ಅದೋ ಕಾನನ ಕೂಗಿದೆ ಕಾಜಾಣ
ವಸಂತ ಮಾಸ ಬಂದಿದೆ
ಹಸಿರು ವನವು ಚಿಗುರಿದೆ
ನೋಡು.. ನೋಡು.. ನೀನೋಡು
ಅದೋ ಕೋಗಿಲೆ ಕೂಗುತ ನಲಿದಿದೆ
ನವಿಲು ಗರಿಯ ಕೆದರುತ
ನೃತ್ಯವನು ಮಾಡಿದೆ
ಎಷ್ಟು ಚೆನ್ನ.. ಚೆನ್ನ.. ಚೆನ್ನ
ಅದೋ ಧುಮುಕಿದೆ ನೀರು ಹರಿದಿದೆ
ನರಿಯು ನೀರು ಕುಡಿದಿದೆ
ಮೊಸಳೆ ಬಾಯಿ ತೆರೆದಿದೆ
ದಾಹ.. ದಾಹ.. ನೀರು ದಾಹ
ಅದೋ ನೋಡು ಆನೆಯ
ಹೆಡೆ ಬಿಚ್ಚಿದ ಸಪ೯ವ
ಹುಲಿಯು ನೆಗೆದು ಓಡಿದೆ
ಜಿಂಕೆ ಅವಿತು ಕುಳಿತಿದೆ
ಎಷ್ಟು ಭೀತಿ.. ಬೀತಿ.. ಭೀತಿ
ಪ್ರಕೃತಿ ನೀನೆಷ್ಟು ಸುಂದರ ರಮ್ಯ ಬೃಂದಾವನ
ಗಾಳಿ ತೂರಿ ಬರುತಿದೆ
ಸುಗಂಧ ಹೊತ್ತು ತರುತಿದೆ
ಎಷ್ಟು ಮಧುರ.. ಮಧುರ ಸುಮಧುರ
—
ಗೊರೂರು ಅನಂತರಾಜು,
ಹಾಸನ.
9449462879
ವಿಳಾಸ:
ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3ನೇ ಕ್ರಾಸ್,
ಹಾಸನ – 573201
