ಚಾಮರಾಜನಗರ:- ಗಡಿ ಭಾಗವಾದ ಚಾಮರಾಜನಗರ ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳು
ಜೀವಂತವಾಗಿಡುವಲ್ಲಿ ರಂಗತರಂಗ ಕಲಾವಿದರ ಪಾತ್ರ ಅನನ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ ಎಸ್ ರಾಜು ತಿಳಿಸಿದರು.
ಇಲ್ಲಿನ ಡಾ ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ರಂಗತರಂಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯುತ್ತಿರುವ 2 ದಿನಗಳ ರಂಗಾಯಣ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯು ಸಾಂಸ್ಕೃತಿಕವಾಗಿ ಸಮೃದ್ಧವಾಗಿದೆ. ಅದನ್ನು ಮುನ್ನಡೆಸುವ ಜವಾಬ್ದಾರಿ ಕಲಾವಿದರು ಮೇಲಿದೆ. ಇಲಾಖೆಯಿಂದ ಹತ್ತಾರು ಸೌಲಭ್ಯಗಳಿದ್ದು ಕಲಾವಿದರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರಂಗತರಂಗ ಟ್ರಸ್ಟ್ ಅಧ್ಯಕ್ಷ ಸೋಮಶೇಖರ ಬಿಸಲ್ವಾಡಿ ಮಾತನಾಡಿ ರಂಗತರಂಗ ಸಾಂಸ್ಕೃತಿಕ ಸಂಘಟನೆಯು ಕಳೆದ 34 ವರ್ಷಗಳಿಂದ ನಾಡಿನಾದ್ಯಂತ ಹೊತ್ತು ಹಲವು ಕಾರ್ಯಕ್ರಮ ಸಂಘಟಿಸಿ ಜನ ಮನ್ನಣೆ ಪಡೆದಿದೆ. 7 ನಾಟಕೋತ್ಸವ ಗೋಳನ್ನು ಸಂಘಟಿಸಿ ಹಲವು ಕಲಾವಿದರಿಗೆ ವೇದಿಕೆ ದೊರಕಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಸಿ ಪುಷ್ಪ ಸೋಮಸುಂದರ್, ಸುರೇಶ್ ನಾಡಿಗ್ ಹರದನಹಳ್ಳಿ, ಆರ್ ಮೂರ್ತಿ, ಎಂ.ಶಿವರಾಮು ಮುಂತಾದ ಹಿರಿಯ ಕಲಾವಿದರನ್ನು ರಂಗಗೌರವ ನೀಡಿ ಸನ್ಮಾನಿಸಲಾಯಿತು.
ಸತೀಶ್ ತಿಪಟೂರು ರಚನೆಯ ಮೈ ಫ್ಯಾಮಿಲಿ ನಾಟಕವನ್ನು ರಂಗಾಯಣ ಕಲಾವಿದರು ಅಭಿನಯಿಸಿದರು.
-ಶ್ರೀ ಸಾಯಿ ಎಸ್ ಮಂಜು
