ಕೆ.ಆರ್.ಪೇಟೆ,ಸೆ.24: ಪಟ್ಟಣದ ಟಿಎಪಿಸಿಎಂಎಸ್ ಸಂಸ್ಥೆಯ ಎಸ್.ಎಂ.ಲಿಂಗಪ್ಪ ಸಹಕಾರ ಭವನ ಆವರಣದಲ್ಲಿ (ಟಿ.ಎ.ಪಿ.ಸಿ.ಎಂ.ಎಸ್) ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಟಿಎಪಿಸಿಎಂಎಸ್ ಸಂಸ್ಥೆಯ ಅಧ್ಯಕ್ಷರಾದ ಮಲ್ಲೇನಹಳ್ಳಿ ಎಂ.ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಸಕ ಹೆಚ್.ಟಿ.ಮಂಜು ಅವರು ಮಹಾಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಮಂಜು ಅವರು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ತಾಲ್ಲೂಕಿನ ರೈತರ ಜೀವನಾಡಿಯಾಗಿದೆ.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ತಾಲ್ಲೂಕಿನ ಮಾಜಿ ಶಾಸಕರಾದ ಎಸ್.ಎಂ.ಲಿಂಗಪ್ಪ ಅವರ ದೂರದೃಷ್ಠಿಯ ಫಲವಾಗಿ ತಾಲ್ಲೂಕು ಕಚೇರಿಯ ಸಮೀಪದ ಆಯಕಟ್ಟಿನ ಜಾಗದಲ್ಲಿ ಸಂಸ್ಥೆಯನ್ನು ಆರಂಭಿಸಲಾಗಿದೆ. ಕೋಟ್ಯಾಂತರ ರೂ ಬೆಲೆ ಬಾಳುವ ಆಸ್ತಿಯನ್ನು ಸಂಸ್ಥೆಯ ಹೆಸರಿನಲ್ಲಿ ಖರೀದಿ ಮಾಡಿ ಬೃಹತ್ ಗೋದಾಮುಗಳನ್ನು ನಿರ್ಮಾಣ ಮಾಡಿ ಸಂಸ್ಥೆಯನ್ನು ರಾಜ್ಯದಲ್ಲಿ ಉತ್ತಮ ಸಂಸ್ಥೆ ಎಂಬ ಹೆಸರು ಬರಲು ಕಾರಣ ಕರ್ತರಾಗಿದ್ದಾರೆ. ಸ್ವಾತಂತ್ರ್ಯ ಬಂದ ಎರಡೇ ವರ್ಷಕ್ಕೆ ಈ ಸಂಸ್ಥೆಯನ್ನು ಎಸ್.ಎಂ.ಲಿಂಗಪ್ಪ ಅವರು ಆರಂಭಿಸಿದ್ದಾರೆ. ಅವರು ಹಾಕಿದ ಅಡಿಪಾಯವು ಸಂಸ್ಥೆಯು ಬೃಹದಾಕಾರವಾಗಿ ಬೆಳೆದು ನಿಲ್ಲಲು ಕಾರಣವಾಗಿದೆ.
ಇಂದು ಸಂಸ್ಥೆಯು ವರ್ಷಕ್ಕೆ ಕನಿಷ್ಠ 50ರಿಂದ 60ಲಕ್ಷ ರೂಪಾಯಿಗಳ ಆಧಾಯವನ್ನು ಗಳಿಸುತ್ತಿದೆ ಇದಕ್ಕೆ ಮುಖ್ಯ ಕಾರಣ ಆಡಳಿತ ಮಂಡಳಿಯ ಪ್ರಾಮಾಣಿಕ ಆಡಳಿತವು ಕಾರಣವಾಗಿದೆ. ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಎಲ್ಲರೂ ಸಹ ಸಂಸ್ಥೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಪ್ರಮುಖವಾಗಿ ಪೆಟ್ರೋಲ್ ಬಂಕ್, ಸಮುದಾಯ ಭವನಗಳ ನಿರ್ಮಾಣ, ವಾಣಿಜ್ಯ ಮಳಿಗೆಗಳ ನಿರ್ಮಾಣ, ಜವಳಿ ಶಾಖೆ, ಬ್ಯಾಂಕಿಂಗ್ ಶಾಖೆ, ಗೊಬ್ಬರ ಮಾರಾಟ ಶಾಖೆ, ಶುದ್ದ ಕುಡಿಯುವ ನೀರಿನ ಘಟಕ, ಇ-ಸ್ಟಾಂಪಿಂಗ್ ಶಾಖೆ ಸೇರಿದಂತೆ ಹಲವು ಲಾಭದಾಯಕ ವಹಿವಾಟು ನಡೆಸುವ ಮೂಲಕ ಖಚಿತ ಆದಾಯ ಗಳಿಸಲು ಆಡಳಿತ ನಡೆಸಿದ ಎಲ್ಲಾ ಅಧ್ಯಕ್ಷರುಗಳು ಹಾಗೂ ನಿರ್ದೇಶಕರುಗಳು