“ಗಿರೀಶ್ ಕಾರ್ನಾಡ್
~~~~~~~~~~~~~~~~~~~~~~~~
1. ಗಿರೀಶ್ ಕಾರ್ನಾಡ್ ಅವರ ಜನನ ದಿನಾಂಕ ಯಾವುದು?
1) 19 ಮೇ 1938 2) 27 ಮೇ 1938 3)15 ಮೇ 1938
2. ಗಿರೀಶ್ ಕಾರ್ನಾಡ್ ಅವರ ಜನ್ಮಸ್ಥಳ ಯಾವುದು?
1) ಮಾಥೆರಾನ. 2) ಮಥುರಾ. 3) ಶಿರಸಿ
3. ಗಿರೀಶ್ ಕಾರ್ನಾಡ್ ಅವರ ತಂದೆಯ ಹೆಸರೇನು?
1) ಸತ್ಯನಾಥ ಕಾರ್ನಾಡ್. 2) ರಾಮನಾಥ ಕಾರ್ನಾಡ್. 3) ರಘುನಾಥ ಕಾರ್ನಾಡ್
4. ಗಿರೀಶ್ ಕಾರ್ನಾಡ್ ಅವರ ತಾಯಿಯ ಹೆಸರೇನು?
1) ಸಕ್ಕೂಬಾಯಿ. 2) ಕೃಷ್ಣಬಾಯಿ. 3)ಪಂಡರೀಬಾಯಿ
5. ಗಿರೀಶ್ ಕಾರ್ನಾಡ್ ಅವರು ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಮಾಡಿದ ಸ್ಥಳ ಯಾವುದು?
1) ಮುಂಬೈ. 2) ಸಿದ್ಧಾಪುರ. 3) ಶಿರಸಿ
6. ಗಿರೀಶ್ ಕಾರ್ನಾಡ್ ಅವರ ಮೊದಲ ಸಾಹಿತ್ಯ ಕೃತಿ ಯಾವುದು?
1) ಯಯಾತಿ. 2) ಹಯವದನ 3)ತಲೆದಂಡ
7. ಗಿರೀಶ್ ಕಾರ್ನಾಡ್ ಅವರು ಬಿಬಿಸಿ ಗಾಗಿ ಭಾರತದ 50 ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ಬರೆದ ನಾಟಕ ಯಾವುದು?
1) ಟಿಪ್ಪುವಿನ ಕನಸುಗಳು. 2) ತಲೆದಂಡ. 3)ಅಗ್ನಿ ಮತ್ತು ಮಳೆ
8. ಗಿರೀಶ್ ಕಾರ್ನಾಡ್ ಅವರ ಆತ್ಮಚರಿತ್ರೆಯ ಕೃತಿಯ ಶೀರ್ಷಿಕೆ ಯಾವುದು?
1) ಅಂಜು ಮಲ್ಲಿಗೆ. 2) ಆಡಾಡತ ಆಯುಷ್ಯ. 3) ಒಡಕಲು ಬಿಂಬ
9. ಗಿರೀಶ್ ಕಾರ್ನಾಡ್ ಅವರು ನಿರ್ದೇಶಿಸಿದ ಕುವೆಂಪು ಕೃತಿ ಆಧಾರಿತ ಚಲನಚಿತ್ರ ಯಾವುದು?
1) ಮಂತ್ರ ಮಾಂಗಲ್ಯ. 2) ಬೊಮ್ಮನಹಳ್ಳಿಯ ಕಿಂದರಿ ಜೋಗಿ. 3) ಕಾನೂರು ಸುಬ್ಬಮ್ಮ ಹೆಗ್ಗಡತಿ
10. ಪರಿಸರ ವಿನಾಶವನ್ನು ಕುರಿತಂತೆ ಗಿರೀಶ್ ಕಾರ್ನಾಡ್ ಅವರು ನಿರ್ದೇಶಿಸಿದ ಕಿರುತೆರೆ ಸಾಕ್ಷ್ಯಚಿತ್ರ ಯಾವುದು?
1) ಚೆಲುವಿ. 2) ಗೋಧೂಳಿ. 3) ಹಿಟ್ಟಿನ ಹುಂಜ
11. ಗಿರೀಶ್ ಕಾರ್ನಾಡ್ ಅವರ ಬಾಳಸಂಗಾತಿಯ ಹೆಸರೇನು?
1) ಡಾ.ವಸುಮತಿ. 2) ಡಾ.ಅರುಂಧತಿ. 3)ಡಾ.ಸರಸ್ವತಿ
12. ಕಳರಿಯಪಟ್ಟು ಸಾಹಸ ಕಲೆಯನ್ನು ಗಿರೀಶ್ ಕಾರ್ನಾಡ್ ಅವರು ಯಾವ ಚಿತ್ರದಲ್ಲಿ ಅಳವಡಿಸಿದ್ದಾರೆ?
1) ನಾಗಮಂಡಲ. 2) ಒಂದಾನೊಂದು ಕಾಲದಲ್ಲಿ. 3) ಆಘಾತ
13. ಗಿರೀಶ್ ಕಾರ್ನಾಡ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದ ವರ್ಷ ಯಾವುದು?
1) 1998 2) 1986 3) 2006
14. ಗಿರೀಶ್ ಕಾರ್ನಾಡ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಜನಪದ ಕಥೆಯಾಧಾರಿತ ಕೃತಿ ಯಾವುದು?
1) ತಲೆದಂಡ. 2) ಯಯಾತಿ. 3)ನಾಗಮಂಡಲ
15. ಗಿರೀಶ್ ಕಾರ್ನಾಡ್ ಅವರು ದೈವಾಧೀನರಾದ ದಿನಾಂಕ ಯಾವುದು?
1) 10 ಜೂನ್ 2019 2) 10 ಜುಲೈ 2019 3) 10 ಮೇ 2019
~~~~~~~~~~~~~~~~~~~~~~~~~~
★ಉತ್ತರಗಳು:-
1) 19 ಮೇ 1938
2) ಮಾಥೆರಾನ.
3) ರಘುನಾಥ ಕಾರ್ನಾಡ್
4)ಕೃಷ್ಣಬಾಯಿ
5) ಶಿರಸಿ
6) ಯಯಾತಿ
7)ಟಿಪ್ಪುವಿನ ಕನಸುಗಳು
8) ಆಡಾಡತ ಆಯುಷ್ಯ
9)ಕಾನೂರು ಸುಬ್ಬಮ್ಮ ಹೆಗ್ಗಡತಿ
10)ಚೆಲುವಿ
11) ಡಾ.ಸರಸ್ವತಿ
12)ಒಂದಾನೊಂದು ಕಾಲದಲ್ಲಿ
13)1998
14)ನಾಗಮಂಗಲ
15) 10 ಜೂನ್ 2019
*******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
