ಕೊರಟಗೆರೆ:- ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಶ್ರೀ ಕ್ಷೇತ್ರ ಸಿದ್ಧರಬೆಟ್ಟ ಶ್ರೀ ರಂಭಾಪುರಿ ಖಾಸ ಶಾಖಾ ಮಠದಲ್ಲಿ 239ನೇ ಬೆಳದಿಂಗಳ ಕೂಟ ಹಾಗೂ ಜನಜಾಗೃತಿ ಧರ್ಮ ಸಮಾರಂಭ ಮತ್ತು ಹುಣ್ಣಿಮೆ ದಿನದಂದು ಗುರು ಎಂದರೆ ಲಘು ಅಲ್ಲ! ಎಂಬ ಗ್ರಂಥ ಲೋಕಾರ್ಪಣೆ ಮಾಡಲಾಗಿತ್ತು.
ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ರಾಮಕೃಷ್ಣ ಆಶ್ರಮ ರವರು ಮಾತನಾಡಿ:- ಬಹಳ ದೊಡ್ಡ ಕ್ರಾಂತಿಯನ್ನು ಮೂಡಿಸಿ 239ನೇ ಧರ್ಮ ಜನಜಾಗೃತಿ ಧರ್ಮಸಮಾರಂಭವನ್ನು ನಮ್ಮ ಎಲ್ಲರನ್ನೂ ಏಕತೆಯಿಂದ ಬೆಳದಿಂಗಳ ಸಮಯವಾಗಿ ಮಾಡಿದ್ದಾರೆ. ಯಾವ ಕ್ರಾಂತಿಯಿಂದಲೇ ಮನುಷ್ಯನನ್ನು ಎಲ್ಲಾ ರೀತಿಯ ಕತ್ತಲ್ಲಗಳಿಂದ ಪಾರು ಮಾಡಿ. ಬೆಳಕಿನ ಪೊರೆಯಲ್ಲಿ ಸರಿಪಡಿಸುವಂತೆ ಮಾಡುತ್ತದೆ. ಅದನ್ನು ಪ್ರಾಚೀನ ಭಾರತ ಶಿಕ್ಷಣ ಎಂದು ಕರೆಯಲಾಗಿತ್ತು. ಶಿಕ್ಷಣ ಅಂದರೆ ಎಲ್ಲಾ ರೀತಿಯ ಕತ್ತಲನ್ನು ಪಾರಾಗಿ ಬೆಳಕಿನ ಬೆಳಕಿನಲ್ಲಿ ಬದುಕನ್ನು ಸರಿಪಡಿಸುವಂತಹ. ಒಂದು ಜ್ಞಾನ ಯಜ್ಞ ಎಂದು ಹೇಳಿದರು.

ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಒಳ್ಳೆಯ ಸದ್ಭಕ್ತರನ್ನು ಪ್ರಜೆಗಳ ನಿರ್ಮಾಣ ವಾಗಬೇಕಾದರೆ. ಬರೀ ಗುರುಗಳಿಂದ ಸಾಧ್ಯವಿಲ್ಲ ಮನೆಯಲ್ಲಿ ಪಾಠವನ್ನು ಮಾಡುವ ಜೊತೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವವಾದದ್ದು. ಅರ್ಥಪೂರ್ಣವಾಗಿ ಮಾಡಿ ಬಂದರೆ. ಇಂತಹ ಮಠ ಮಂದಿರಗಳಲ್ಲಿ ಮಕ್ಕಳು ಬೆಳೆಯೋದಕ್ಕೆ ಸಾಧ್ಯವಾಗುತ್ತದೆ. ಜೀವನದ ಮೌಲ್ಯಗಳನ್ನು ತಿಳಿಸ ಬೇಕಾಗಿದೆ. ಶಿಕ್ಷಕರ ಪಾತ್ರ ಬಹಳ ಮಹತ್ವವಾದದ್ದು. ನಾವೆಲ್ಲರೂ ಮುಂದಿನ ಬದುಕನ್ನು ಅತ್ಯಂತ ಗೌರವದಿಂದ ಕಾಣಬೇಕು. ಶಿಕ್ಷಕರನ್ನು ಗೌರವದಿಂದ ಕೆಲಸವನ್ನು ಇವತ್ತು ಸರ್ಕಾರ ಮಾಡುತ್ತಾ ಇದೆ. ಆ ಹಿನ್ನೆಲೆಯಲ್ಲಿ ಇಂದು ನಮ್ಮ ಮಠದಲ್ಲಿ ಉತ್ತಮ ಶಿಕ್ಷಕರು ಇದ್ದಾರೆ ಸಾಧನೆ ಮಾಡಿರುವ.

ನಮ್ಮ ಪಕ್ಕದ ಊರಾದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುದಿಗೌಡನಹಟ್ಟಿ ಶ್ರೀಮತಿ ಮಾಲಿನಿ ಎಂ ಹಾಗೂ ಪ್ರೇಮ್ ಕುಮಾರ್ ವಿ. ಎಸ್. ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೆಗ್ಗೆರೆ ತುರುವೇಕೆರೆ ತಾಲ್ಲೂಕು. ಇಡೀ ರಾಜ್ಯದ ನಮ್ಮ ಜಿಲ್ಲೆಯ ಇಬ್ಬರು ಶಿಕ್ಷಕರು ಉತ್ತಮ ಶಿಕ್ಷಕರ ಪ್ರಶಸ್ತಿಗೆ ಪಾತ್ರರಾಗಿದ್ದು. ಶ್ರೀಮಠದಲ್ಲಿ ಇವರನ್ನು ಗೌರವಹಿಸುವ ಕೆಲಸ ಮಾಡುತ್ತಿದೆ. ಇವರು ಬಹಳ ಪ್ರೀತಿಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಇವರಿಗೆ ಶ್ರೀಮಠದಿಂದ ಸನ್ಮಾನಿಸಲಾಗುವುದು ಹಾಗೂ ಶ್ರೀ ಮಠದಲ್ಲಿ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ನಿಂದ ನಮ್ಮ ಮಠದಲ್ಲಿ ಓದುತ್ತಿರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಹಾಸಿಗೆ. ಓದಿಕೆ. ದಿಂಬು. ಹಾಗೂ ನಮ್ಮ ಭಾಗದ ರೈತರಿಗೆ 270ಕ್ಕೂ ಹಸುಗಳನ್ನು ಬಡವರಿಗೆ ಕೊಟ್ಟಿದ್ದಾರೆ ಎಂದು ಹೇಳಿದರು.
ಸಂದರ್ಭದಲ್ಲಿ ಶ್ರೀ ಗಂಗಾಧರ ಶಾಸ್ತ್ರಿ. ರಾಮಯ್ಯನವರು . ಪಂಚಾಕ್ಷರಿ ವಿ.ಆರ್. ಮಂಜಣ್ಣ ತುಮಕೂರು ರೇಣುಕಾರಾಧ್ಯರು ಬ್ರಹ್ಮಸಂದ್ರ ಇವರು ಶ್ರೀ ಮಠಕ್ಕೆ ಬಂದ ಭಕ್ತಾದಿಗಳಿಗೆ ಪೂಜೆ ಮತ್ತು ಪ್ರಸಾದ ಮಾಡಲಾಗಿತ್ತು.
ವರದಿ:- ನರಸಿಂಹಯ್ಯ ಹೊಸಕೋಟೆ
