ಬೆಂಗಳೂರು: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಚರ್ಚೆಯಲ್ಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿಗಣತಿ ವರದಿ-2015) ವರದಿಯನ್ನು ಇಂದು ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ. ವರದಿಗೆ ಬಹುತೇಕ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ. ಇದರ ನಡುವೆ ಜಾತಿವಾರು ಜನಸಂಖ್ಯೆ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಬರೋಬ್ಬರಿ 169 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿರುವ ವರದಿಯನ್ನು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿದ್ದು, ವರದಿಯಲ್ಲಿನ ಅಂಶಗಳ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಲಿದ್ದಾರೆ.
ಕರ್ನಾಟಕದಲ್ಲಿ ಜಾತಿವಾರು ಜನಸಂಖ್ಯೆ ಅಂಕಿ ಅಂಶ
- ಪರಿಶಿಷ್ಟ ಜಾತಿ(ಎಸ್ಸಿ ) 1.08 ಕೋಟಿ
- ಮುಸ್ಲಿಮರು 70 ಲಕ್ಷ
- ಲಿಂಗಾಯತ: 65 ಲಕ್ಷ
- ಒಕ್ಕಲಿಗ: 60 ಲಕ್ಷ
- ಕುರುಬರು 45 ಲಕ್ಷ
- ಪರಿಶಿಷ್ಟ ಪಂಗಡ(ಎಸ್’ಟಿ) 40.45 ಲಕ್ಷ
- ಈಡಿಗ: 15 ಲಕ್ಷ
- ವಿಶ್ವಕರ್ಮ: 15
- ಬೆಸ್ತ: 15 ಲಕ್ಷ
- ಬ್ರಾಹ್ಮಣ: 14 ಲಕ್ಷ
- ಗೊಲ್ಲ(ಯಾದವ) 10 ಲಕ್ಷ
- ಮಡಿವಾಳ ಸಮಾಜ: 6
- ಅರೆ ಅಲೆಮಾರಿ 6 ಲಕ್ಷ
- ಕುಂಬಾರ 5 ಲಕ್ಷ
- ಸವಿತಾ ಸಮಾಜ 5 ಲಕ್ಷ
( ಸೋರಿಕೆಯಾದ ಜಾತಿವಾರು ಅಂಕಿಸಂಖ್ಯೆ ಅಧಿಕೃತವಲ್ಲ)
