ತುಮಕೂರು: ಖ್ಯಾತ ವಿಜ್ಞಾನಿ ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಪದ್ಮಶ್ರೀ ಡಾ. ಎ.ಎಸ್. ಕಿರಣ್ ಕುಮಾರ್ ಮತ್ತು ಪವಾಡ ಸದೃಶ ಪ್ರತಿಭೆ ಹಾಗೂ ವಿಜ್ಞಾನ ಸಾಧನೆಗಳ ಮೂಲಕ ಜನಪ್ರಿಯರಾಗಿರುವ ಹುಲಿಕಲ್ ನಟರಾಜ್ ಅವರನ್ನು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಭೇಟಿ ಮಾಡಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕೈಗಾರಿಕೋದ್ಯಮಿ ಜಾವೀದ್ ಬೇಗ್, ಗುರುಪ್ರಸಾದ್, ರಾಮಯ್ಯ, ಪ್ರಕಾಶ್ ಚಕ್ರವರ್ತಿ, ರೆಹಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
