ಚನ್ನರಾಯಪಟ್ಟಣ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ವತಿಯಿಂದ ಚನ್ನರಾಯಪಟ್ಟಣದ ನವೋದಯ ವಿದ್ಯಾ ಸಂಸ್ಥೆ ಶಾಲೆಯಲ್ಲಿ ನಡೆದ ಕಿರಿಯ ರೆಡ್ ಕ್ರಾಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಿಸುವುದು ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ಔಷಧಿಗಳು, ಮತ್ತು ಉಚಿತ ಮಾಸ್ಕ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ಎಚ್ ಜಿ ಭರತ್ ಕುಮಾರ್ ಮಾತನಾಡಿ ಪ್ರತಿ ಶಾಲಾ/ ಕಾಲೇಜುಗಳಲ್ಲಿ ಯುವ ರೆಡ್ ಕ್ರಾಸ್ ಘಟಕವನ್ನು ಸ್ಥಾಪಿಸಲಾಗಿರುತ್ತದೆ, ಈ ಸಂಸ್ಥೆಯ ವತಿಯಿಂದ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಸರ್ಕಾರದ ಅನುಮತಿ ಮೇರೆಗೆ ಕಿರಿಯ ರೆಡ್ ಕ್ರಾಸ್ ಪರೀಕ್ಷೆಯನ್ನು ನಡೆಸಲಾಗುತ್ತದೆ ಇದೇ ನಿಟ್ಟಿನಲ್ಲಿ ಸುಮಾರು 428 ವಿದ್ಯಾರ್ಥಿಗಳು ನಮ್ಮ ಚನ್ನರಾಯಪಟ್ಟಣ ತಾಲ್ಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತೀರ್ಣರಾಗಿರುತ್ತಾರೆ, ಈ ಪರೀಕ್ಷೆಯ ಉದ್ದೇಶವು ವಿದ್ಯಾರ್ಥಿಗಳನ್ನು ಸ್ವಯಂ ಸೇವಕರನ್ನಾಗಿ ಹಾಗೂ ದೇಶಪ್ರೇಮ ಮತ್ತು ದೇಶಕ್ಕೆ ಆರ್ಥಿಕ ನಿಲುವು ಹಾಗೂ ಸಮಾಜಕ್ಕೆ ಉತ್ತಮ ಸೇವೆ ಮಾಡುವ ಮನೋಭಾವ ಬೆಳೆಸುವುದು ಈ ಸಂಸ್ಥೆಯ ಉದ್ದೇಶವಾಗಿರುತ್ತದೆ,
ಈ ಸಂಸ್ಥೆಯನ್ನು 1863 ರಲ್ಲಿ ಜೀನ್ ಏನ್ರಿ ಡೊನೇಟ್ ರವರು ಸ್ವಿಜರ್ಲ್ಯಾಂಡ್ ನಲ್ಲಿ ಸ್ಥಾಪಿಸುತ್ತಾರೆ ಹಾಗೂ ಈ ಸಂಸ್ಥೆಯಿಂದ ಹಲವಾರು ಸಮಾಜಮುಖಿ ಸೇವೆಯನ್ನು ನಿರಂತರವಾಗಿ ನಡೆಸುತ್ತಾ ಬಂದಿರುತ್ತಾರೆ.

ಈ ಸಂಸ್ಥೆಯ ಸೇವೆಯನ್ನು ಗುರುತಿಸಿ ಎರಡು ಬಾರಿ ನೋಬೆಲ್ ಪ್ರಶಸ್ತಿಯು ಕೂಡ ದೊರಕಿರುತ್ತದೆ, ಕಾಲಕ್ರಮೇಣ ಈ ಸಂಸ್ಥೆಯು 1920 ರಲ್ಲಿ ಭಾರತದಲ್ಲಿ ಸ್ಥಾಪಿಸಲಾಗುತ್ತದೆ ಹಾಗೂ ಈ ಸಂಸ್ಥೆಯ ಸೇವೆಯು ಕರ್ನಾಟಕದಲ್ಲಿ 1921 ರಲ್ಲಿ ಸ್ಥಾಪಿಸಲಾಗುತ್ತದೆ, ಈ ಸಂಸ್ಥೆಗೆ ನಮ್ಮ ಭಾರತ ದೇಶಕ್ಕೆ ರಾಷ್ಟ್ರಪತಿಗಳು ಅಧ್ಯಕ್ಷರಾಗಿರುತ್ತಾರೆ, ಕರ್ನಾಟಕದಲ್ಲಿ ರಾಜ್ಯಪಾಲರು ಅಧ್ಯಕ್ಷರಾಗಿರುತ್ತಾರೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ, ತಾಲೂಕಿನಲ್ಲಿ ತಾಲ್ಲೂಕು ದಂಡಾಧಿಕಾರಿಗಳು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುತ್ತಾರೆ ಹಾಗೂ ನಮ್ಮ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯು ನಿರಂತರವಾಗಿ ನಿಷ್ಕಲ್ಮಶ ಸೇವೆಯನ್ನು ಮಾಡುತ್ತಿದ್ದಾರೆ, ಈ ಸಂಸ್ಥೆಯು ಅತಿ ಹೆಚ್ಚು ಸಾರ್ವಜನಿಕರ ಹಿತದೃಷ್ಟಿಯಿಂದ ಆರೋಗ್ಯ ಶಿಬಿರಗಳನ್ನು ಆಯೋಜಿಸುವುದು ಹಾಗೂ ರಕ್ತದಾನ ಶಿಬಿರಗಳು, ಕಣ್ಣಿನ ತಪಾಸಣೆ, ಕಣ್ಣಿನ ಶಸ್ತ್ರ ಚಿಕಿತ್ಸೆಗಳು ಮತ್ತು ವಿಕೋಪ, ಗಾಯಾಳುಗಳಿಗೆ ಹಾರೈಕೆ ಹಾಗೂ ವಿವಿಧ ಕಷ್ಟಕರ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೆರವಾಗುವುದು ಮತ್ತು ಮಾನವೀಯತೆ ಹಾಗೂ ಸಹಾನುಭೂತಿ ಬೆಳೆಸುವುದು ಈ ಸಂಸ್ಥೆಯ ಮಹತ್ವವಾಗಿರುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಯುತ ಮಂಜೇಗೌಡರು ಅಧ್ಯಕ್ಷರು ನವೋದಯ ವಿದ್ಯಾ ಸಂಸ್ಥೆ ರವರು ಇಂದು ರೆಡ್ ಕ್ರಾಸ್ ಸಂಸ್ಥೆಯು ಹಲವಾರು ಸಮಾಜಮುಖಿ ಕಾರ್ಯಕ್ರಮವನ್ನು ಮಾಡುತ್ತಿರುವುದು ಹಾಗೂ ಈ ಸಂಸ್ಥೆ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರನ್ನಾಗಿ ದೇಶಕ್ಕೆ ಕೊಡುಗೆಯಾಗಿ ಕೊಡುತ್ತಿದ್ದಾರೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು ಹಾಗೂ ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಸಂಸ್ಥೆಯ ಮೂಲ ಉದ್ದೇಶವನ್ನು ಗೌರವಿಸೋಣ ಹಾಗೂ ಸಂಸ್ಥೆಗಳು ಇನ್ನೂ ಹೆಚ್ಚು ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಬೇಕು ಎಂದು ಆಶಿಸುತ್ತೇನೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀಯುತ ಸೀತಾರಾಮ್ ಮುಖ್ಯ ಶಿಕ್ಷಕರು ನವೋದಯ ವಿದ್ಯಾ ಸಂಸ್ಥೆ, ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಯುತ ಜಬಿವುಲ್ಲಾ ಬೇಗ್ ಸಿ ಎನ್ ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಹರೀಶ್ ಬಿ.ಬಿ ನಿರ್ದೇಶಕರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ರವರು ಇಂದು ನಮ್ಮ ಸಂಸ್ಥೆಯ ವತಿಯಿಂದ 56 ವಿದ್ಯಾರ್ಥಿಗಳಿಗೆ ಹಿರಿಯ ರೆಡ್ ಕ್ರಾಸ್ ಪರೀಕ್ಷೆಯ ಪ್ರಮಾಣ ಪತ್ರವನ್ನು ನೀಡಿರುತ್ತೇವೆ ಹಾಗೂ ಇದೇ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಗೆ ಹಾಗೂ 1000 ಮಾಸ್ಕ್ ಗಳನ್ನು ಉಚಿತವಾಗಿ ನೀಡಿರುತ್ತೇವೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಶ್ರೀಯುತ ಓ ಆರ್ ರಂಗೇಗೌಡರು ನಿರ್ದೇಶಕರು ನವೋದಯ ವಿದ್ಯಾ ಸಂಸ್ಥೆ, ಶ್ರೀಯುತ ಜಲೇಂದ್ರ ಕುಮಾರ್ ಕಾರ್ಯದರ್ಶಿ ನವೋದಯ ವಿದ್ಯಾ ಸಂಸ್ಥೆ ಚನ್ನರಾಯಪಟ್ಟಣ, ಶ್ರೀಯುತ ಆನಂದ್ ಕಾಳೆನಹಳ್ಳಿ ನಿರ್ದೇಶಕರು ನವೋದಯ ವಿದ್ಯಾ ಸಂಸ್ಥೆ ಚನ್ನರಾಯಪಟ್ಟಣ, ಶ್ರೀಯುತ ಎಂ.ಎನ್ ಸಂತೋಷ್ ಖಜಾಂಚಿ ನವೋದಯ ವಿದ್ಯಾ ಸಂಸ್ಥೆ ಚನ್ನರಾಯಪಟ್ಟಣ ಹಾಗೂ ನವೋದಯ ವಿದ್ಯಾ ಸಂಸ್ಥೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
– ಮಂಜುನಾಥ್ ಐ.ಕೆ
