ಹಾಸನ, ಸೆ.24: ನಗರದ ವಿದ್ಯಾನಗರದಲ್ಲಿ ನಡೆದ ಸಾರ್ವಭೌಮ ಗಣಪತಿ ಹೋಮ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ರಾಮಯೋಗೀಶ್ವರ ಮಠ, ಬೇಬಿ ಬೆಟ್ಟ, ಪಾಂಡವಪುರ ತಾಲ್ಲೂಕಿನ ಶ್ರೀ ಶಿವಬಸವ ಸ್ವಾಮೀಜಿ ಪಾಲ್ಗೊಂಡು, ಅನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗಣಪತಿ ಹೋಮ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದ ಅಂಗವಾಗಿ ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ, ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರದೀಪ್, ಹಾಸನ ಮಹಾನಗರ ಪಾಲಿಕೆ ಸದಸ್ಯ ಅಮಿತ್ ಕೆ.ಟಿ. ಪ್ರಕಾಶ್, ಗ್ರಾನೈಟ್ ಉದ್ಯಮಿಗಳಾದ ಬಾಬು, ಕಣಗಾಲ್ ಲೋಕೇಶ್, ದರ್ಶನ್ ಸೇರಿದಂತೆ ಸ್ಥಳೀಯ ಮುಖಂಡರು, ವಿದ್ಯಾನಗರ ಸಾರ್ವಭೌಮ ಗಣಪತಿ ಸೇವಾ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
- ಶಿವಕುಮಾರ್ ಕಟ್ಟಾಯ
