ಬೆಂಗಳೂರು, ಆಗಸ್ಟ್ 22: ಬೆಂಗಳೂರಿನ ವಸತಿ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಪ್ರಮುಖ ಡೆವಲಪರ್ ಸಂಸ್ಥೆಗಳಲ್ಲಿ ಒಂದಾದ ಅಸೆಟ್ಜ್, ತನ್ನ ವಿನೂತನ ಪ್ರಾಪರ್ಟಿ ಪ್ರದರ್ಶನ ಮೇಳ ‘ಅಸೆಟ್ಜ್ ಅನ್ಲಾಕ್ 2026’ ಅನ್ನು ನಗರದಲ್ಲಿ ಆರಂಭಿಸಿದೆ. ಆಗಸ್ಟ್ 22 ಮತ್ತು 23ರಂದು ಎರಡು ದಿನಗಳ ಕಾಲ ಎಚ್ಎಸ್ಆರ್ ಲೇಔಟ್ ಸಮೀಪದ ಅಸೆಟ್ಜ್ ಮಿಜುಮಿ ರಿಸರ್ವ್ ಆವರಣದಲ್ಲಿ ಈ ಬೃಹತ್ ಪ್ರಾಪರ್ಟಿ ಎಕ್ಸ್ಪೋ ನಡೆಯುತ್ತಿದೆ.
ಮೇಳದಲ್ಲಿ ಅಸೆಟ್ಜ್ ಸಮೂಹದ ಏಳು ಪ್ರಮುಖ ವಸತಿ ಯೋಜನೆಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸಲಾಗಿದ್ದು, ಮನೆ ಖರೀದಿದಾರರು ವಿವಿಧ ಮಾದರಿಯ ವಸತಿ ಆಯ್ಕೆಗಳನ್ನು ನೇರವಾಗಿ ವೀಕ್ಷಿಸಿ, ಹೋಲಿಕೆ ಮಾಡಿ ತಮ್ಮ ಅಗತ್ಯಕ್ಕೆ ತಕ್ಕ ಮನೆಯನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ.
ಆಗ್ನೇಯ ಬೆಂಗಳೂರಿನ ಪ್ರಮುಖ ವಸತಿ ಕಾರಿಡಾರ್ಗಳಾದ ಎಚ್ಎಸ್ಆರ್ ಲೇಔಟ್ ಸಮೀಪ, ಹೊಸ ರಸ್ತೆ, ಸರ್ಜಾಪುರ ರಸ್ತೆ ಹಾಗೂ ಸರ್ಜಾಪುರ–ಅತ್ತಿಬೆಲೆ ರಸ್ತೆಗಳಲ್ಲಿ ನಿರ್ಮಾಣವಾಗುತ್ತಿರುವ ಐಷಾರಾಮಿ 3 ಮತ್ತು 4 ಬಿಎಚ್ಕೆ ಅಪಾರ್ಟ್ಮೆಂಟ್ಗಳು, ಲಕ್ಸುರಿ ನಿವೇಶನಗಳು ಹಾಗೂ ಪ್ರೀಮಿಯಂ ಗಾಲ್ಫ್-ವಿಲ್ಲಾ ಪ್ಲಾಟ್ಗಳು ಈ ಮೇಳದ ಪ್ರಮುಖ ಆಕರ್ಷಣೆಯಾಗಿವೆ.
ಮಿಜುಮಿ ರಿಸರ್ವ್, ಮೆಲೊಡೀಸ್ ಆಫ್ ಲೈಫ್ ಅಪಾರ್ಟ್ಮೆಂಟ್ಸ್, ರೆನ್ & ರೇಯ್, ಮ್ಯೂಸ್ & ಮೈಸನ್, ಟ್ರೀಸ್ & ಟ್ಯಾಂಡಮ್, ಮೆಲೊಡೀಸ್ ಆಫ್ ಲೈಫ್ ಪ್ಲಾಟೆಡ್ ಡೆವಲಪ್ಮೆಂಟ್ ಹಾಗೂ 18 & ಓಕ್ ಲಕ್ಸುರಿ ಗಾಲ್ಫ್ ವಿಲ್ಲಾ ಪ್ಲಾಟ್ಗಳು ಮೇಳದಲ್ಲಿ ಪ್ರದರ್ಶನಗೊಳ್ಳುತ್ತಿವೆ.
