ಮನಸು ಮೃದಂಗ
(ಲೇಖನಗಳ ಸಂಕಲನ)
ಭೋಗ ಯೋಗ
ಗುಂಡ “ಡಾಕ್ಟ್ರೇ ಸಂಭೋಗ ಮತ್ತು ಸಂಯೋಗಗಳ ಅರ್ಥಗಳು ತಿಳಿಯದಾಗಿದೆ. ತಾವು ನನ್ನ ಪ್ರಶ್ನಗೆ ಸಮರ್ಥ ಹಾಗು ಸಮಂಜಸ ಉತ್ತರವನ್ನು ನೀಡ ಬಲ್ಲಿರಾ”?
ಅನೇಕ ಸ್ತ್ರೀ ಹಾಗು ಪುರುಷರು ವೈದ್ಯರ ವಾಚನ ಕೇಳಲು ಆಗಿಮಿಸಿದ್ದರಿಂದ ಅವರ ಶಿಷ್ಯೋತ್ತಮನ ಪ್ರಶ್ನೆಗೆ ಕ್ಷಣ ಅವಕ್ಕಾದರು. ತಾಳ್ಮೆಯನ್ನು ಕಳೆದುಕೊಳ್ಳದೆ ಉತ್ತಿರಿಸಲು “ಒಳ್ಳೆಯ ಪ್ರಶ್ನೆ ಕೆಳಿದ್ದೀ ಶಿಷ್ಯ. ನನ್ನ ವಿಚಾರದಲ್ಲಿ ಎರೆಡೂ ಒಂದೇ. ಈ ವಿಚಾರವನ್ನ ತಿಳಿದಕೊಳ್ಳಬೇಕಾದವನು ಜ್ಞಾನ ಚಿತ್ತ್ತನಾಗಿರಬೇಕು ಹಾಗು ಸಂಯಮದಿಂದ ವರ್ಥಿಸಬೇಕು. ನನ್ನ ವಿಚಾರದಲ್ಲಿ ಇವರೆಡರಲ್ಲು ಕೂಡುವಿಕೆಯೇ ಪ್ರಧಾನ.
ನನಗೆ ಬೋಗ ಮತ್ತು ಯೋಗ ತದ್ವಿರುದ್ದವಾಗಿ ಕಂಡರೂ ಯೋಗವಿರುವ ಜಾಗದಲ್ಲಿ ಭೋಗವಿದೆ ಹಾಗೆಯೇ ಭೋಗವಿರುವ ಜಾಗದಲ್ಲಿ ಯೋಗವಿದೆ. ಇಲ್ಲಿನ ದ್ವೀಪದಲ್ಲಿ “ಸಂ” ಒಂದೇ ಆಗಿರುವದರಿಂದ ಓದುವವನಿಗೆ ದ್ವಂದ್ವಾರ್ಥದಿಂದ ಕಾಣುವುದಾಗಿರುತ್ತೆ. ಇಲ್ಲಿಯ “ಸಂ”ನ ಅರ್ಥ “ಸ್ವಯಂ” ಎಂದು. ಇದನ್ನು ನಮಗೆ, ನಾನು ಅಥವ ನಾವುಗಳು ಎಂಬ ಸಾಂಧರ್ಬಿಕ ಪದಗಳನ್ನಾಗಿ ಉಪಯೋಗಿಸಬಹುದು.
ಸರಳವಾಗಿ ಹೇಳಬೇಕೆಂದರೆ “ನಾವೆಲ್ಲಾ ಒಂದೇ” ಎಂದು. ಮಾನವನು ಸಹಜವಾಗಿಯೆ ಒಂದು ಹಂತದವರೆಗೂ ಭೋಗತಪ್ತನಾಗಿಯೇ ಇರುತ್ತಾನೆ. ಈ ಭೋಗಾವಸ್ಥೆ ಅವನ ಏಳಿಗೆಗೆ ಪೂರಕ. ಅವನ ಆರ್ಥಿಕ ಅಭಿವೃದ್ದಿ, ಸ್ಥಾನಾವಕಾಶ, ಹೆಸರು ಗಳಿಕೆಗಳಿಗೆ ಈ ಭೋಗವೇ ಇಂಧನ. ಇದರಿಂದ ಭೋಗವು ಇಲ್ಲಿ ಉಪಯುಕ್ತ ಮತ್ತು ಯೋಗವು ನಿರುಪಯುಕ್ತ.
