ರಾಮನಾಥಪುರ, ಸೆ.27: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ರಾಮನಾಥಪುರದ ಶ್ರೀ ವರದಾನ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಗೌರಿ ಗಣೇಶ ಮೂರ್ತಿಗೆ ಪಂಚಶಿಲ್ಪಿ ಹಾಗೂ ಕುಶಲಕರ್ಮಿ ಆರ್.ಎಸ್. ರವಿಸುಂದರ್ ಮತ್ತು ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಅರ್ಚಕರಾದ ರಘವೇಂದ್ರ ಭಟ್ ಅವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಗೌರಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರು ಶ್ರದ್ಧಾಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ವರದಾನ ಬಸವೇಶ್ವರ ಭಕ್ತ ಬಳಗದ ಸದಸ್ಯರಾದ ಪ್ರವೀಣ್, ಶ್ರೀನಾಥ್, ದೇವೇಂದ್ರ, ಆರ್.ಕೆ. ಶ್ರೀನಿವಾಸ್, ಸಿದ್ದಯ್ಯ, ನಾಗೇಶ್, ಅಭಿಷೇಕ್, ಸಹನ, ರಾಧಾಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
