ತುಮಕೂರು: ಸಹಕಾರಿ ತತ್ವದ ಮೇಲೆ ಜನಸಾಮಾನ್ಯರ ಆಶಯಕ್ಕೆ ತಕ್ಕಂತೆ ಇಂದು ಪತ್ತಿನ ಸೌಹಾರ್ದ ಸಹಕಾರಿ ಸಂಘಗಳು ಸಮಾಜದ ಎಲ್ಲಾ ವರ್ಗದ ಜನರಿಗೆ ಅವಶ್ಯಕತೆಗೆ ತಕ್ಕಂತೆ ಸಾಲವನ್ನು ಸುಲಭ ರೀತಿಯಲ್ಲಿ ತ್ವರಿತವಾಗಿ ನೀಡುತ್ತಿದ್ದು ದೇಶದ ಆರ್ಥಿಕತೆಗೆ ಭಾರೀ ಕೊಡುಗೆಯನ್ನು ನೀಡುತ್ತಿದೆ,ಬಡವರು,ಮಧ್ಯಮವರ್ಗದ ಜನರಿಗೆ ಅವರ ಮಕ್ಕಳ ಶಿಕ್ಷಣ,ಮದುವೆ,ಆರೋಗ್ಯ,ವಾಹನಗಳನ್ನು ಕೊಳ್ಳಲು,ನಿವೇಶನ,ಮನೆಕಟ್ಟಲು ಹೀಗೆ ನಾನಾ ರೀತಿಯ ಸಮಸ್ಯೆಗಳಿಗೆ ಸಾಲಗಳನ್ನು ನೀಡುತ್ತಿದ್ದು ಬ್ಯಾಂಕಿಂಗ್ ಕ್ಷೇತ್ರಕ್ಕೆ ತಮ್ಮದೇ ಕೊಡುಗೆಗಳನ್ನು ನೀಡುತ್ತಿದ್ದು ಭಾರತದ ಜಿಡಿಪಿಗೆ ಭಾರೀ ಕೊಡುಗೆಯನ್ನು ನೀಡುತ್ತಿದೆ ಎಂದು ತುಮಕೂರು ಜಯನಗರ ಪತ್ತಿನ ಸೌಹಾರ್ದಸಹಕಾರಿ ಸಂಘ(ನಿ)ದ ಅಧ್ಯಕ್ಷರಾದ ಆರ್.ಎಸ್.ವೀರಪ್ಪದೇವರು ತಿಳಿಸಿದರು.

ಅವರು ಇಂದು ಜಯನಗರದ ಪಶ್ಚಿಮ ಬಡಾವಣೆಯ 1ನೇ ಮುಖ್ಯರಸ್ತೆಯಲ್ಲಿರುವ ಪತ್ತಿನ ಸಹಕಾರಿ ಸಂಘದ ಕಟ್ಟಡದ ಆವರಣದಲ್ಲಿ ನಡೆದ 8ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ 8 ವರ್ಷಗಳಲ್ಲಿ ನಮ್ಮ ಸಂಘ ಸ್ವಂತ ನಿವೇಶನವನ್ನು ಕ್ರಯಕ್ಕೆ ಕೊಂಡುಕೊಂಡಿದ್ದು ಮುಂದಿನ ದಿನಗಳಲ್ಲಿ ಅಲ್ಲಿ ಬಿಲ್ಡಿಂಗ್ ಕಟ್ಟಲಾಗುವುದು,ಸಂಘದ ಸದಸ್ಯರ ಆಶಯಕ್ಕೆ ಮತ್ತು ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಸಂಘವು ಕಾರ್ಯ ನಿರ್ವಹಿಸುತ್ತಿದ್ದು ಸಂಘದ ಸದಸ್ಯರು ಹೆಚ್ಚಿನ ರೀತಿಯಲ್ಲಿ ಸ್ಥಿರಠೇವಣಿಗಳನ್ನು ಇಟ್ಟು ತಮಗೆ ಅವಶ್ಯಕತೆ ಅನ್ನಿಸಿದರೆ ಸಂಘದಿಂದ ಸಾಲವನ್ನು ಪಡೆಯಬೇಕು,ಸಾಲ ಪಡೆಯುವುದು ದೊಡ್ಡದಲ್ಲಿ ಸಂಘಕ್ಕೆ ನಿಗದಿತ ಸಮಯಕ್ಕೆ ಸಾಲವನ್ನು ಮರುಪಾವತಿ ಮಾಡಿ ಸಂಘವನ್ನು ಮುನ್ನೆಡೆಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಮಂಡಳಿಯ ಟಿ.ಎಲ್.ಮಂಜುನಾಥ್, ಲಕ್ಷ್ಮೀನಾರಾಯಣ್, ಆರ್.ಎಸ್.ಬಸವರಾಜು,ದಯಾನಂದ್,ರವಿಕುಮಾರ್,ಸಿಬ್ಬಂದಿಗಳಾದ ಪ್ರಸನ್ನ,ರಾಮಯ್ಯ,ಸಂಘದ ಸದಸ್ಯರು ಮತ್ತು ಗ್ರಾಹಕರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
