ಚನ್ನರಾಯಪಟ್ಟಣ: ಇತ್ತೀಚೆಗೆ ನಿಧನರಾದ ಗುತ್ತಿಗೆದಾರ ಯಾಳನಹಳ್ಳಿ ವೈ.ಎನ್. ಮಹೇಶ್ ಅವರ ಕುಟುಂಬಕ್ಕೆ ಚನ್ನರಾಯಪಟ್ಟಣ ಕಂಟ್ರಾಕ್ಟರ್ ಅಸೋಸಿಯೇಷನ್ ಅಂಡ್ ಕ್ಲಬ್ (ರಿ.) ವತಿಯಿಂದ ₹1.60 ಲಕ್ಷ ಆರ್ಥಿಕ ನೆರವು ನೀಡಲಾಯಿತು.
ನವೆಂಬರ್ 4, 2026ರಂದು ನಿಧನರಾದ ಸಂಘದ ಸದಸ್ಯ ವೈ.ಎನ್. ಮಹೇಶ್ ಅವರ ನಿವಾಸಕ್ಕೆ ಸಂಘದ ಪದಾಧಿಕಾರಿಗಳು ಭೇಟಿ ನೀಡಿ, ಮೃತರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಎ.ಆರ್. ಕಾವ್ಯ ಅವರಿಗೆ ₹1,60,000 ಮೊತ್ತದ ಚೆಕ್ ವಿತರಿಸಿದರು.

ಕುಟುಂಬಕ್ಕೆ ಯಾವುದೇ ರೀತಿಯ ಸಹಾಯ ಅಥವಾ ಸಹಕಾರದ ಅಗತ್ಯವಿದ್ದಲ್ಲಿ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಿ.ಬಿ. ಗಂಗಾಧರ್, ಗೌರವಾಧ್ಯಕ್ಷ ಬಿ.ಎಚ್. ಶಿವಣ್ಣ, ಉಪಾಧ್ಯಕ್ಷ ಎ.ಜೆ. ಲಕ್ಕೇಗೌಡ, ಕಾರ್ಯದರ್ಶಿ ಶಿವರಾಜ್ ಕಲಸಿಂದ, ಸಹ ಕಾರ್ಯದರ್ಶಿ ಎಂ. ನಿಂಗೇಗೌಡ, ಖಜಾಂಚಿ ಎನ್.ಬಿ. ಸೋಮಶೇಖರ್, ನಿರ್ದೇಶಕರಾದ ಬೊಮ್ಮೇಗೌಡ, ಚೆಲುವೇಗೌಡ, ಜಯಶಂಕರ್, ಪುಟ್ಟೇಗೌಡ ಸೇರಿದಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷ ಎಸ್.ಬಿ. ಜಗದೀಶ್, ಮಾಜಿ ಅಧ್ಯಕ್ಷ ಕೆ.ಜೆ. ಸುರೇಶ್, ಮಾಜಿ ಖಜಾಂಚಿ ಸಿ.ಕೆ. ನರೇಂದ್ರಬಾಬು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
