ನವದೆಹಲಿ, ಆಗಸ್ಟ್ 26: ಮೀನುಗಾರಿಆಗಸ್ಟ್ 25ರಂದು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾರತದ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಡಾ. ಅಭಿಲಕ್ಷ್ ಲಿಖಿ ಹಾಗೂ ಸೆಶೆಲ್ಸ್ನ ಮೀನುಗಾರಿಕೆ, ಕೃಷಿ ಮತ್ತು ನೀಲಿ ಆರ್ಥಿಕತೆ ಸಚಿವ ಎಚ್.ಇ. ವ್ಯಾಲೆಸ್ ಕಾಸ್ಗ್ರೋವ್ ನೇತೃತ್ವದ ನಿಯೋಗಗಳು ಭಾಗವಹಿಸಿದ್ದವು.ಕೆ, ಜಲಕೃಷಿ ಹಾಗೂ ನೀಲಿ ಆರ್ಥಿಕತೆಯ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಭಾರತ ಮತ್ತು ಸೆಶೆಲ್ಸ್ ದೇಶಗಳ ನಡುವೆ ಮಹತ್ವದ ದ್ವಿಪಕ್ಷೀಯ ಸಭೆ ನಡೆಯಿತು.
ಮೀನುಗಾರಿಕೆ ಮತ್ತು ಜಲಕೃಷಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಉಭಯ ದೇಶಗಳ ನಡುವೆ ಒಪ್ಪಂದ ಪತ್ರ (MoU) ರೂಪಿಸುವ ಕುರಿತು ಚರ್ಚೆ ನಡೆಯಿತು. ಸಮುದ್ರ ಜಲಕೃಷಿ (ಮೆರಿಕಲ್ಚರ್), ಆಧುನಿಕ ಹ್ಯಾಚರಿ ಅಭಿವೃದ್ಧಿ, ಟ್ಯೂನಾ ಮೀನುಗಾರಿಕೆಯ ಉತ್ತಮ ನಿರ್ವಹಣೆ ಹಾಗೂ ಮೀನು ಸಂಪತ್ತಿನ ವೈಜ್ಞಾನಿಕ ಮೌಲ್ಯಮಾಪನಕ್ಕೆ ವಿಶೇಷ ಆದ್ಯತೆ ನೀಡಲಾಯಿತು.
ಸಭೆಯಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಮೀನುಗಾರಿಕೆ ನಿರ್ವಹಣೆ, ಡಿಜಿಟಲ್ ಮೀನುಗಾರಿಕೆ ದತ್ತಾಂಶ ವ್ಯವಸ್ಥೆ ಹಾಗೂ ಆಧುನಿಕ ಮೇಲ್ವಿಚಾರಣೆ, ನಿಯಂತ್ರಣ ಮತ್ತು ನಿಗಾ ವ್ಯವಸ್ಥೆಗಳನ್ನು ಬಲಪಡಿಸುವ ಕುರಿತು ಚರ್ಚಿಸಲಾಯಿತು. ಉಭಯ ದೇಶಗಳ ಪ್ರಯೋಗಾಲಯಗಳಿಗೆ ಪರಸ್ಪರ ಪ್ರವೇಶ, ಜಂಟಿ ಪೈಲಟ್ ಯೋಜನೆಗಳು ಹಾಗೂ ವಾರ್ಷಿಕ ಕಾರ್ಯಯೋಜನೆಗಳನ್ನು ರೂಪಿಸುವ ಬಗ್ಗೆಯೂ ಸಮಾಲೋಚನೆ ನಡೆಯಿತು.
ನೀಲಿ ಆರ್ಥಿಕತೆಯಡಿ ಟ್ಯೂನಾ ಮೀನುಗಳ ಮೌಲ್ಯ ಸರಪಳಿಯನ್ನು ವಿಸ್ತರಿಸುವುದು, ಸಂಸ್ಕರಣಾ ಸಾಮರ್ಥ್ಯ ಹೆಚ್ಚಿಸುವುದು, ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ಅಭಿವೃದ್ಧಿ ಹಾಗೂ ಮೀನು ತ್ಯಾಜ್ಯದ ಸುಸ್ಥಿರ ನಿರ್ವಹಣೆಗೆ ಭಾರತ ಮತ್ತು ಸೆಶೆಲ್ಸ್ ಸಹಕಾರ ನೀಡಲು ಚರ್ಚಿಸಲಾಗಿದೆ.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಟ್ಯೂನಾ ಮೀನುಗಾರಿಕೆಗೆ ವಿಶೇಷ ಆರ್ಥಿಕ ಮಹತ್ವವಿದ್ದು, ಈ ಕ್ಷೇತ್ರದಲ್ಲಿ ಭಾರತ ಮತ್ತು ಸೆಶೆಲ್ಸ್ ನಡುವಿನ ಬಲಿಷ್ಠ ಸಹಕಾರವು ಮೀನುಗಾರಿಕೆ, ಸಮುದ್ರ ಸಂಪನ್ಮೂಲಗಳ ಸುಸ್ಥಿರ ಬಳಕೆ ಹಾಗೂ ನೀಲಿ ಆರ್ಥಿಕತೆಯ ಅಭಿವೃದ್ಧಿಗೆ ಹೊಸ ಉತ್ತೇಜನ ನೀಡುವ ನಿರೀಕ್ಷೆಯಿದೆ.
