ತುಮಕೂರು:ಧಾರ್ಮಿಕವಾಗಿ ರಾಜ್ಯದ ಎಲ್ಲ ಜನರನ್ನು ಒಗ್ಗೂಡಿಸುವಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ||ಡಿ.ವೀರೇಂದ್ರಹೆಗ್ಗಡೆರವರ ಪಾತ್ರ ದೊಡ್ಡದು,ರಾಜ್ಯದಲ್ಲಿ ಮೂರೂವರೆ ಕೋಟಿ ಜನರು ಧರ್ಮಸ್ಥಳ ಸಂಘದ ಫಲಾನುಭವಿಗಳಿದ್ದಾರೆ,ಹೆಣ್ಣು ಮಕ್ಕಳು ಮನಸ್ಸುಮಾಡಿದರೆ ಏನು ಬೇಕಾದರೂ ಸಾಧಿಸಬಹುದು,ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಹೆಗ್ಗಡೆರವರು ತಾವು ಖಾತರಿ ನೀಡಿ ಸಾಲ ಕೊಡಿಸುತ್ತಿದ್ದಾರೆ,ಸಮಾಜದ ಅಭ್ಯದಯಕ್ಕೆ,ಸಮಾಜದ ಒಳಿತಿಗಾಗಿ ಸದಾ ಚಿಂತನೆ ಮಾಡುತ್ತಾ ಸಹಾಯ ಮಾಡುತ್ತಿದ್ದಾರೆ,ಶ್ರೀಕ್ಷೇತ್ರದಿಂದ ಸಾವಿರಾರು ದೇವಾಲಯಗಳ ಜೀರ್ಣೋದ್ಧಾರ ಮಾಡಿದ್ದಾರೆ,ದೇವಾಲಯಗಳು,ಹಾಲು ಉತ್ಪಾದಕರ ಸಂಘದ ಕಟ್ಟಡಗಳಿಗೆ ಅನುದಾನ,ಕೆರೆ ಅಭಿವೃದ್ಧಿ,ಶುದ್ಧಗಂಗಾ ಹೀಗೆ ಸಾವಿರಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ ಇದು ದಾಖಲೆ ಮಟ್ಟದ ಸಮಾಜಕ್ಕೆ ಸಹಾಯ ಮಾಡುತ್ತಿದ್ದಾರೆ,ತಾಯಂದಿರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು,ಸಂಸ್ಕೃತಿ ಬೆಳೆಸಬೇಕೆಂದು ತುಮಕೂರು ಹಿರೇಮಠದ ಅಧ್ಯಕ್ಷರಾದ ಡಾ||ಶಿವಾನಂದಶಿವಾಚಾರ್ಯಸ್ವಾಮೀಜಿಗಳು ತಿಳಿಸಿದರು.
ಅವರು ಇಂದು ಕ್ಯಾತ್ಸಂದ್ರದ ಬಲಿಜ ಸಮುದಾಯ ಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ),ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜಾ ಸಮಿತಿ,ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ರಾಜ್ಯದ ಮಹಿಳೆಯರಿಗೆ ಶ್ರೀ ಧರ್ಮಸ್ಥಳ ಸಂಘದಿAದ 1ಲಕ್ಷದ 50 ಸಾವಿರ ಕೋಟಿ ರೂಗಳ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ವಿತರಿಸಿದ್ದೇವೆ,ಇದರಿಂದ ಬಡವರು ಮತ್ತು ಮಧ್ಯಮ ವರ್ಗದ ಮಹಿಳೆಯರು ಸಾಲ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ,ಉಳಿತಾಯದ ಮನೋಭಾವನೆಯನ್ನು ಹೊಂದಿದ್ದಾರೆ,ರೂಡ್ ಜೆಡ್ ಮೂಲಕ ಸ್ವ ಉದ್ಯೋಗದ ತರಬೇತಿಯನ್ನು ನೀಡುತ್ತಿದ್ದೇವೆ, 1ಕೋಟಿಗೂ ಅಧಿಕ ಇಂತಹ ಕಾರ್ಯಕ್ರಮಗಳನ್ನು ಮಾಡಿದ್ದೇವೆ,ಕುಡಿತದ ಚಟ ಬಿಡಿಸಲು ಮಧ್ಯವರ್ಜನ ಶಿಬಿರಗಳನ್ನು ನಡೆಸುತ್ತಿದ್ದೇವೆ,ಹಿರಿಯ ವೃದ್ಧರಿಗೆ ಮನೆ ಇಲ್ಲದವರಿಗೆ ವಾತ್ಸಲ್ಯ ಯೋಜನೆ ಮುಖಾಂತರ ಉಚಿತ ಮನೆಗಳನ್ನು ಕಟ್ಟಿಕೊಟ್ಟಿದ್ದೇವೆ,ಪ್ರತಿ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಶುದ್ಧಗಂಗಾ ಯೋಜನೆ ಮುಖಾಂತರ ಶುದ್ಧ ನೀರು ನೀಡುತ್ತಿದ್ದೇವೆ,ಸಮಾಜಕ್ಕೆ ಆರ್ಥಿಕ ಚೈತನ್ಯ ತುಂಬುತ್ತಾ ಪೂಜ್ಯ ಖಾವಂದರ ಮೂಲಕ ಮಾರ್ಗದರ್ಶನವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ರವೀಶ್ ಯಜಮಾನ್ ರವರು ಪೂಜ್ಯ ಹೆಗ್ಗಡೆರವರು ಮಹಿಳೆಯರ ಅಭ್ಯುದಯಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಸಮಾಜಕ್ಕೆ ಸದಾ ಮಾರ್ಗದರ್ಶಕರಾಗಿದ್ದಾರೆ,ಸಹಕಾರಿ ತತ್ವದ ಮೇಲೆ ಬ್ಯಾಂಕ್ ಗಳಿಂದ ಸಾಲವನ್ನು ಕೊಡಿಸಿ ಮಹಿಳೆಯರಿಗೆ ಧ್ವನಿಯಾಗಿದ್ದಾರೆ,ಧಾರ್ಮಿಕ ಶೈಕ್ಷಣಿಕ,ಆರ್ಥಿಕವಾಗಿ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡುತ್ತಾ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಶಶಿಕಲಾಗಂಗಹನುಮಯ್ಯ,ಶ್ರೀಮತಿ ನವೀನಅರುಣ್ ಕುಮಾರ್,ಶ್ರೀಮತಿ ಹೆಚ್.ಎಸ್.ನಿರ್ಮಲಶಿವಕುಮಾರ್, ಪ್ರಭಾಕರ್, ಸೋಮಣ್ಣ, ಕೆ.ಉಮೇಶ್, ಶ್ರೀಮತಿ ಸುಮಲತಾ, ಶ್ರೀಮತಿಶೈಲಜಾ, ಮೇಲ್ವಿಚಾರಕರಾದ ಮಹಂತೇಶ್,ಲೋಕೇಶ್ ಇತರರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
