ಬೆಂಗಳೂರು: ಆಸ್ಟ್ರೇಲಿಯಾದ ಪ್ರಮುಖ ಲಿಸ್ಟೆಡ್ ಇಂಧನ ಸಂಸ್ಥೆಯಾದ ವುಡ್ಸೈಡ್ ಎನರ್ಜಿ ಗ್ರೂಪ್ ಲಿಮಿಟೆಡ್, ಬೆಂಗಳೂರಿನಲ್ಲಿ ತನ್ನ ಅತ್ಯಾಧುನಿಕ ನಾವೀನ್ಯತಾ ಕೇಂದ್ರ ‘ವುಡ್ಸೈಡ್ ಗ್ಲೋಬಲ್ ಸೊಲ್ಯೂಷನ್ಸ್’ ಸ್ಥಾಪಿಸುವಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ.
ಜಾಗತಿಕ ಮಟ್ಟದಲ್ಲಿ ಸಂಸ್ಥೆಯ ಕಾರ್ಯಾಚರಣೆ ಹಾಗೂ ತಂತ್ರಜ್ಞಾನ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಸಂಸ್ಥೆಯ ವಿಸ್ತರಣಾ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಎಐ, ಸೈಬರ್ ಭದ್ರತೆ, ಡೇಟಾ ಸೈನ್ಸ್ಗೆ ಒತ್ತು
ವುಡ್ಸೈಡ್ ಗ್ಲೋಬಲ್ ಸೊಲ್ಯೂಷನ್ಸ್ ಕೇಂದ್ರದಲ್ಲಿ ಕೃತಕ ಬುದ್ಧಿಮತ್ತೆ (AI), ಸೈಬರ್ ಭದ್ರತೆ, ಡೇಟಾ ಸೈನ್ಸ್ ಮತ್ತು ಪ್ರಾಡಕ್ಟ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ವೃತ್ತಿಪರರು ಕಾರ್ಯನಿರ್ವಹಿಸಲಿದ್ದಾರೆ.
ಇದರೊಂದಿಗೆ ಹಣಕಾಸು ಮತ್ತು ಕಾರ್ಯಾಚರಣಾ ಬೆಂಬಲ ವಿಭಾಗಗಳೂ ಇಲ್ಲಿ ಕಾರ್ಯನಿರ್ವಹಿಸಲಿದ್ದು, ವಿಶ್ವದ ವಿವಿಧ ವುಡ್ಸೈಡ್ ಕೇಂದ್ರಗಳಲ್ಲಿರುವ ಸಹೋದ್ಯೋಗಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಲಿವೆ.
ಬೆಂಗಳೂರು ನಗರದಲ್ಲಿರುವ ವಿಶ್ವದರ್ಜೆಯ ತಂತ್ರಜ್ಞಾನ ಪರಿಸರ, ದೊಡ್ಡ ಪ್ರಮಾಣದ ನುರಿತ ಪ್ರತಿಭಾ ಸಂಪನ್ಮೂಲ ಹಾಗೂ ಜಾಗತಿಕ ನಾವೀನ್ಯತಾ ಕೇಂದ್ರವಾಗಿ ನಗರದ ಬೆಳವಣಿಗೆಯನ್ನು ಪರಿಗಣಿಸಿ ಸಂಸ್ಥೆಯು ಬೆಂಗಳೂರನ್ನು ತನ್ನ ಕಾರ್ಯತಂತ್ರದ ಕೇಂದ್ರವಾಗಿ ಆಯ್ಕೆ ಮಾಡಿಕೊಂಡಿದೆ.
ಇಂಧನ ಕ್ಷೇತ್ರದಲ್ಲಿ ಕಾರ್ಯಾಚರಣೆಯ ಸಂಕೀರ್ಣತೆ ಹೆಚ್ಚುತ್ತಿರುವುದು, ತಂತ್ರಜ್ಞಾನದಲ್ಲಿ ಕ್ಷಿಪ್ರ ಬದಲಾವಣೆಗಳು ಹಾಗೂ ದಕ್ಷತೆ, ವ್ಯವಸ್ಥೆಯ ಸುಸ್ಥಿರತೆ ಮತ್ತು ದತ್ತಾಂಶ ಆಧಾರಿತ ನಿರ್ಧಾರಗಳ ಅಗತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ.
