ಕೊರಟಗೆರೆ:- ತಾಲೂಕಿನ ಜನರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿರುವ ಹಾಗೂ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ನಾಹೀದ್ ಜಮ್ ಜಮ್ ಅವರ ಸೀಮಂತ ಶುಭ ಸಮಾರಂಭ ಸೆ.20ರಂದು ಪಟ್ಟಣದ ಕನ್ನಿಕಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ತುಂಬು ಗರ್ಭಿಣಿಯಾಗಿದ್ದರೂ ಕರ್ತವ್ಯಕ್ಕೆ ಆದ್ಯತೆ ನೀಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ನಾಹೀದ್ ಜಮ್ ಜಮ್ ಅವರ ಸೇವಾ ಮನೋಭಾವಕ್ಕೆ ತಾಲೂಕಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರಳ ನಡೆ ಹಾಗೂ ಜನರೊಂದಿಗೆ ಆತ್ಮೀಯವಾಗಿ ಬೆರೆಯುವ ಗುಣದಿಂದ ಅವರು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಸೀಮಂತ ಸಮಾರಂಭದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಸಾರ್ವಜನಿಕರು, ಅಭಿಮಾನಿಗಳು, ಬಂಧು-ಬಳಗ ಹಾಗೂ ಆತ್ಮೀಯರು ಪಾಲ್ಗೊಂಡು ತಾಯಿ ಹಾಗೂ ಮಗುವಿಗೆ ಶುಭ ಹಾರೈಸಲಿದ್ದಾರೆ.
ತಂದೆ-ತಾಯಂದಿರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಬಂಧು-ಬಳಗ ಹಾಗೂ ಆತ್ಮೀಯರು ಕುಟುಂಬ ಸಮೇತರಾಗಿ ಆಗಮಿಸಿ ಸೀಮಂತ ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವದಿಸುವಂತೆ ಆಯೋಜಕರು ಕೋರಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ.