ಇಷ್ಟೆಲ್ಲಾ ಹೇಳಿದ ನನಗೆ ಯೋಗವು ವೈರುತ್ವವೆ ಸರಿ, ಕಾರಣವೇನೆಂದರೆ ಇಂದಿನ ಭೋಗಕ್ಕೆ ಯೋಗವೇ ಮೂಲ. ಭೋಗವು ಅನೀತಿ ಸಂಪಾದನೆಯಲ್ಲ, ವೃತ್ತಿ ಸಂಪಾದನೆಯೇ ನಿಜವಾದ ಭೋಗ. ಈ ಕಾರಣದಿಂದಲೇ ನಾನು ಹೇಳುವುದು “ಭೋಗ ಯೋಗ” ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.
ಯೋಗವೆಂದರೆ ಕಲಿಯುವುದು, ಕಲಿತ್ತಿದ್ದನ್ನ ಅರ್ಥೈಸುವುದು. ಅರ್ಥೈಸಿಕೊಳ್ಳುವುದು ಜ್ಞಾನ ಹಾಗು ಪ್ರೇಮಗಳಿಂದಲೇ ಸಾಧ್ಯ. ವೃತ್ತಿಯನ್ನು ಯಾರು ಪ್ರೀತಿಸುತ್ತಾರೊ ಅವರಿಗೆ ಅವರ ಅರಿವಿಲ್ಲದೇ ಭೋಗ ಪ್ರಾಪ್ತಿ ಆಗುವುದರಲ್ಲಿ ಸಂದೆಹವಿಲ್ಲ. ಇಂದಿನ ಯಾಂತ್ರಿಕ ಬದುಕಿನಲ್ಲಿ ಪ್ರೇಮ, ಪ್ರೀತಿ ಜಾಣ ಕುರಡಾಗಿದೆ. ಈ ಕುರುಡುತನದಿಂದ ಪ್ರೇಮವು ಕಾಮಾಂಧತೆಗೆ ವಾಲಿದೆ. ಅದೇ ಕಾಮವು ಕಾಮಕೇಳಿಗೆ ಪರಿವರ್ಥನೆಯಾಗಿದೆ. ಇದರಿಂದಾಗಿ ಸಂಭೋಗವು ತ್ವರಿತ ಗತಿಯಲ್ಲಿ ಸಾಗಿದೆ. ಇದರಿಂದ ಕಂಡರಿಯದ ಮಾನಸಿಕ ಸಮಸ್ಯೆಗಳು ಉದಯಿಸುತ್ತಿವೆ. ಈ ಸಮಸ್ಯೆಗಳು ನಿವಾರಣೆ ಆಗಬೇಕಾದರೆ ಸಂಭೋಗವು ಸಂಯೋಗವಾಗಿ ಕಾಣಬೇಕಾಗಿದೆ. ಪವಿತ್ರ ಸಂಬಧ, ಅನುಬಂಧ, ಆತ್ಮವಿಶ್ವಾಸ, ಪರ ನಂಬಿಕೆ, ವಿಶ್ವಶಾಂತಿ, ಮಧುರ ಪ್ರೇಮ, ಹೃದಯ ಪ್ರೀತಿಗಳು ಮಾತ್ರ ಪರಿವರ್ಥನೆಯ ಮಾಪನಗೆಳೆಂಬುದು ನನ್ನ ವಾದ.