ಮೇಳಕ್ಕೆ ಭೇಟಿ ನೀಡುವ ಗ್ರಾಹಕರಿಗೆ ವಿಶೇಷ ದರಗಳು, ಆದ್ಯತೆಯ ಮನೆ ಆಯ್ಕೆಯ ಅವಕಾಶ ಹಾಗೂ ಸೀಮಿತ ಅವಧಿಯ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರಿಂದ ಗರಿಷ್ಠ ₹35 ಲಕ್ಷದವರೆಗೆ ಉಳಿತಾಯ ಮಾಡುವ ಅವಕಾಶವಿದೆ ಎಂದು ಸಂಸ್ಥೆ ತಿಳಿಸಿದೆ. ಜೊತೆಗೆ ಮುಂಚೂಣಿ ಬ್ಯಾಂಕಿಂಗ್ ಪಾಲುದಾರರಿಂದ ತ್ವರಿತ ಗೃಹ ಸಾಲ ಸೌಲಭ್ಯ ಹಾಗೂ ಹೊಂದಿಕೊಳ್ಳುವ ಪಾವತಿ ಯೋಜನೆಗಳನ್ನೂ ಒದಗಿಸಲಾಗಿದೆ.
ಯೋಜನೆಗಳ ಕುರಿತು ಗ್ರಾಹಕರಿಗೆ ಸಂಪೂರ್ಣ ಮಾಹಿತಿ ನೀಡಲು ಹಾಗೂ ಅವರ ಬಜೆಟ್ ಮತ್ತು ಅಗತ್ಯಗಳಿಗೆ ತಕ್ಕ ವಸತಿ ಆಯ್ಕೆ ಮಾಡಿಕೊಳ್ಳಲು ನೆರವಾಗುವ ಉದ್ದೇಶದಿಂದ ಅಸೆಟ್ಜ್ನ ಪ್ರಾಪರ್ಟಿ ತಜ್ಞರು ಎರಡು ದಿನಗಳ ಕಾಲ ಸ್ಥಳದಲ್ಲೇ ಲಭ್ಯವಿರಲಿದ್ದಾರೆ.
ಅಸೆಟ್ಜ್ ಸಂಸ್ಥೆಯ ಸೇಲ್ಸ್ ಮತ್ತು ಸಿಆರ್ಎಂ ವಿಭಾಗದ ನಿರ್ದೇಶಕ ರೋಹಿತ್ ಕಾರಿಯಪ್ಪ ಮಾತನಾಡಿ, “ಇಂದಿನ ಮನೆ ಖರೀದಿದಾರರು ಕೇವಲ ನಾಲ್ಕು ಗೋಡೆಗಳ ಮನೆಯನ್ನು ಮಾತ್ರ ಪರಿಗಣಿಸುವುದಿಲ್ಲ. ಉತ್ತಮ ಸ್ಥಳ, ಆಧುನಿಕ ವಿನ್ಯಾಸ, ವಿಶಾಲ ಸ್ಥಳಾವಕಾಶ, ಉತ್ತಮ ಸಮುದಾಯ, ಆರ್ಥಿಕ ಸಾಲ ಸೌಲಭ್ಯ, ಡೆವಲಪರ್ ಸಂಸ್ಥೆಯ ಮೇಲಿನ ವಿಶ್ವಾಸ ಹಾಗೂ ದೀರ್ಘಾವಧಿಯ ಹೂಡಿಕೆ ಮೌಲ್ಯ ಸೇರಿದಂತೆ ಹಲವು ಅಂಶಗಳು ಅವರ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ವಿವಿಧ ಸ್ಥಳಗಳಿಗೆ ತೆರಳಿ ಈ ಎಲ್ಲ ಅಂಶಗಳನ್ನು ಹೋಲಿಕೆ ಮಾಡುವುದು ಕಷ್ಟಕರವಾಗಬಹುದು. ‘ಅಸೆಟ್ಜ್ ಅನ್ಲಾಕ್’ ಮೂಲಕ ಈ ಎಲ್ಲ ಆಯ್ಕೆಗಳನ್ನು ಒಂದೇ ವೇದಿಕೆಗೆ ತಂದು, ಗ್ರಾಹಕರು ನಮ್ಮ ಯೋಜನೆಗಳನ್ನು ಸ್ಪಷ್ಟವಾಗಿ ಮೌಲ್ಯಮಾಪನ ಮಾಡಲು ಅನುಕೂಲ ಮಾಡಿಕೊಡುತ್ತಿದ್ದೇವೆ” ಎಂದು ಹೇಳಿದರು.