ಜಾಗತಿಕ ಕಾರ್ಯಾಚರಣೆಗೆ ಬೆಂಗಳೂರಿನಿಂದ ಬೆಂಬಲ
ವುಡ್ಸೈಡ್ನ ಉಪಾಧ್ಯಕ್ಷೆ ಹಾಗೂ ಭಾರತದ ಕಂಟ್ರಿ ಮ್ಯಾನೇಜರ್ ಕ್ರಿಸ್ಟಿನ್ ಲಿಯೋ ಮಾತನಾಡಿ, ವುಡ್ಸೈಡ್ ಗ್ಲೋಬಲ್ ಸೊಲ್ಯೂಷನ್ಸ್ ಸಂಸ್ಥೆಯ ಬೆಳವಣಿಗೆಯ ಪಯಣದಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು.
ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಕೌಶಲ್ಯಗಳು, ಜಾಗತಿಕ ಸಹಯೋಗಗಳು ಹಾಗೂ ಹೊಸ ಕೆಲಸದ ವಿಧಾನಗಳನ್ನು ಬಲಪಡಿಸುವತ್ತ ಗಮನಹರಿಸಲಾಗುತ್ತಿದೆ. ಜಾಗತಿಕ ಸಹೋದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸಿ ಸಂಸ್ಥೆಯ ಮುಂದಿನ ಹಂತದ ಬೆಳವಣಿಗೆಗೆ ಬೆಂಗಳೂರು ಅಗತ್ಯ ಪ್ರತಿಭಾ ಸಂಪನ್ಮೂಲವನ್ನು ಒದಗಿಸಲಿದೆ ಎಂದು ಅವರು ಹೇಳಿದರು.
ವುಡ್ಸೈಡ್ ಡಿಜಿಟಲ್ ಸೊಲ್ಯೂಷನ್ಸ್ ಸೆಂಟರ್ನ ಮುಖ್ಯಸ್ಥ ಸಮೀರ್ ಸಿಂಘಾಲ್ ಮಾತನಾಡಿ, ಆಧುನಿಕ ತಂತ್ರಜ್ಞಾನವು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಸುಧಾರಿಸಲು, ಕಾರ್ಯಕ್ಷಮತೆ ಹೆಚ್ಚಿಸಲು ಹಾಗೂ ವ್ಯವಹಾರದ ಸಂಕೀರ್ಣ ಸವಾಲುಗಳನ್ನು ಪರಿಹರಿಸಲು ಹೊಸ ಅವಕಾಶಗಳನ್ನು ಒದಗಿಸುತ್ತಿದೆ ಎಂದರು.
ವುಡ್ಸೈಡ್ ಗ್ಲೋಬಲ್ ಸೊಲ್ಯೂಷನ್ಸ್ ಮೂಲಕ ಪ್ರಮುಖ ತಂತ್ರಜ್ಞಾನ ಕ್ಷೇತ್ರಗಳ ಪ್ರತಿಭಾವಂತ ತಂಡಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲಾಗುತ್ತಿದ್ದು, ಇದು ಸಂಸ್ಥೆಯ ಪ್ರಮುಖ ಯೋಜನೆಗಳು ಹಾಗೂ ಜಾಗತಿಕ ಆದ್ಯತೆಗಳಿಗೆ ಕೊಡುಗೆ ನೀಡಲಿದೆ ಎಂದು ತಿಳಿಸಿದರು.
ವುಡ್ಸೈಡ್ ಎನರ್ಜಿ
ವುಡ್ಸೈಡ್ ಎನರ್ಜಿ ಆಸ್ಟ್ರೇಲಿಯಾದ ಪ್ರಮುಖ ಜಾಗತಿಕ ಇಂಧನ ಸಂಸ್ಥೆಗಳಲ್ಲಿ ಒಂದಾಗಿದೆ. 1980ರ ದಶಕದಲ್ಲಿ ಆಸ್ಟ್ರೇಲಿಯಾದಲ್ಲಿ ಎಲ್ಎನ್ಜಿ ಉದ್ಯಮದ ಬೆಳವಣಿಗೆಯಲ್ಲಿ ಸಂಸ್ಥೆ ಪ್ರಮುಖ ಪಾತ್ರ ವಹಿಸಿತ್ತು.
ಪ್ರಸ್ತುತ ಆಸ್ಟ್ರೇಲಿಯಾ, ಉತ್ತರ ಅಮೆರಿಕ ಮತ್ತು ಆಫ್ರಿಕಾದಲ್ಲಿ ತೈಲ, ನೈಸರ್ಗಿಕ ಅನಿಲ ಹಾಗೂ ಹೊಸ ಇಂಧನ ಯೋ
