ಕೆ.ಆರ್.ಪೇಟೆ.-ಬಸವಣ್ಣನವರು ನೀಡಿರುವ ಕಾಯಕ ತತ್ವ ಇಡೀ ಜಗತ್ತಿಗೆ ಆದರ್ಶ. ಪ್ರತಿಯೊಬ್ಬ ವ್ಯಕ್ತಿಯೂ ಕಾಯಕ ಮಾಡಬೇಕು. ಶರಣರ ಸಮಾಜದಲ್ಲಿ ಸೋಮಾರಿಗಳಿಗೆ ಸ್ಥಾನವೇ ಇರಲಿಲ್ಲ. ಸತ್ಯ, ಶುದ್ಧವಾದ ದುಡಿಮೆಯ ಶ್ರಮ ಸಂಸ್ಕೃತಿಯೇ ಶರಣರ ಆದರ್ಶವಾಗಿತ್ತು ಎಂದು ಶಾಸಕ ಹೆಚ್.ಟಿ ಮಂಜು ಹೇಳಿದರು.
ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಕೆ.ಪಿ.ಎಸ್ ಶಾಲಾ ಆವರಣ ನಡೆದ ಶ್ರೀ ಬಸವಣ್ಣ ನವರ ಜಯಂತೋತ್ಸವ ಆಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದುಡಿಯುವವರೇ ಬೇರೆ, ಅವರ ದುಡಿತದ ಫಲವನ್ನು ಅನುಭವಿಸುವವರೇ ಬೇರೆಯಾಗಿದ್ದ ಕಾಲದಲ್ಲಿ ಬೆವರು ಸುರಿಸಿ ದುಡಿಯುವವರೇ ನಿಜವಾದ ಶರಣರು ವ್ಯಾಖ್ಯಾನಿಸುವ ಮೂಲಕ ದುಡಿದು ಜೀವಿಸುವದನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಕಾಯಕ ಕಡ್ಡಾಯ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದ ಅವರು.12 ನೇ ಶತಮಾನದಲ್ಲಿ ಮೂಢನಂಬಿಕೆಗಳನ್ನು ಹೋಗಲಾಡಿಸಲು ಹಾಗೂ ಜಾತಿರಹಿತ ಸಮಾಜವನ್ನು ನಿರ್ಮಾಣ ಮಾಡಲು ಬಸವಣ್ಣನವರು ಶ್ರಮಿಸಿದರು. ಜಾತಿಪದ್ಧತಿಯನ್ನು ಹೋಗಲಾಡಿಸಿ ಸಮಾನ ಸಮಾಜವನ್ನು ನಿರ್ಮಿಸಲು ಅಂತರ್ಜಾತಿ ವಿವಾಹಗಳ ಮೂಲಕ ಕಲ್ಯಾಣ ಕ್ರಾಂತಿಯನ್ನು ಉಂಟು ಮಾಡಿದರು. ಇಂತಹ ಮಹನೀಯರನ್ನ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಶಾಸಕ ಹೆಚ್.ಟಿ ಮಂಜು ತಿಳಿಸಿದರು.

ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಕಾಪನಹಳ್ಳಿ ಗವಿಮಠ ಪೀಠಧ್ಯಕ್ಷರಾದ ಶ್ರೀ ಚನ್ನವಿರ ಮಹಾಸ್ವಾಮಿಗಳು ಬಸವಣ್ಣನವರ ಮೌಲ್ಯಗಳು, ಚಿಂತನೆಗಳು ಸೂರ್ಯ ಚಂದ್ರ ಇರುವವರೆಗೂ ಹಾಗೂ ಸರ್ವಕಾಲಕ್ಕೂ ದಾರಿದೀಪವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಪಠ್ಯ ಪುಸ್ತಕದ ಹೊರತಾಗಿ, ಪ್ರತಿ ಮನೆಗಳಲ್ಲೂ ಬಸವಣ್ಣನ ವಿಚಾರಧಾರೆಗಳನ್ನು ತಿಳಿಸುವ ಕಾರ್ಯಮಾಡಬೇಕು ನಮ್ಮ ನಾಡಿನ ಕಲೆ, ಸಂಸ್ಕೃತಿಯನ್ನು ಉಳಿಸುವಂತಹ ಕಾರ್ಯವನ್ನು ಬಸವಣ್ಣನವರು ತಮ್ಮ ವಚನಗಳ ಮೂಲಕ ಮಾಡಿದ್ದಾರೆ.ಬಸವಣ್ಣನವರ ಭಾವಚಿತ್ರವನ್ನು ಕೇವಲ ಗೋಡೆಗೆ ಸೀಮಿತವಾಗಿಸದೆ ಪ್ರತಿಯೊಬ್ಬರು ತಮ್ಮ ಆತ್ಮ ಮತ್ತು ಮನಸ್ಸಿನಲ್ಲಿ ಅವರ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳೋಣ ಎಂದು ಆಶೀರ್ವಾಚನ ನೀಡಿದರು.