“ತಮ್ಮ ಕನಸಿನ ಮನೆ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳ, ಮಾಹಿತಿಪೂರ್ಣ ಹಾಗೂ ವಿವೇಕಯುತವಾಗಿಸುವುದೇ ನಮ್ಮ ಪ್ರಮುಖ ಉದ್ದೇಶವಾಗಿದೆ” ಎಂದು ಅವರು ತಿಳಿಸಿದರು.
ಎಚ್ಎಸ್ಆರ್ ಲೇಔಟ್ ಸಮೀಪದ ಮಿಜುಮಿ ರಿಸರ್ವ್ನಲ್ಲಿ ನಡೆಯುತ್ತಿರುವ ‘ಅಸೆಟ್ಜ್ ಅನ್ಲಾಕ್ 2026’ ಸಂಸ್ಥೆಯ ಮೊದಲ ಆವೃತ್ತಿಯ ಪ್ರಾಪರ್ಟಿ ಪ್ರದರ್ಶನವಾಗಿದೆ. ಮೇಳದಲ್ಲಿ ಪ್ರದರ್ಶಿಸಲಾಗಿರುವ ಎಲ್ಲಾ ಯೋಜನೆಗಳು ರೇರಾ ಅನುಮೋದಿತವಾಗಿವೆ ಎಂದು ಸಂಸ್ಥೆ ತಿಳಿಸಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ವಿವಿಧ ಪ್ರಮುಖ ಪ್ರದೇಶಗಳಲ್ಲಿಯೂ ಇಂತಹ ಪ್ರಾಪರ್ಟಿ ಮೇಳಗಳನ್ನು ಆಯೋಜಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.
ಅಸೆಟ್ಜ್ ಕುರಿತು
ಅಸೆಟ್ಜ್ ಬೆಂಗಳೂರಿನ ಪ್ರಮುಖ ವಸತಿ ಡೆವಲಪರ್ ಸಂಸ್ಥೆಗಳಲ್ಲಿ ಒಂದಾಗಿದ್ದು, ವಿನ್ಯಾಸ ಆಧಾರಿತ ಕಾರ್ಯವೈಖರಿ, ಪಾರದರ್ಶಕ ಆಡಳಿತ ಹಾಗೂ ಪರಿಸರ ಸ್ನೇಹಿ ಸುಸ್ಥಿರತೆಯತ್ತ ಗಮನಹರಿಸಿದೆ. ‘ಕ್ವಯಟ್ ಲಕ್ಸುರಿ’ ತತ್ತ್ವದಡಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ದೈನಂದಿನ ಜೀವನದ ಗುಣಮಟ್ಟ ಮತ್ತು ಸುಖ-ಸೌಕರ್ಯಗಳನ್ನು ಹೆಚ್ಚಿಸುವ ವಸತಿ ಸಮುದಾಯಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದೆ.
ಜಾಣ್ಮೆಯ ಒಳಾಂಗಣ ವಿನ್ಯಾಸ, ನೈಸರ್ಗಿಕ ಪರಿಸರ ಹಾಗೂ ಆಧುನಿಕ ಸೌಲಭ್ಯಗಳನ್ನು ಸಂಯೋಜಿಸಿದ ಮಾಸ್ಟರ್ ಪ್ಲಾನ್ಗಳ ಮೂಲಕ ಸಂಸ್ಥೆಯು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದೆ. ಅಸೆಟ್ಜ್ ಈವರೆಗೆ 65ಕ್ಕೂ ಅಧಿಕ ಯೋಜನೆಗಳು, 4.5 ಕೋಟಿಗೂ ಹೆಚ್ಚು ಚದರ ಅಡಿ ವಿಸ್ತೀರ್ಣ ಹಾಗೂ 22,000ಕ್ಕೂ ಹೆಚ್ಚು ವಸತಿ ಯುನಿಟ್ಗಳನ್ನು ಯಶಸ್ವಿಯಾಗಿ ನಿರ್ಮಿಸಿರುವುದಾಗಿ ತಿಳಿಸಿದೆ.
