ತುಮಕೂರು:ನಗರ ವೀರಶೈವ ಸಮಾಜ ಸೇವಾ ಸಮಿತಿಯ ಅಂಗ ಸಂಸ್ಥೆಯಾದ ಶ್ರೀ ರೇಣುಕಾ ವಿದ್ಯಾಪೀಠದ ಕಾರ್ಯಕಾರಿ ಮಂಡಳಿಯ ನೂತನ ಅಧ್ಯಕ್ಷರಾಗಿ ಟಿ.ಆರ್.ಲೋಕೇಶ್ ಹಾಗೂ ಗೌರವ ಕಾರ್ಯದರ್ಶಿಯಾಗಿ ಟಿ.ಜೆ.ಗಿರೀಶ್ ನೇಮಕವಾಗಿದ್ದಾರೆ.
ನಗರ ವೀರಶೈವ ಸಮಾಜ ಸೇವಾ ಸಮಿತಿಯ 21ನೇ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಸಂಬಂಧ ತೀರ್ಮಾನಿಸಿ ಶ್ರೀ ರೇಣುಕಾ ವಿದ್ಯಾಪೀಠದ ಕಾರ್ಯಕಾರಿ ಮಂಡಳಿಗೆ ನೂತನ ಅಧ್ಯಕ್ಷರು ಹಾಗೂ ಗೌರವ ಕಾರ್ಯದರ್ಶಿಯನ್ನಾಗಿ ನಗರ ವೀರಶೈವ ಸಮಾಜದ ಅಧ್ಯಕ್ಷರಾದ ಕೋರಿ ಮಂಜುನಾಥ್ ರವರು ನೇಮಕ ಮಾಡಿ ಆದೇಶಪತ್ರವನ್ನು ನೀಡಿದ್ದಾರೆ.
ನೂತನ ಅಧ್ಯಕ್ಷರು ಮತ್ತು ಗೌರವ ಕಾರ್ಯದರ್ಶಿಗಳನ್ನು ವಿವಿಧ ವೀರಶೈವ ಅಂಗ ಸಂಸ್ಥೆಗಳು,ಧಾರ್ಮಿಕ ಸಂಸ್ಥೆಗಳು,ತುಮಕೂರು ವೀರಶೈವ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಕೆ.ಜೆ.ರುದ್ರಪ್ಪ,ಉಪಾಧ್ಯಕ್ಷರಾದ ಹೆಬ್ಬಾಕ ಮಲ್ಲಿಕಾರ್ಜುನಯ್ಯ,ನಿರ್ದೇಶಕರು,ಶಾಸಕ ಜಿ.ಬಿ.ಜ್ಯೋತಿಗಣೇಶ್,ನಗರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಶುಭಹಾರೈಸಿದ್ದಾರೆ.
– ಚಂದ್ರಚೂಡ ಕೆ.ಬಿ.