ಬಳಿಕ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸುಜೇಂದ್ರ ಕುಮಾರ್ ಬಸವಣ್ಣನ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂದು ಅವರು ವಚನಗಳ ಮೂಲಕ ನುಡಿದಿದ್ದ ಮಾತುಗಳನ್ನು ಪಾಲಿಸಿದರೆ ಇಡೀ ಸಮಾಜವು ಶಾಂತಿಯ ನೆಲೆವೀಡಾಗುವುದರಲ್ಲಿ ಸಂಶಯವಿಲ್ಲ.ಬಸವೇಶ್ವರರು ಮಾನವೀಯತೆಯ ಏಕತೆ, ಸಮಾನತೆ, ಸಹೋದರತ್ವದ ಸಂದೇಶವನ್ನು ವಿಶ್ವಾ ದ್ಯಂತ ನೀಡಿದ್ದರಿಂದ ಸಮಕಾಲೀನ ಮತ್ತು ಪ್ರಗತಿ ಪರ ಸಮಾಜವನ್ನು ನಿರ್ಮಿಸಲು ಅತ್ಯಂತ ಪ್ರಸ್ತುತರಾಗಿದ್ದಾರೆ.ಬಸವಣ್ಣ ಅವರ ನೇತೃತ್ವದಲ್ಲಿ ಜಾತಿ ಭೇದ ಮತ್ತು ಲಿಂಗತಾರಮ್ಯವಿಲ್ಲದ ಸಮಾಜವನ್ನು ರೂಪಿಸುವ ಕೆಲಸ ನಡೆಯಿತು. ಭಾರತದ ಸಂವಿಧಾನವು ಇದನ್ನೇ ಎತ್ತಿ ಹಿಡಿದಿದೆ. ಬಸವಣ್ಣ ಅವರು ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ತಾತ್ವಿಕ ಮೌಲ್ಯಗಳನ್ನು ಬಸವಣ್ಣ ಪ್ರತಿಪಾದಿಸಿದ್ದರಲ್ಲದೆ, ಸಾಮಾಜಿಕ ಜಾಗೃತಿಯನ್ನು ಉತ್ತೇಜಿಸಿದರು. ಅಂತರ್ಜಾತಿಯ ವಿವಾಹಕ್ಕೆ ಪ್ರೋತ್ಸಾಹ, ಸಹಭೋಜನಕ್ಕೆ ಪ್ರೋತ್ಸಾಹ, ಅಸ್ಪೃಶ್ಯತೆಯ ಖಂಡನೆ, ಶಕ್ತಿ ವಿಶಿಷ್ಟಾದೈತ ಸಿದ್ಧಾಂತ ಪ್ರತಿಪಾದನೆ, ದಾಸೋಹ ತತ್ವವನ್ನು ಪ್ರತಿಪಾದಿಸು ತ್ತಾರೆ. ಪ್ರತಿಯೊಬ್ಬರು ತಮ್ಮ ಆದಾಯದಲ್ಲಿ ಒಂದು ಪಾಲನ್ನು ದಾಸೋಹಕ್ಕೆ ಮೀಸಲಿಡಬೇಕು ಎಂದು ಹೇಳಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಕೆ ಆರ್ ಪೇಟೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ಕಾರ್ಯಕ್ರಮದ ವೇದಿಕೆಯವರೆಗೂ ಶ್ರೀ ಬಸವೇಶ್ವರರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಹಾಗೂ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀಗಳ ಭಾವಚಿತ್ರವನ್ನು ಕಾರ್ಯಕ್ರಮದ ಅದ್ದೂರಿ ಮೆರವಣಿಗೆ ಮೂಲಕ ಕರೆಕಲಾಯಿತು.ಉಪನ್ಯಾಸಕ ಡಿಂಕಾ ಮಹೇಶ್ ವಿಶ್ವಗುರು ಬಸವಣ್ಣರ ಬಗ್ಗೆ ಪ್ರಧಾನ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷರಾದ ತೊಟ್ಟಪ್ಪಶೆಟ್ಟಿ,ಬ್ಯಾಂಕ್ ಪರಮೇಶ್,ಸಾಸಲು ಈರಪ್ಪ,ವಿ.ಎಸ್ ಧನಂಜಯ್ ಕುಮಾರ್ ಗ್ರೇಟ್ 2 ತಹಸೀಲ್ದಾರ್ ಲೋಕೇಶ್, ಈ.ಓ ಸುಷ್ಮಾ, ಕ್ಷೇತ್ರ ಶಿಕ್ಷಣ ಅಧಿಕಾರಿ ವೈ.ಕೆ ತಿಮ್ಮೆಗೌಡ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಆನಂದ್ ಕುಮಾರ್, ಶಿಕ್ಷಕ ಹಳಿಯೂರು ಯೋಗೇಶ್,ಪಟ್ಟಣದ ಇನ್ಸ್ಪೆಕ್ಟರ್ ಸುಮಾರಾಣಿ,ಗ್ರಾಮಾಂತರ ಇನ್ಸ್ಪೆಕ್ಟರ್ ಆನಂದ್,ಕಸಬಾ ಹೋಬಳಿ ಆರ್.ಐ ಜ್ಞಾನೇಶ್, ಬೂಕನಕೆರೆ ಹೋಬಳಿ ಆರ್.ಐ ಚಂದ್ರಕಲಾ,ತಾಲ್ಲೂಕು ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಜಗದಂಬ,ನಿರ್ದೇಶಕರಾದ ಸಾಸಲು ಗುರು, ಅಪ್ಪಾಜಿ,ಶಿವಕುಮಾರ್, ಪ್ರಭುಕುಮಾರ್,ಯುವ ಮುಖಂಡ ವಡ್ಡರಹಳ್ಳಿ ಮಧು,ಲಿಂಗಾಪುರ ಯಶವಂತ್,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
