ತುಮಕೂರು: ನೌಕರರಲ್ಲಿ ಐಕ್ಯತೆ, ನೆಮ್ಮದಿ ಹಾಗೂ ಆಧ್ಯಾತ್ಮಿಕ ಸಮತೋಲನದ ಜೀವನದ ಅಗತ್ಯತೆ ಬಹಳ ಮುಖ್ಯ ನಾವು ಇದ್ದುದರಲ್ಲಿ ವರ್ತಮಾನದ ಬದುಕಿನಲ್ಲಿ ನೆಮ್ಮದಿಯ ಕಾಣಬೇಕು, ಜೊತೆಗೆ ನಾಗಾಲೋಟದ ಜೀವನದಲ್ಲಿ ಧ್ಯಾನ (ಮೆಡಿಟೇಷನ್) ಬಹಳ ಮುಖ್ಯ,ತುಮಕೂರು ಜಿಲ್ಲಾ ನ್ಯಾಯಾಂಗ ನೌಕರರ ಪತ್ತಿನ ಸಹಕಾರ ಸಂಘ ಕಳೆದ 9 ವರ್ಷಗಳಿಂದ ಉತ್ತಮವಾಗಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದೆ,ನೌಕರರು ಸಹಕಾರ ಸಂಘವನ್ನು ತಮ್ಮ ಆರ್ಥಿಕ ಚಟುವಟಿಕೆಗಳಿಗೆ ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸುತ್ತಾ 15 ನಿಮಿಷದ ಮೆಡಿಟೇಷನ್ ನ್ನು ಪ್ರಾಯೋಗಿಕವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತಕುಮಾರ್ ರವರು ಸಂಘದ ಸದಸ್ಯರಿಗೆ ತಿಳಿಸಿಕೊಟ್ಟರು.
ಅವರು ಇಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ತುಮಕೂರು ಜಿಲ್ಲಾ ನ್ಯಾಯಾಂಗ ನೌಕರರ ಪತ್ತಿನ ಸಹಕಾರ ಸಂಘದ 9ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷರಾದ ಶ್ರೀ ದಸ್ತಗೀರ್ ಕೆ. ಅವರು ಅಧ್ಯಕ್ಷೀಯ ಭಾಷಣದಲ್ಲಿ ಸಂಘದ ಕಾರ್ಯಪ್ರಗತಿ ಹಾಗೂ ಭವಿಷ್ಯದ ಯೋಜನೆಗಳ ಕುರಿತು ವಿವರಿಸಿದರು. ಬಡ್ಡಿದರ ಕನಿಷ್ಠಗೊಳಿಸಿದ ವಿಚಾರ, ಸಾಲದ ಮೊತ್ತವನ್ನು ಹೆಚ್ಚಿಸಿದ ವಿಚಾರಗಳು ಸಂಘದ ಧ್ಯೇಯೋದ್ದೇಶಗಳು,ಕಾರ್ಯಕ್ರಮಗಳ ಮಾಹಿತಿಯನ್ನು ತಿಳಿಸಿದರು.
ಅಕ್ಷಯ್ರವರು ಪ್ರಾರ್ಥಿಸಿದರು,ಉಪಾಧ್ಯಕ್ಷರಾದ ಶ್ರೀ ಗಂಗಮಾಳಯ್ಯನವರ ಸ್ವಾಗತಿಸಿದರು,ಈ ಸಂದರ್ಭದಲ್ಲಿ 21 ನಿವೃತ್ತ ನ್ಯಾಯಾಂಗ ನೌಕರರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಸಂಘದ ವಾರ್ಷಿಕ ಲೆಕ್ಕಪತ್ರಗಳ ವಿವರಗಳನ್ನು ನಿರ್ದೇಶಕರು ಸಭೆಯಲ್ಲಿ ಪ್ರಸ್ತುತಪಡಿಸಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀ ಗಂಗಮಾಳಯ್ಯ, ನಿರ್ದೇಶಕರುಗಳಾದ ಕಾಂತರಾಜು, ಕೃಷ್ಣಮೂರ್ತಿ, ವೆಂಕಟೇಶ್, ಲೋಕೇಶ್, ವರದರಾಜ, ಸಂತೋಷ ಗಿರಡ್ಡಿ, ಎಂ.ಕೆ.ಜಗದೀಶ್(ಹಿರಿಯ ಶಿರಸ್ತೇದಾರ್),ರವಿಕುಮಾರ್, ಶ್ರೀಮತಿಸುಕನ್ಯಾ ಉಪಸ್ಥಿತರಿದ್ದರು.ತುಮಕೂರು ಜಿಲ್ಲೆಯ ಇಡೀ ನ್ಯಾಯಾಂಗದ ನೌಕರರು ಭಾಗವಹಿಸಿದ್ದರು.ವೆಂಕಟೇಶ್ ವಂದಿಸಿದರು.
– ಚಂದ್ರಚೂಡ ಕೆ.ಬಿ.