ಯೋಗಿಗೆ ಕಲಿತ ಯೋಗವು ಬಂಧನ ಮುಕ್ತ. ಆದರೆ ಸಾಮನ್ಯ ಮಾನವನಿಗೆ ಪ್ರೀತಿ ಪ್ರೇಮಾಂಕುರವೆ ಜೀವನದ ಮುಕ್ತಿ. ಈ ಮುಕ್ತಿಯ ವಿಶೇಷಗಳೇನಂದರೆ ಜಗಳವಿಲ್ಲ, ಹೊಡೆದಾಟವಿಲ್ಲ, ಒಂದೇ ಮನ, ಒಂದೇ ಜಾತಿ, ಒಂದೇ ಧರ್ಮ ಮತ್ತು ಎಲ್ಲವೂ “ಒಂದೇ”.
ಮೊದಲನೆಯದಾಗಿ ಒಬ್ಬ ವ್ಯಕ್ತಿಯು ಯೋಗಾನಂದನಾಗಬೇಕಾದರೆ ಅರಿವುಳ್ಳವನಾಗಿರಬೇಕು. ಸಹ ಪ್ರೇಮವುಳ್ಳವನಾಗಿರಬೇಕೆಂದಿದ್ದರೆ ಕಾಮಾಂಧತೆಯನ್ನು ಪ್ರತಿಭೆಯ ಬೆಳಕಿನಲ್ಲಿ ಬೆಳಗಿಸಬೇಕು. ಅಂದಃಕಾರದಲ್ಲಿ ಅರಿವೆಂಬುದು ಕನಿಷ್ಠ ಮಾರ್ಗದಲ್ಲಿದ್ದು ಕ್ಷಣಕಾಲದಲ್ಲೆ ಮಾನವನ ಶಕ್ತಿ ಆರಿಹೋಗಿಬಿಡುತ್ತದೆ. ಇದನ್ನೆ ತ್ವರಿತ ಕಾಮವೆನ್ನುವದು. ಚೇತನಮಯವಾಗಿದ್ದರೆ ಆ ಶಕ್ತಿಯು ಉತ್ಕೃಷ್ಠ ಮಾರ್ಗದಲ್ಲೆ ಸದಾ ಕಾಲ ಆರದೆ ಉಳಿದು ಹೋಗಿಬಿಡುತ್ತದೆ. ಬೋಗ ಒಂದು ವಸ್ತು, ಅದು ಆಸೆಯ ಬದಕು. ಇಡೀ ವಿಶ್ವವನ್ನ ಮಾಯಾ ಪರದೆಯೊಳಗೆ ಹಿಡಿದಿಟ್ಟಿರುವುದರಿಂದ ಎಲ್ಲರು ಭೋಗವನ್ನು ಪಡೆಯಲು ಹಾತೋರೆಯುತ್ತಿರುತ್ತಾರೆ.
ಮಾಯೆಯೊಳಗೆ ಸುಖ, ಮೋಜು, ಆಸೆ, ಮಸ್ತಿ, ಮತ್ತು ವ್ಯಸನ ಮನುಷ್ಯನ ಪಂಚೇಂದ್ರೀಯಗಳ ಹಿಡಿತದಿಂದ ಭಂದಿತನಾಗಿರುತ್ತಾನೆ. ಪಂಚೇಂದ್ರಿಯಗಳಲ್ಲಿ ಒಂದಾದ ಸ್ಪರ್ಶವು ತೀರಾ ಕೆಳಮಟ್ಟದ್ದಾದ್ದರಿಂದ ಮನೋಕಾಮನೆಯು ರಸಾಯನಿಕ ಕ್ರಿಯೆಗೆ ಅನುಗುಣವಾಗಿರುತ್ತದೆ. ಆ ಕಾಮನೆಗಳು ಮಾತಿಗಾಗಲಿ, ಕಣ್ಣಿೆಗಾಗಲಿ, ಅಥವಾ ಮಿದುಳಿಗೆ ಸಂಭಂದ ಪಟ್ಟಿದ್ದರೂ ಅವನ ಅರಿವಿಗೆ ಬರದೆ ಇರುವುದರಿಂದ ಅನರ್ಥ, ಅನುಮಾನ, ಚಂಚಲತೆ, ಅನೈತಿಕತೆ, ಮಾನಸಿಕ ನ್ಯೂನತೆ, ಮನೋ ವಿಕಲತೆ ಹಾಗು ವ್ಯಸನಗಳನ್ನಷ್ಟೆ ನೋಡಬಹುದಾಗಿದೆ. ಇದರಿಂದಾಗಿ ಮಾನಿಸಿಕ ಮತ್ತು ಶರೀರ ನೊವುಗಳನ್ನು ಕಂಡುಕೊಳ್ಳವವನಾಗುತ್ತಾನೆ. ಕಾಮನೆಗಳ ಅಜ್ಞಾನ ಹಾಗು ಅವೈಜ್ಞಾನಿಕ ಕಾರಣಗಳಿಂದ ಸಮಸ್ತ ವಿಶ್ವವು ಹೋಳಾಗಿದೆ ಮತ್ತು ವಿಶ್ವಾಸವು ಹಾಳಾಗಿದೆ.
