.ತವಾಂಗ್, ಆಗಸ್ಟ್ 26: ಅರುಣಾಚಲ ಪ್ರದೇಶದಲ್ಲಿ ಸೂರ್ಯಕಾಂತಿ ಕುಟುಂಬಕ್ಕೆ ಸೇರಿದ ಹೊಸ ಸಸ್ಯ ಪ್ರಭೇದವನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಈ ಹೊಸ ಪ್ರಭೇದಕ್ಕೆ ಡೊರೋನಿಕಮ್ ಸ್ಯಾಂಕ್ಟಮ್ (Doronicum sanctum) ಎಂದು ಹೆಸರಿಡಲಾಗಿದೆ.
ಹಿಮಾಚಲ ಪ್ರದೇಶದ ಸಿಎಸ್ಐಆರ್-ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಬಯೋರೆಸೋರ್ಸ್ ಟೆಕ್ನಾಲಜಿ (CSIR-IHBT) ಸಂಶೋಧಕರು ಈ ಸಸ್ಯವನ್ನು ಗುರುತಿಸಿದ್ದು, ಆಗಸ್ಟ್ 11, 2026ರಂದು ಸ್ಪ್ರಿಂಗರ್ ನೇಚರ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಇದನ್ನು ಅಧಿಕೃತವಾಗಿ ವಿವರಿಸಲಾಗಿದೆ.
ಈ ಸಸ್ಯವು ಡೊರೋನಿಕಮ್ (Doronicum) ಕುಲಕ್ಕೆ ಸೇರಿದ್ದು, ಈಶಾನ್ಯ ಭಾರತದಲ್ಲಿ ದಾಖಲಾಗಿರುವ ಈ ಕುಲದ ಮೊದಲ ಪ್ರಭೇದ ಎಂಬ ವಿಶೇಷತೆ ಹೊಂದಿದೆ. ಇದುವರೆಗೆ ಭಾರತದಲ್ಲಿ ಡೊರೋನಿಕಮ್ ಕುಲದ ಸಸ್ಯಗಳ ದಾಖಲೆಗಳು ಪಶ್ಚಿಮ ಹಿಮಾಲಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದವು.
ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಚುಮಿ ಗ್ಯಾತ್ಸೆ ಪವಿತ್ರ ಜಲಪಾತದ ಸಮೀಪ, ಸಮುದ್ರ ಮಟ್ಟದಿಂದ ಸುಮಾರು 4,000 ರಿಂದ 4,086 ಮೀಟರ್ ಎತ್ತರದಲ್ಲಿ ಈ ಸಸ್ಯ ಪತ್ತೆಯಾಗಿದೆ. ಹಳದಿ ಹೂವು, ಹೃದಯಾಕಾರದ ಎಲೆಗಳು ಹಾಗೂ ವಿಶಿಷ್ಟ ಸಸ್ಯರಚನೆಯ ಆಧಾರದ ಮೇಲೆ ಇದನ್ನು ಹೊಸ ಪ್ರಭೇದವಾಗಿ ಗುರುತಿಸಲಾಗಿದೆ.
ಲ್ಯಾಟಿನ್ ಭಾಷೆಯಲ್ಲಿ ‘ಸ್ಯಾಂಕ್ಟಮ್’ ಎಂದರೆ ‘ಪವಿತ್ರ’ ಎಂಬ ಅರ್ಥವಿದ್ದು, ಪವಿತ್ರ ಸ್ಥಳದ ಸಮೀಪ ಈ ಸಸ್ಯ ಪತ್ತೆಯಾದ ಹಿನ್ನೆಲೆಯಲ್ಲಿ ಈ ಹೆಸರು ನೀಡಲಾಗಿದೆ ಎಂದು ತಿಳಿದುಬಂದಿದೆ.
ತವಾಂಗ್, ಆಗಸ್ಟ್ 26: ಅರುಣಾಚಲ ಪ್ರದೇಶದಲ್ಲಿ ಸೂರ್ಯಕಾಂತಿ ಕುಟುಂಬಕ್ಕೆ ಸೇರಿದ ಹೊಸ ಸಸ್ಯ ಪ್ರಭೇದವನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಈ ಹೊಸ ಪ್ರಭೇದಕ್ಕೆ ಡೊರೋನಿಕಮ್ ಸ್ಯಾಂಕ್ಟಮ್ (Doronicum sanctum) ಎಂದು ಹೆಸರಿಡಲಾಗಿದೆ.