ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಣಿಕ್ಯ ಪ್ರಕಾಶನದ 11ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಉಪನ್ಯಾಸಕಿ ಹಾಗೂ ಹಿರಿಯ ಸಾಹಿತಿ ಡಾ. ಹಸೀನಾ ಎಚ್.ಕೆ. ಅವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದು, ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಶಿವಾನಂದ ಕೆಳಗಿನಮನಿ ಉದ್ಘಾಟಿಸಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಹಾಸನ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು, ಪೂರ್ಣಪ್ರಜ್ಞಾ ಇನ್ಫ್ರಾಸ್ಟ್ರಕ್ಚರ್ ಮಾಲೀಕ ಕೆ.ಆರ್. ಲಕ್ಷ್ಮೀಕಾಂತ್, ಸಾಹಿತಿ ಟಿ. ಸತೀಶ್ ಜವರೇಗೌಡ, ಭೀಮವಿಜಯ ಪತ್ರಿಕೆಯ ಸಂಪಾದಕ ನಾಗರಾಜ್ ಹೆತ್ತೂರು, ಸಮಾಜ ಸೇವಕ ಗಣೇಶ್ ತಮ್ಲಾಪುರ, ಆಲೂರು ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವರದರಾಜು ಡಿ.ಎಂ., ಸಮಾಜ ಸೇವಕ ವೈ.ಎಸ್. ರಮೇಶ್, ಸಾಂಸ್ಕೃತಿಕ ಸಂಘಟಕ ಜಾವಗಲ್ ಪ್ರಸನ್ನಕುಮಾರ್, ನಾಗರಾಜ್ ದೊಡ್ಡಮನಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
28 ಕೃತಿಗಳಿಗೆ ದತ್ತಿ ಪುರಸ್ಕಾರ
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, 2026ನೇ ಸಾಲಿನ ದತ್ತಿ ಪ್ರಶಸ್ತಿಗಾಗಿ ರಾಜ್ಯ ಹಾಗೂ ಹೊರರಾಜ್ಯಗಳಿಂದ 350ಕ್ಕೂ ಹೆಚ್ಚು ಕೃತಿಗಳು ಸ್ಪರ್ಧೆಗೆ ಬಂದಿದ್ದವು. ಹಿರಿಯ ಸಾಹಿತಿಗಳ ತಂಡ ಎರಡು ತಿಂಗಳ ಕಾಲ ಮೌಲ್ಯಮಾಪನ ನಡೆಸಿ, 13 ದತ್ತಿಗಳ ಅಡಿಯಲ್ಲಿ 28 ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಎನ್. ಶೈಲಜಾ ಹಾಸನ ಅವರು ದತ್ತಿ ಪ್ರಶಸ್ತಿ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ದತ್ತಿ ದಾನಿಗಳಾದ ಉಡುಪಿಯ ಪ್ರಭಾವತಿ ಶೆಡ್ತಿ, ಹಾಸನದ ಸಿ.ಎನ್. ನೀಲಾವತಿ, ಮುಂಬೈನ ಡಾ. ವಿಶ್ವೇಶ್ವರ ಎನ್. ಮೇಟಿ, ಡಾ. ಅಮರೇಶ ಪಾಟೀಲ, ರಾಯಚೂರಿನ ರೇಷ್ಮಾ ಕಂದಕೂರು, ಉತ್ತರ ಕನ್ನಡದ ಶಿವಲೀಲಾ ಹುಣಸಗಿ, ದಕ್ಷಿಣ ಕನ್ನಡದ ಫ್ಲಾವಿಯಾ ಅಲ್ಬುಕರ್ಕ್, ಶಿವಮೊಗ್ಗದ ಸೈಯದ್ ಮುಹಿಬುಲ್ಲ ಖಾದ್ರಿ, ಹಾಸನದ ಸುರೇಶ್ ಪಿಡಬ್ಲ್ಯೂಡಿ, ಡಿ. ಸುಜಲಾದೇವಿ, ಆಲೂರಿನ ದೇಸು ಆಲೂರು, ಕಾರ್ಲೆಯ ಹರಿಣಿ ಆರ್. ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.
ಬೆಳಗಿನ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 12 ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಅವರು ಹೇಳಿದರು.

ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ
ರಾಜ್ಯಮಟ್ಟದ ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿಗೆ ಮುಂಬೈನ ಎನ್.ಬಿ. ಸವಳಸಂಗ, ಹಾಸನದ ಬಸವತತ್ತ್ವ ಪ್ರಚಾರಕ ಆರ್.ಇ. ಸೋಮಶೇಖರ, ಜಾವಗಲ್ನ ಸಮಾಜ ಸೇವಕ ಮೊಹಮ್ಮದ್ ಫೈರೋಜ್ ಗಾಂಧಿ, ಸಕಲೇಶಪುರದ ಚಲನಚಿತ್ರ ನಿರ್ದೇಶಕ ಅರುಣ್ಗೌಡ ಕರಡಿಗಾಲ, ಮುದ್ದೇಬಿಹಾಳದ ಝಾಕೀರ್ ನಬೀಸಾ ಹಾಗೂ ಹಾಸನದ ಪೌರ ಕಾರ್ಮಿಕ ದೀಪು ಅವರು ಆಯ್ಕೆಯಾಗಿದ್ದಾರೆ.
