ಟಿ.ನರಸೀಪುರ : ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಗೆ ಸಕಲ ಸಿದ್ದತೆ ಕೈಗೊಂಡಿರುವ ಅಭಿಮಾನಿಗಳು.
ಪಟ್ಟಣದ ಪುರಸಭೆ ಸೇರಿದಂತೆ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿಯನ್ನು ಆಚರಿಸಿ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕೈಗೊಂಡಿರುವ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಅಧಿಕಾರಿಗಳು ಸೇರಿದಂತೆ ತಾಲ್ಲೂಕಿನ ಹಲವಾರು ಮುಖಂಡರು ಭಾಗಿಯಾಗುತ್ತಿದ್ದಾರೆ.

ಪ್ರತಿ ಗ್ರಾಮಗಳಲ್ಲೂ ಮನೆ,ಮನೆಗಳಲ್ಲೂ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು ಹಸಿರು,ತೋರಣ,ರಂಗೋಲೆಗಳಿಂದ ಸಿಂಗರಿಸಿ,ಮೈಕ್ ಸೆಟ್ ಮೂಲಕ ಅಂಬೇಡ್ಕರ್ ಗೀತೆಗಳನ್ನು ಹಾಕುವ ಮೂಲಕ ಜಯಂತಿಯನ್ನು ಆಚರಿಸಲು ಸಕಲ ಸಿದ್ದತೆ ಕೈಗೊಂಡಿದ್ದಾರೆ.
ಊರಿನ ಯುವಕರು, ಪ್ರಮುಖರು,ಯಜಮಾನರು ಜಯಂತಿಗೆ ಬೇಕಾದ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು ಎಲ್ಲಿ,ನೋಡಿದರಲ್ಲಿ ಪ್ಲೆಕ್ಸ್ ಗಳು,ಅಂಬೇಡ್ಕರ್ ಭಾವ ಚಿತ್ರಗಳಿಗೆ ಹೂವಿನಿಂದ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜಯಂತಿ ಆಚರಣೆಗೆ ಮೆರಗು ನೀಡಲು ಅಭಿಮಾನಿಗಳು ಸಜ್ಜುಗೊಂಡಿದ್ದಾರೆ.