ಕಾರಣಕರ್ತರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈಗಿನ ಆಡಳಿತ ಮಂಡಳಿಯೂ ಸಹ ಅದೇ ದಿಕ್ಕಿನತ್ತ ಹೆಜ್ಜೆ ಹಾಕುತ್ತಿದ್ದು ಕಳೆದ ಒಂದು ವರ್ಷದಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಅಧ್ಯಕ್ಷರಾದ ಮಲ್ಲೇನಹಳ್ಳಿ ಮೋಹನ್ ಹಾಗೂ ನಿರ್ದೇಶಕರು ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಯ ದಿಕ್ಕಿನತ್ತ ಕೊಂಡೊಯ್ಯಲು ಸಂಕಲ್ಪ ಮಾಡಿದ್ದಾರೆ. ಎಸ್.ಎಂ.ಲಿಂಗಪ್ಪ ಸಹಕಾರ ಭವನವನ್ನು 5ಕೋಟಿ ರೂ ವೆಚ್ಚದಲ್ಲಿ ಸಂಪೂರ್ಣ ನವೀಕರಿಸಿ ಹೈಟೆಕ್ ಮಾದರಿಯಲ್ಲಿ ಸಮುದಾಯ ಭವನ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ನನ್ನ ಶಾಸಕ ನಿಧಿ, ಕೇಂದ್ರ ಸಚಿವರಾದ ಕುಮಾರಣ್ಣ ಅವರ ಸಂಸತ್ ನಿಧಿ ಸೇರಿದಂತೆ ಜಿಲ್ಲೆಯ ವಿವಿಧ ವಿಧಾನ ಪರಿಷತ್ ಸದಸ್ಯರ ಹಾಗೂ ರಾಜ್ಯಸಭಾ ಸದಸ್ಯರ ಅನುಧಾನ ಕೊಡಿಸುವ ಭರವಸೆಯನ್ನು ಶಾಸಕ ಹೆಚ್.ಟಿ.ಮಂಜು ನೀಡಿದರು.
ಸಂಘದ ಕಾರ್ಯದರ್ಶಿ ಎಸ್.ಬೋರೇಗೌಡ ವಾರ್ಷಿಕ ವರದಿ ಮಂಡಿಸಿ, ಆಡಿಟ್ ವರದಿಯನ್ನು ಓದಿದರು ಹಾಗೂ ಶೇರುದಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ವಾರ್ಷಿಕ ಮಹಾಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶೀಳನೆರೆ ಎಸ್.ಅಂಬರೀಶ್, ಟಿಎಪಿಸಿಎಂಎಸ್ ಸಂಸ್ಥೆಯ ಉಪಾಧ್ಯಕ್ಷ ಲತಾಮಣಿಮಂಜೇಗೌಡ, ನಿರ್ದೇಶಕರುಗಳಾದ ಶೀಳನೆರೆ ಎಸ್.ಎಲ್.ಮೋಹನ್, ಹೆಚ್.ಟಿ.ಲೋಕೇಶ್, ನಾಗರಘಟ್ಟ ಎನ್.ಕೆ.ದಿಲೀಪ್ಕುಮಾರ್, ಎಂ.ಪಿ.ಲೋಕೇಶ್, ಬಿ.ಎಂ.ಕಿರಣ್, ಎ.ವೈ.ವಿಜಯ್ಕುಮಾರ್, ಟಿ.ಬಲದೇವ್, ಕೆ.ಬಿ.ನಾಗೇಶ್, ಕಿಕ್ಕೇರಿ ಮಧು, ಎಂ.ಡಿ.ಜ್ಯೋತಿದೇವರಾಜು, ಟಿ.ಎಸ್.ಮಂಜುನಾಥ್, ರಾಯಸಮುದ್ರ ತಮ್ಮಣ್ಣ, ಮಾಜಿ ನಿರ್ದೇಶಕರಾದ ಕೊರಟೀಕೆರೆ ದಿನೇಶ್, ಡಿ.ಸಿ.ಸಿ. ಬ್ಯಾಂಕ್ ಮಾಜಿ ಆಧ್ಯಕ್ಷರಾದ ರಾಮಕೃಷ್ಣೇಗೌಡ, ವಿಠಲಾಪುರ ಸುಬ್ಬೇಗೌಡ, ಮೆಣಸ ಮರೀಗೌಡ, ಮಾಕವಳ್ಳಿ ವಸಂತಕುಮಾರ್, ಬಸ್ತಿ ರಂಗಪ್ಪ, ಹೆಳವೇಗೌಡ, ಎಂ.ಬಿ.ಚಂದ್ರಶೇಖರ್, ಚಿಕ್ಕಗಾಡಿಗನಹಳ್ಳಿ ಚಂದ್ರಶೇಖರ್, ಗಂಜಿಗೆರೆ ರಾಮಕೃಷ್ಣೇಗೌಡ ಹಾಗೂ ಸಂಘದ ಕಾರ್ಯದರ್ಶಿ ಎಸ್.ಬೋರೇಗೌಡ ಸೇರಿದಂತೆ ಎಲ್ಲಾ ನಿರ್ದೇಶಕರು ಹಾಗೂ ಸಂಸ್ಥೆಯ ಸಾವಿರಾರು ಶೇರುದಾರರು ಭಾಗವಹಿಸಿದ್ದರು.
ಶ್ರೀನಿವಾಸ್ ಆರ್.
