ಹಾಸನ :- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಹಾಸನ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ, ಡಾ|| ಎಪಿಜೆ, ಮೌಲಾನ ಆಜಾದ್ ಮಾದರಿ (ಆಂಗ್ಲ ಮಾದ್ಯಮ) ಶಾಲೆಗಳಲ್ಲಿ ಹಾಗೂ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಮೊರಾರ್ಜಿ ದೇಸಾಯಿ ವಸತಿ, ಮೌಲಾನಾ ಆಜಾದ್ ಕಾಲೇಜುಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಿನ ಹಿತ ದೃಷ್ಟಿಯಿಂದ ನೇರ ನೇಮಕಾತಿ, ಬಡ್ತಿ, ವರ್ಗಾವಣೆ ಮೂಲಕ ಹುದ್ದೆ ಭರ್ತಿ ಮಾಡುವವರೆಗೆ ಅಥವಾ ಪ್ರಸಕ್ತ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅತಿಥಿ ಶಿಕ್ಷಕರು, ಉಪನ್ಯಾಸಕರಿಂದ ಅರ್ಜಿ ಅಹ್ವಾನಿಸಲಾಗಿದೆ.
ವಿಷಯವಾರು ಅತಿಥಿ ಶಿಕ್ಷಕರ ಖಾಲಿ ಹುದ್ದೆ ವಿವರ: ಕನ್ನಡ03, ಇಂಗ್ಲೀಷ್ 03, ಉರ್ದು 03, ಗಣಿತ 06, ವಿಜ್ಞಾನ 02, ಸಮಾಜ ವಿಜ್ಞಾನ 04 ವಿಷಯವಾರು ಅತಿಥಿ ಉಪನ್ಯಾಸಕರ ಖಾಲಿ ಹುದ್ದೆ ವಿವರ: ಕನ್ನಡ 03, ಇಂಗ್ಲಿಷ್ 04, ಭೌತಶಾಸ್ತ್ರ 03, ರಸಾಯನ ಶಾಸ್ತ್ರ 03, ಜೀವ ಶಾಸ್ತ್ರ 03, ಗಣಿತ 03, ಇತಿಹಾಸ 01, ಅರ್ಥ ಶಾಸ್ತ್ರ 01, ವ್ಯವಹಾರ ಶಾಸ್ತ್ರ 01, ಕಂಪ್ಯೂಟರ್ ಸೈನ್ಸ್ 01, ಲೆಕ್ಕಶಾಸ್ತ್ರ 02 ಆಸಕ್ತರು ಅರ್ಜಿಯನ್ನು https://dom.karnataka.gov.in/ ಅಥವಾ ಜಿಲ್ಲಾ ಅಧಿಕಾರಿಗಳ ಕಚೇರಿ, ಜಿಲ್ಲಾ ಮತ್ತು ತಾಲ್ಲೂಕು ಮಾಹಿತಿ ಕೇಂದ್ರಗಳಿಗೆ ಸಂಬಂಧಪಟ್ಟ ಶಾಲಾ ಕಾಲೇಜುಗಳಿಂದ ಪಡೆದು ದೃಢಿಕೃತ ದಾಖಲೆಗಳೊಂದಿಗೆ ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಾಸನ ಇಲ್ಲಿಗೆ ಮೇ.19 ರೊಳಗೆ ಅರ್ಜಿಗಳನ್ನು ಸಲ್ಲಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಷರತ್ತುಗಳು: ಅತಿಥಿ ಶಿಕ್ಷಕರಿಗೆ B.Sc, B.com, B.A ಪದವಿ ಯೊಂದಿಗೆ B.Ed ಪಡೆದವರಿಗೆ ಆದ್ಯತೆ. ಅತಿಥಿ ಉಪನ್ಯಾಸಕರಿಗೆB.Sc, B.com, B.A ಯೊಂದಿಗೆ B.Ed & & ಸ್ನಾತಕೋತರ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನ ಆಜಾದ್ ಭವನ, ಶ್ರೀ ವಿದ್ಯಾಗಣಪತಿ ದೇವಸ್ಥಾನದ ಅಡ್ಡ ರಸ್ತೆ, ಆಕಾಶವಾಣಿ ಹಿಂಭಾಗ, ಸಾಲಗಾಮೆ ರಸ್ತೆ, ಹಾಸನ-573202. ದೂರವಾಣಿ ಸಂಖ್ಯೆ 08172-267373 ಸಂಪರ್ಕಿಸಬಹುದು.
