ತುಮಕೂರು: ತುಮಕೂರು ಗ್ರಾಮಾಂತರ ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ಅವರು ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ, ಹಿರಿಯ ವಕೀಲರು ಹಾಗೂ ಕಾಂಗ್ರೆಸ್ ಮುಖಂಡರಾದ ಹಿರೇಹಳ್ಳಿ ಮಹೇಶ್ ಅವರ ನೂತನ ಮನೆ **‘ಶ್ರೀಮಾತಾನಿಲಯ’**ದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಾಹುಲ್ ಗೌಡ, ಹಿರೇಹಳ್ಳಿ ಮಹೇಶ್, ಶ್ರೀಮತಿ ಭವ್ಯ.ಸಿ., ಕು. ಹಿಂದುಜಾ, ಕು. ಅಶ್ವಿನಿ, ತನ್ವೀರ್ ಸೇರಿದಂತೆ ಹಿರಿಯ ವಕೀಲರಾದ ಹಾಲನೂರು ಅನಂತ್ ಕುಮಾರ್, ಚಂದ್ರು, ರಂಗಯ್ಯ, ಸಿದ್ದಪ್ಪ, ನಾಗಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
