“ಜನ್ನ”
~~~~~~
1. ಜನ್ನ ಕವಿಯ ಜನ್ಮಸ್ಥಳ ಯಾವುದು?
1) ಸಿಂದಗಿ. 2) ಕೊಂಡಗೂಳಿ. 3)ಹಳೇಬೀಡು
2. ಜನ್ನ ಕವಿಯ ತಂದೆಯ ಹೆಸರೇನು?
1) ಶಂಕರ. 2) ಚನ್ನಕೇಶವ. 3) ಮಹಾದೇವ
3. ಜನ್ನ ಕವಿಯ ತಾಯಿಯ ಹೆಸರೇನು?
1) ಇಂದ್ರಾಣಿ. 2) ಗೌರೀ. 3) ಗಂಗಾದೇವಿ
4. ‘ಸೂಕ್ತಿ ಸುಧಾರ್ಣವ’ ಕೃತಿ ರಚಿಸಿದ ಯಾರಿಗೆ ಜನ್ನಕವಿಯ ತಂಗಿಯನ್ನು ಮದುವೆ ಮಾಡಲಾಗಿತ್ತು?
1) ಮಲ್ಲಿಕಾರ್ಜುನ. 2) ಚಂದ್ರಶೇಖರ. 3)ನಾಗವರ್ಮ
5. ಜನ್ನಕವಿಯ ಸೋದರಳಿಯನಾದ ಪ್ರಸಿದ್ಧ ವೈಯಾಕರಣಿ ಯಾರು?
1) ಕೌಶಿಕ ರಾಜ. 2) ಕೇಶಿರಾಜ. 3)ನಾಗಚಂದ್ರ
6. ಜನ್ನಕವಿಗೆ ‘ಕವಿ ಚಕ್ರವರ್ತಿ’ ಎಂಬ ಬಿರುದು ನೀಡಿದ ಹೊಯ್ಸಳ ದೊರೆ ಯಾರು?
1) ವಿಷ್ಣುವರ್ಧನ. 2) ವೀರ ಬಲ್ಲಾಳ. 3)ನರಸಿಂಹ ಬಲ್ಲಾಳ
7. ಕಂದಪದ್ಯಗಳಿಂದಲೇ ರಚಿತವಾದ ಜನ್ನನ ಕಾವ್ಯಯಾವುದು?
1) ಯಶೋಧರ ಚರಿತ್ರೆ. 2) ಅನಂತ ಪುರಾಣ. 3) ಅನುಭವ ಮುಕುರ
8. ಜನ್ನಕವಿಯ ‘ ಅನಂತ ಪುರಾಣ’ ಕೃತಿಯ ಮೂಲ ಆಕರ ಉತ್ತರಪುರಾಣವನ್ನು ಬರೆದವರು ಯಾರು?
1) ಅಳಸಿಂಗಾಚಾರ್ಯ. 2) ಸುಭದ್ರಾಚಾರ್ಯ. 3) ಗುಣಭದ್ರಾಚಾರ್ಯ
9. ಜೈನರ ಹದಿನಾಲ್ಕನೇ ತೀರ್ಥಂಕರನನ್ನು ಕುರಿತು ಜನ್ನ ರಚಿಸಿದ ಕಾವ್ಯ ಯಾವುದು?
1) ಪಾರ್ಶ್ವನಾಥ ಪುರಾಣ. 2) ವೃಷಭದೇವನ ಚರಿತೆ. 3) ಅನಂತಪುರಾಣ
10. “ನೇಮಿ ಜನ್ನಮರೀರ್ವರೇ ಕರ್ಣಾಟ ಕೃತಿಗೆ ಸೀಮಾಪುರುಷರ್” ಎಂದು ಹೇಳಿದವರು ಯಾರು?
1) ಚನ್ನಕೇಶವ. 2) ಮಧುರಕವಿ. 3)ಮಧುರಚೆನ್ನ
11. ಜನ್ನ ಕವಿಯ ಧರ್ಮಪತ್ನಿಯ ಹೆಸರೇನು?
1) ಪಾರ್ವತಿ ದೇವಿ. 2) ಲಕುಮಾದೇವಿ. 3)ಸತೀದೇವಿ
12. ಜನ್ನ ಕವಿಯ ಧರ್ಮ ಗುರು
1) ರಾಮಚಂದ್ರ ದೇವಮುನಿ. 2) ವಿಶ್ವಾಮಿತ್ರ ದೇವಮುನಿ. 3) ವಾಸುದೇವ ಮುನಿ
13. ಜನ್ನ ಕವಿಯ ಉಪಾಧ್ಯಾಯರು ಯಾರು?
1) ಇಮ್ಮಡಿ ನಾಗರಾಜ. 2) ಇಮ್ಮಡಿ ನಾಗಚಂದ್ರ. 3) ಇಮ್ಮಡಿ ನಾಗವರ್ಮ
14. ಯಶೋಧರ ಚರಿತೆ ಕೃತಿಯಲ್ಲಿ ಅಷ್ಟಾವಕ್ರನನ್ನು ಪ್ರೇಮಿಸಿದ ರಾಜಪತ್ನಿ ಯಾರು?
1) ಅರುಂಧತಿ. 2) ಅಮೃತಮತಿ. 3)ವಸುಮತಿ
15. ಜನ್ನ ಕವಿಯು ಯಾವ ಧರ್ಮಕ್ಕೆ ಸೇರಿದವನು?
1) ಸಿಖ್ ಧರ್ಮ. 2) ಬೌದ್ಧಧರ್ಮ. 3)ಜೈನಧರ್ಮ
~~~~~~~~~~~~~~~~~~~~~~~~~~
★ಉತ್ತರಗಳು:-
1.ಕೊಂಡಗೂಳಿ
2.ಶಂಕರ
3.ಗಂಗಾದೇವಿ
4.ಮಲ್ಲಿಕಾರ್ಜುನ
5.ಕೇಶಿರಾಜ
6.ವೀರಬಲ್ಲಾಳ
7.ಯಶೋಧರ ಚರಿತ್ರೆ
8.ಗುಣಭದ್ರಾಚಾರ್ಯ
9.ಅನಂತ ಪುರಾಣ
10.ಮಧುರ ಕವಿ
11.ಲಕುಮಾದೇವಿ
12.ರಾಮಚಂದ್ರ ದೇವಮುನಿ
13.ಇಮ್ಮಡಿ ನಾಗವರ್ಮ
14.ಅಮೃತಮತಿ
15.ಜೈನಧರ್ಮ
*******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಕವಿಚಕ್ರವರ್ತಿ ಜನ್ನನ ಕುರಿತು ತಿಳಿಯಲು ಇಲ… […]
[…] […]