ತುಮಕೂರು:ಅಕ್ಟೋಬರ್ 23 ರಂದು ನಡೆಯುವ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಶಾಸಕರಾದ ಡಾ.ಎಸ್.ರಫೀಕ್ಅಹಮದ್ ಅವರು ಹೆಚ್.ಎಂ.ಎಸ್ ವಿದ್ಯಾಸಂಸ್ಥೆ ಹಾಗೂ ಇನ್ನಿತರ ಶಿಕ್ಷಣ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಶಿಹುಲಿಕುಂಟೆ ಮಠ್ ಪರವಾಗಿ ಮತಯಾಚನೆ ಮಾಡಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಅವರ ಪತ್ನಿ ಡಾ.ಅಮೂಲ್ಯ,ಹೆಚ್.ಎಂ.ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಫ್ತಾಬ್ ಅಹಮದ್,ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಶೆಟ್ಟಿಹಳ್ಳಿ ಮುಖ್ಯರಸ್ತೆ ಹಾಗೂ ಶಿರಾಗೇಟ್ನಲ್ಲಿ ಇರುವ ಹೆಚ್.ಎಂ.ಎಸ್ ಶಿಕ್ಷಣ ಸಂಸ್ಥೆಯ ಐಟಐ, ಡಿಪ್ಲಮೋ, ಸೂಫಿಯಾ ಕಾನೂನು ಕಾಲೇಜು, ಶಿರಾಗೇಟ್ನ ಹೆಚ್.ಎಂ.ಎಸ್ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ಅವರ ಪರವಾಗಿ ಪ್ರಚಾರ ನಡೆಸಿದರು.
ಕಳೆದ ಮೂರುವರೆ ವರ್ಷಗಳಿಂದ ಕಾಂಗ್ರೆಸ್ ಪಕ್ಷರಾಜ್ಯದಲ್ಲಿ ಅಧಿಕಾರದಲ್ಲಿದ್ದು,ಯುವಜನರಿಗಾಗಿ ಯುವನಿಧಿಯನ್ನು ಜಾರಿಗೊಳಿಸುವ ಮೂಲಕ ಎರಡು ವರ್ಷಗಳ ಕಾಲ ನಿರುದ್ಯೋಗಿ ಯುವಜನರ ಬದುಕಿಗೆ ಆಧಾರವಾಗಿದೆ.ಅಲ್ಲದೆ ವಿದ್ಯಾರ್ಥಿಗಳಿಗೆ ಉಚಿತ ಬಸ್,ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿಯೋಜನೆ,ಗೃಹಲಕ್ಷ್ಮಿ ಯೋಜನೆಗಳಿಗೆ ಮಹಿಳೆರ ಅರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿವೆ.ಯುವಕರಾಗಿರುವ ನಮ್ಮ ಪಕ್ಷದಅಭ್ಯರ್ಥಿ ಪದವಿಧರರ ಸಮಸ್ಯೆಗಳ ಕುರಿತುಸದನದಲ್ಲಿ ಧ್ವನಿ ಎತ್ತಲಿದ್ದಾರೆ.ಹಾಗಾಗಿ ಪದವಿಧರರು ಕಾಂಗ್ರೆಸ್ ಪಕ್ಷದಅಭ್ಯರ್ಥಿಗೆ ಮೊದಲ ಪ್ರಾಶಸ್ತö್ಯದ ಮತ ನೀಡುವಂತೆ ಡಾ.ರಫೀಕ್ಅಹಮದ್ ಮನವಿ ಮಾಡಿದರು.
ವರದಿ : ಕೆ ಬಿ ಚಂದ್ರಚೂಡ್
