ತುಮಕೂರು: ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ ನವದೆಹಲಿಯ ತುಮಕೂರು ಜಿಲ್ಲಾ ಶಾಖೆಯ ಉದ್ಘಾಟನೆ ನ.26ರಂದು ಅಮಾನಿಕೆರೆ ಎದುರು ಇರುವ ಕನ್ನಡಭವನದಲ್ಲಿ ಮಧ್ಯಾಹ್ನ 2:30ಕ್ಕೆ ನಡೆಯಲಿದೆ,ದಿವ್ಯಸಾನಿಧ್ಯವನ್ನು ಹಿರೇಮಠದ ಡಾ||ಶ್ರೀಶಿವಾನಂದಶಿವಾಚಾರ್ಯಸ್ವಾಮೀಜಿಗಳು ವಹಿಸಲಿದ್ದಾರೆ,ಉಪಲೋಕಾಯುಕ್ತರಾದ ಡಾ||ಕೆ.ಎನ್.ಫಣೀಂದ್ರರವರು ಉದ್ಘಾಟಿಸಲಿದ್ದಾರೆ,ಅಧ್ಯಕ್ಷತೆಯನ್ನು ಎಸ್.ಬಸವರಾಜುಐನಾಪುರರವರು ವಹಿಸಲಿದ್ದಾರೆ,ಮುಖ್ಯ ಅತಿಥಿಗಳಾಗಿ ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮೊಹಮದ್ ಅಶ್ರಫ್ ಆರಿಸ್,ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಲೋಕೇಶಧನಪಾಲಹವಲೆ ಆಗಮಿಸಲಿದ್ದಾರೆ,

ಅತಿಥಿಗಳಾಗಿ ಡಾ||ಭದ್ರಶೆಟ್ಟಿ, ಲೋಕಾಯುಕ್ತ ಎಸ್.ಪಿ.ಟಿ.ಮಲ್ಲೇಶ್,ಎಸ್.ಗುರುಸ್ವಾಮಿ,ಡಾ||ದಯಾನಂದ,ಡಾ||ಹೆಚ್.ಬಿ.ಎಂ.ಹಿರೇಮಠ,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಲ್.ಯೋಗೀಶ್ ರವರು ಆಗಮಿಸಲಿದ್ದಾರೆ, ಆದ್ದರಿಂದ ಸಾರ್ವಜನಿಕರು ಮತ್ತು ನಗರದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಾಲ್ಲೋಕು ಅಧ್ಯಕ್ಷರಾದ ಆರ್.ಎಸ್.ವೀರಪ್ಪದೇವರು ರವರು ಮನವಿ ಮಾಡಿದ್ದಾರೆ.
