ಬೆಂಗಳೂರು:- ಪ್ರಸ್ತುತ ಸಮಾಜದಲ್ಲಿ ಶಾಲಾ ಕಾಲೇಜುಗಳಲ್ಲಿ ಮತ್ತು ಇತರೆ ಕೆಲಸದ ಸ್ಥಳಗಳಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಲೇ ಇದೆ ಇಂತಹ ಕಿರುಕುಳ ದೌರ್ಜನ್ಯಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಹಿಂಸಾಚಾರ ಕಿರುಕುಳ ಶೋಷಣೆ ಇಲ್ಲದ ವಾತಾವರಣದಲ್ಲಿ ನಾವೆಲ್ಲರೂ ಕೆಲಸ ಮಾಡುವ, ಬದುಕುವ ವಾತಾವರಣವನ್ನು ಒದಗಿಸಲು ಚಾಮರಾಜಪೇಟೆಯ ಸಂತ ತೆರೇಸಾ ಸಂಸ್ಥೆಯ ವತಿಯಿಂದ ಅರಿವು ಮೂಡಿಸುವ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಎಸ್ ಎಂ ಎಂ ಐ ಸಂಸ್ಥೆಯ ಅಧ್ಯಕ್ಷರಾದ ಡಾ. ಸಿಸ್ಟರ್ ಜೆಸ್ಸಿಮರ್ಲಿನ್ ಲೈಂಗಿಕ ಕಿರುಕುಳ ನಿರ್ಮೂಲನ ಜಾಗೃತಿ ಕಾರ್ಯಕ್ರಮ”ಕ್ಕೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಇವರುದೌರ್ಜನ್ಯವಲ್ಲ ಅದು ಒಬ್ಬ ವ್ಯಕ್ತಿಯ ಸ್ವಾತಂತ್ರ್ಯ, ಗೌರವ ಮತ್ತು ಮಾನಸಿಕ ನೆಮ್ಮದಿಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡುವ ಕ್ರೂರ ಕೃತ್ಯ. ಇದು ರಸ್ತೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ಬೇಕಾದರೂ ನಡೆಯುತ್ತಿರಬಹುದು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಜಾಗೃತಿ ಮೂಡಿಸಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ರ್ಯಾಲಿಯಲ್ಲಿ ವ್ಯವಸ್ಥಾಪಕರಾದ ಸಿಸ್ಟರ್ ವಿಮಲ ರೋಸಿ. ಮುಖ್ಯ ಸಂಚಾಲಕ ಸಂತ ತೆರೇಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿಸ್ಟರ್ ಜೋಸೆಫಿನ್ ಭಾಗವಹಿಸಿದ್ದರು.
ಎಲ್ಲಾ ಉಪನ್ಯಾಸಕ ವರ್ಗದವರು ಸೇರಿದಂತೆ ಸುಮಾರು 400 ವಿದ್ಯಾರ್ಥಿನಿಯರೊಂದಿಗೆ ಚಾಮರಾಜಪೇಟೆ ರಾಯನ್ ಸರ್ಕಲ್ ನಿಂದ ಹೊರಟು ಈದ್ಗಾ ಮೈದಾನ,ಮಕ್ಕಳಕೂಟದವರೆಗೂ ತಲುಪಿ,ರ್ಯಾಲಿಯು ಯಶಸ್ವಿಗೊಂಡಿತು.
– ಶ್ರೀ ಸಾಯಿ ಎಸ್ ಮಂಜು