ಹೊಯ್ಸಳ ಸಾಹಿತ್ಯ ಪ್ರಶಸ್ತಿ
ರಾಜ್ಯಮಟ್ಟದ ಹೊಯ್ಸಳ ಸಾಹಿತ್ಯ ಪ್ರಶಸ್ತಿಗೆ ಬೆಳಗಾವಿಯ ಆರ್.ಎಸ್. ಪಾಟೀಲ, ಹಾಸನದ ವಾಣಿಘಟ್ಟಿ, ಬಾ.ನಂ. ಲೋಕೇಶ, ಚಾಮರಾಜನಗರದ ನಂದಿನಿ ಪ್ರಮೋದ್, ಮೈಸೂರಿನ ಎಸ್. ಶಿಶಿರಂಜನ್ ಹಾಗೂ ಧಾರವಾಡದ ಆರ್.ಎಂ. ಗೋಗೇರಿ ಅವರು ಆಯ್ಕೆಯಾಗಿದ್ದಾರೆ ಎಂದು ರವಿ ನಾಕಲಗೂಡು ತಿಳಿಸಿದರು.
ಐದು ಕೃತಿಗಳ ಲೋಕಾರ್ಪಣೆ; 150ಕ್ಕೂ ಹೆಚ್ಚು ಕವಿಗಳ ಕವಿಗೋಷ್ಠಿ
ಪತ್ರಕರ್ತ ಹಾಗೂ ಸಾಹಿತಿ ನಾಗರಾಜ್ ಹೆತ್ತೂರು ಮಾತನಾಡಿ, ಮಧ್ಯಾಹ್ನದ ಅವಧಿಯಲ್ಲಿ ಹಿರಿಯ ಸಾಹಿತಿ ಜಯಂತಿ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಕೃತಿ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ನಡೆಯಲಿದೆ ಎಂದರು.
ಹಾಸನ ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಕೆ.ಸಿ. ಗೀತಾ ಆಶಯ ನುಡಿಗಳನ್ನಾಡಲಿದ್ದಾರೆ. ಕರ್ನಾಟಕ ಸೇರಿದಂತೆ ಆಂಧ್ರ, ಚೆನ್ನೈ ಹಾಗೂ ಮಹಾರಾಷ್ಟ್ರದಿಂದ 150ಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಐದು ಕೃತಿಗಳು ಲೋಕಾರ್ಪಣೆಯಾಗಲಿವೆ:
- ಮುಂಬೈನ ಡಾ. ವಿಶ್ವೇಶ್ವರ ಮೇಟಿ ಅವರ “ಹಳ್ಳಿ ಎಂಬ ಬಳ್ಳಿ” ಸಂಶೋಧನಾ ಕೃತಿ.
- ಉತ್ತರ ಕನ್ನಡದ ಹಿರಿಯ ಸಾಹಿತಿ ಎಸ್.ಜಿ. ಕಡೇಮನಿ ಅವರ “ಸಾಲು ಹಣತೆಗಳು”.
- ಹಳಿಯಾಳದ ಭಾರತಿ ಕೆ. ನಲವಡೆ ಅವರ “ಭಾವಸೆಲೆ”.
- ಹಾಸನದ ಕವಯಿತ್ರಿ ಗಿರಿಜಾ ನಿರ್ವಾಣಿ ಅವರ “ಕರಿಮುಗಿಲು” ಕವನ ಸಂಕಲನ.
- ಹಾಸನದ ಎಚ್.ಜಿ. ನೀಲಮ್ಮ ಸಂಪಾದಿಸಿರುವ “ಬದುಕು ಹಾಡಿದ ಹಾಡು”.
ಈ ಕೃತಿಗಳನ್ನು ಕ್ರಮವಾಗಿ ಹಿರಿಯ ಸಾಹಿತಿ ಬಿ.ಎಂ. ಭಾರತಿ ಹಾದಿಗೆ, ರಾಜೇಶ್ವರಿ ಹುಲ್ಲೇನಹಳ್ಳಿ, ಸಾಹಿತಿ ವಾಸು ಸಮುದ್ರವಳ್ಳಿ, ಚೆನ್ನೈನ ಸಾಹಿತಿ ರಶ್ಮಿ ಚಂಗಚಂಡ ಹಾಗೂ ಜನನಿ ಫೌಂಡೇಷನ್ ಅಧ್ಯಕ್ಷೆ ಎಚ್.ಎಸ್. ಭಾನುಮತಿ ಅವರು ಲೋಕಾರ್ಪಣೆ ಮಾಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು
- ಕೊಟ್ರೇಶ್ ಎಸ್. ಉಪ್ಪಾರ್, ಸಂಸ್ಥಾಪಕ ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಬೆಂಗಳೂರು.
- ರವಿ ನಾಕಲಗೂಡು, ಮಾಜಿ ಗೌರವಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಹಾಸನ.
- ನಾಗರಾಜ್ ಹೆತ್ತೂರು, ಪತ್ರಕರ್ತ ಹಾಗೂ ಸಾಹಿತಿ, ಹಾಸನ.
- ಗಣೇಶ್ ತಮ್ಲಾಪುರ, ಸಮಾಜ ಸೇವಕರು, ಹಾಸನ.
- ವರದರಾಜು ಡಿ.ಎಂ., ಅಧ್ಯಕ್ಷರು, ಸರ್ಕಾರಿ ನೌಕರರ ಸಂಘ, ಆಲೂರು.
- ಎಚ್.ಎಸ್. ಭಾನುಮತಿ, ಜಿಲ್ಲಾ ಉಪಾಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಾಸನ.
- ಕೆ.ಸಿ. ಗೀತಾ, ತಾಲೂಕು ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಾಸನ.
