ಅದೋ ಕಾನನ ಕೂಗಿದೆ ಕಾಜಾಣ,
ವಸಂತ ಮಾಸ ಬಂದಿದೆ;
ಹಸಿರು ವನವು ಚಿಗುರಿದೆ,
ನೋಡು… ನೋಡು… ನೀನೋಡು!
ಅದೋ ಕೋಗಿಲೆ ಕೂಗುತ ನಲಿದಿದೆ,
ನವಿಲು ಗರಿಯ ಕೆದರುತ
ನೃತ್ಯವನು ಮಾಡಿದೆ;
ಎಷ್ಟು ಚೆನ್ನ… ಚೆನ್ನ… ಚೆನ್ನ!
ಅದೋ ಧುಮುಕಿದೆ ನೀರು, ಹರಿದಿದೆ,
ನರಿಯು ನೀರು ಕುಡಿದಿದೆ;
ಮೊಸಳೆ ಬಾಯಿ ತೆರೆದಿದೆ—
ದಾಹ… ದಾಹ… ನೀರ ದಾಹ!
ಅದೋ ನೋಡು ಆನೆಯನ್ನು,
ಹೆಡೆ ಬಿಚ್ಚಿದ ಸರ್ಪವ,
ಹುಲಿಯು ನೆಗೆದು ಓಡಿದೆ,
ಜಿಂಕೆ ಅವಿತು ಕುಳಿತಿದೆ;
ಎಷ್ಟು ಭೀತಿ… ಭೀತಿ… ಭೀತಿ!
ಪ್ರಕೃತಿ, ನೀನೆಷ್ಟು ಸುಂದರ!
ರಮ್ಯ ಬೃಂದಾವನ!
ಗಾಳಿ ತೂರಿ ಬರುತಿದೆ,
ಸುಗಂಧ ಹೊತ್ತು ತರುತಿದೆ;
ಎಷ್ಟು ಮಧುರ… ಮಧುರ…
ಸುಮಧುರ!
—
ಗೊರೂರು ಅನಂತರಾಜು
ಹಾಸನ
ವಿಳಾಸ:ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3ನೇ ಕ್ರಾಸ್,
ಹಾಸನ – 573201.
ಮೊಬೈಲ್: 9449462879