ಉಪನಿಷತ್ ಮತ್ತು ಪುರಾಣ ತತ್ವ ಗ್ರಂಥಗಳಲ್ಲಿ “ಧಾತು”ವು ಆತ್ಮ ಭಿಂದು ಮತ್ತು ಶಕ್ತಿದಾಯಕ. ಈ ಅತೀವ ಶಕ್ತಿಯನ್ನು ತಣಿಸದೆ ಇದ್ದಾಗ ಮನೋ ಉದ್ವೇಗೆಕ್ಕೆ ಒಳಗಾಗಿ ತನ್ನ ಹಿಡತದಿಂದ ವಂಚಿತಗೊಂಡು ಅನೇಕ ಸಮಸ್ಯೆಗಳಿಗೆ ಕಾರಣಕರ್ತನಾಗುವನು. ಇಲ್ಲಿ ಯೋಗವು ಫಲಕಾರಿ. ಯೋಗವೆಂದರೆ ಬ್ರಹ್ಮರ್ಯವಲ್ಲ, ಇದು ಯೋಗದ ಅಷ್ಠಾಂಗಳಲ್ಲಿ ಒಂದು. ಈ ಕಾರಣದಿಂದಲೆ ಇಂದು ನಿಜವಾದ ಯೋಗಿಗಳು ಕಾಣುವುದಿಲ್ಲ.
ಸಾಮನ್ಯವಾಗಿ ಮಾನವ ತನ್ನ ಕೆಂದ್ರ ಬಿಂದುವಾದ “ಧಾತು” ಅಥವ ಶಕ್ತಿಯನ್ನು ನಿಯಂತ್ರಿಸಲು ನಿಯಂತ್ರಣ ಹೀನನಾಗಿರುವುದರಿಂದ ಶೋಕ, ಉದ್ವೇಗ ಮತ್ತು ಅನೇಕ ಅವಾಂತರಗಳಿಗೆ ಸಿಕ್ಕಿಕೊಳ್ಳುತ್ತಾನೆ, ಅಚೇತನಾ ಸ್ಥಿತಿಗೆ ಹೋಗಿ ಮಂಕನ್ನು ತಂದುಕೊಳ್ಳುತ್ತಾನೆ ಅಥವ ಖಿನ್ನತೆಗೆ ಒಳಗಾಗುತ್ತಾನೆ. ಇಂತಹ ಸ್ಥಿತಿಯಲ್ಲಿ ಸುಖವನ್ನು ಕಾಣಲು ಹೋಗಿ ಅವನ ಮನಸ್ಸಿನ ಕತ್ತಲಿಂದ ಹೊರ ಬಾರದೆ ಹಾಗು ಏನೂ ಕಾಣದೆ ದೇಹ ಮತ್ತು ಮನಿಸ್ಸಿಗೆ ಘಾಸಿಗಳಿಸಿಕೊಳ್ಳುತ್ತಾನೆ. ಇದರಿಂದ ಮಾನವನು ಮುಕ್ತಿ ಹೊಂದಬೇಕಾದರೆ ಯೋಗವು ಉಪಯುಕ್ತ.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

