಆಯ್ಕೆಗಾಗಿ ಯಾವುದೇ ರೀತಿಯ ಶಿಫಾರಸು ಮಾಡಿಸಬಾರದು ಎಂದು ವಿಶೇಷ ಸೂಚನೆ ನೀಡಲಾಗಿದೆ.
ಆಯ್ಕೆಯಾದ ಕೃತಿಗಳ ಲೇಖಕರಿಗೆ ಅಕ್ಟೋಬರ್ 6, 2026ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೆನಪಿನ ಕಾಣಿಕೆ, ಶಾಲು, ಹಾರ, ಫಲಕ ಹಾಗೂ ಗೌರವಧನ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
