ಕೆ.ಆರ್.ಪೇಟೆ,ಆ.17: ತಾಲ್ಲೂಕಿನ ಪ್ರತಿಷ್ಠಿತ ಸಂಸ್ಥೆಯಾಗಿರುವ ಟಿಎಪಿಸಿಎಂಎಸ್ನ ನೂತನ ಅಧ್ಯಕ್ಷರಾಗಿ ತಾಲ್ಲೂಕು ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಮಲ್ಲೇನಹಳ್ಳಿ ಎಂ.ಮೋಹನ್ ಅವರು ಅವಿರೋಧವಾಗಿ ಬಸ್ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಈ ಹಿಂದಿನ ಅಧ್ಯಕ್ಷರಾಗಿದ್ದ ತೆರ್ನೇನಹಳ್ಳಿ ಬಲದೇವ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ಸಂಘದ ಸಭಾಂಗಣದಲ್ಲಿ ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಜೆಡಿಎಸ್ ತಾಲ್ಲೂಕು ಘಟಕ ಅದ್ಯಕ್ಷರೂ ಆಗಿರುವ ಮಲ್ಲೇನಹಳ್ಖಿ ಎಂ.ಮೋಹನ್ ಅವರನ್ನು ಹೊರತು ಪಡಿಸಿದ ಬೇರೆ ಯಾವುದೇ ನಿರ್ದೇಶಕರು ನಾಮಪತ್ರ ಸಲ್ಲಿಸದೇ ಇರುವ ಕಾರಣ ಮಲ್ಲೇನಹಳ್ಖಿ ಮೋಹನ್ ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಎಸ್. ಬೋರೇಗೌಡ ಅವರು ಪ್ರಕಟಿಸಿದರು.
ಪ್ರತಿಷ್ಠಿತ ಟಿಎಪಿಸಿಎಂಎಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲೇನಹಳ್ಳಿ ಮೋಹನ್ ಅವರನ್ನು ಶಾಸಕ ಹೆಚ್.ಟಿ. ಮಂಜು ಅವರು ಅಭಿನಂದಿಸಿ ಮಾತನಾಡಿ ಸಂಸ್ಥೆಯ ಅಭಿವೃದ್ಧಿ ಹಾಗೂ ರೈತರ ಹಿತಾಸಕ್ತಿಗಾಗಿ ಮೋಹನ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಹೆಚ್.ಟಿ. ಮಂಜು ಸಲಹೆ ನೀಡಿದರು. ಟಿಎಪಿಸಿಎಂಎಸ್ ರೈತರು ಹಾಗೂ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಪ್ರಮುಖ ಸಂಸ್ಥೆಯಾಗಿದ್ದು, ಆಡಳಿತ ಮಂಡಳಿಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಾರದರ್ಶಕವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.

ನೂತನ ಅಧ್ಯಕ್ಷರ ನೇತೃತ್ವದಲ್ಲಿ ಸಂಸ್ಥೆ ಮತ್ತಷ್ಟು ಅಭಿವೃದ್ಧಿ ಹೊಂದಿ, ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿ ಎಂದು ಶುಭ ಕೋರಿದರು.
ನೂತನ ಅಧ್ಯಕ್ಷರಾದ ಎಂ. ಮೋಹನ್ ಮಾತನಾಡಿ ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಟಿಎಪಿಎಂಎಸ್ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿಯ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ರೈತರು, ಸದಸ್ಯರು ಹಾಗೂ ಸಾರ್ವಜನಿಕರಿಗೆ ಸಂಸ್ಥೆಯ ಸೇವೆಗಳು ಸುಲಭವಾಗಿ ದೊರೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ನೂತನ ಟಿಎಪಿಸಿಎಂಎಸ್ ಅಧ್ಯಕ್ಷರಾದ ಮಲ್ಲೇನಹಳ್ಳಿ ಮೋಹನ್ ಅವರನ್ನು ಉಪಾಧ್ಯಕ್ಷೆ ಲತಾಮಣಿಮಂಜೇಗೌಡ, ಟಿಎಪಿಸಿಎಂಎಸ್ ನಿರ್ದೇಶಕರಾದ ಹೆಚ್ ಟಿ ಲೋಕೇಶ್, ನಾಗರಘಟ್ಟ ಎನ್.ಕೆ.ದಿಲೀಪ್ಕುಮಾರ್, ಶೀಳನೆರೆ ಎಸ್.ಎಲ್.ಮೋಹನ್, ಕುರುಬಹಳ್ಳಿ ಕೆ.ಬಿ.ನಾಗೇಶ್, ಬೊಮ್ಮೇನಹಳ್ಳಿ ಮಂಜುನಾಥ್, ಅಗ್ರಹಾರಬಾಚಹಳ್ಳಿ ಜ್ಯೋತಿದೇವರಾಜು, ಕಿಕ್ಕೇರಿ ಮಧು, ಎಂ.ಪಿ.ಲೋಕೇಶ್, ವಿಜಯ್ ಕುಮಾರ್, ರಾಯಸಮುದ್ರ ತಮ್ಮಣ್ಣ, ಕೊರಟೀಕೆರೆ ದಿನೇಶ್, ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಬಂಡಿಹೊಳೆ ಕಾಯಿ ಮಂಜಣ್ಣ, ಹೆಳವೇಗೌಡ, ಮೆಣಸ ಮಹಾದೇವೇಗೌಡ, ಬೇಲದಕೆರೆ ನಂಜಪ್ಪ, , ಸಾಮಿಲ್ ರವಿಕುಮಾರ್, ರೇವಣ್ಣ, ಸಾರಂಗಿ ಸೊಸೈಟಿ ಅಧ್ಯಕ್ಷ ಎನ್.ಎಸ್.ನಾಗೇಶ್, ಸ್ನೇಕ್ ಮಂಜೇಗೌಡ, ಪುರಸಭಾ ಮಾಜಿ ಸದಸ್ಯ ಹೇಮಂತ್ ಕುಮಾರ್, ಹೋಬಳಿ ಲೋಕೇಶ್, ರಾಯಸಮುದ್ರ ಆರ್.ಟಿ.ಉಮೇಶ್, ಮೆಣಸ ಮಧು, ಅಗ್ರಹಾರಬಾಚಹಳ್ಳಿ ಲೋಕಿ, ಯೋಗೇಶ್,ಧರ್ಮಣ್ಣ ಸೇರಿದಂತೆ ಜೆಡಿಎಸ್ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಅಭಿನಂದಿಸಿದರು.
– ಶ್ರೀನಿವಾಸ ಆರ್.
