“ಲಕ್ಷ್ಮೀಶ “
~~~~~~~~~~~~~~~~~~~
1. ಲಕ್ಷ್ಮೀಶ ಕವಿಯ ಹುಟ್ಟಿದ ಸ್ಥಳ ಯಾವುದು?
1) ಕಡೂರು. 2) ದೇವನೂರು. 3)ಬೀರೂರು
2. ಲಕ್ಷ್ಮೀಶ ಕವಿ ವಿರಚಿತ ‘ಜೈಮಿನಿ ಭಾರತ’ ಕೃತಿಯು ಯಾವ ಪ್ರಕಾರದಲ್ಲಿದೆ?
1) ಕುಸುಮ ಷಟ್ಪದಿ. 2) ಶರ ಷಟ್ಪದಿ. 3)ವಾರ್ಧಕ ಷಟ್ಪದಿ
3. ಲಕ್ಷ್ಮೀಶ ಕವಿಯ ಮೂಲ ಹೆಸರೇನು?
1) ಶ್ರೀಕಾಂತ. 2) ರಮಾಕಾಂತ. 3)ಚಂದ್ರಕಾಂತ
4. ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಕೃತಿಯಲ್ಲಿರುವ ಅಧ್ಯಾಯಗಳ ಸಂಖ್ಯೆ ಎಷ್ಟು?
1) 19 2) 34 3) 46
5. ಲಕ್ಷ್ಮೀಶ ಕವಿಯು ಉಪಮಾಲಂಕಾರವನ್ನು ಹೆಚ್ಚಾಗಿ ಬಳಸಿದುದರಿಂದ ದೊರೆತ ಬಿರುದು ಯಾವುದು?
1) ಕಾವ್ಯಸಿಂಧೂರ. 2) ನಾದಲೋಲ. 3)ಉಪಮಾಲೋಲ
6. ಸಂಸ್ಕೃತದ ಜೈಮಿನಿ ಭಾರತದ ಮೂಲ ಕೃತಿಕಾರ ಯಾರು?
1) ಜೈಮಿನಿ ಮುನಿ. 2) ಶ್ರೀಪಾದ ಋಷಿ. 3) ಕಣಾದ ಮಹರ್ಷಿ
7. ಲಕ್ಷ್ಮೀಶ ಕವಿಯ ಜೀವಿತ ಕಾಲ ಸರಿಸುಮಾರು ಯಾವ ಶತಮಾನ?
1) 9ನೇ ಶತಮಾನ. 2) 12ನೇ ಶತಮಾನ. 3) 16 ನೇ ಶತಮಾನ
8. ಲಕ್ಷ್ಮೀಶ ಕವಿಯ ತಂದೆ ಯಾರು?
1) ಅಣ್ಣಮಾಂಕ. 2) ರಾಘವಾಂಕ. 3)ಕೃಷ್ಣವಾಂಕ
9. ಲಕ್ಷ್ಮೀಶನು ಜೈಮಿನಿ ಭಾರತ ಕೃತಿಯಲ್ಲಿ ಮಹಾಭಾರತದ ಯಾವ ಪರ್ವವನ್ನು ವಿಸ್ತರಿಸಿದ್ದಾನೆ?
1) ಅರಣ್ಯ ಪರ್ವ. 2) ವಿರಾಟ ಪರ್ವ. 3)ಅಶ್ವಮೇಧ ಪರ್ವ
10. ಲಕ್ಷ್ಮೀಶ ಕವಿಯ ಜೈಮಿನಿ ಭಾರತದ ಮೊದಲ ಪದ್ಯದಲ್ಲಿರುವ ಆರಂಭದ ಪದ ಯಾವುದು?
1) ಶ್ರೀವರ. 2) ಶ್ರೀವಧು. 3)ಮಧುಶ್ರೀ
11. ಲಕ್ಷ್ಮೀಶ ಕವಿಯ ಜೈಮಿನಿ ಭಾರತದಲ್ಲಿ ಕಥಾನಾಯಕ ಯಾರು?
1) ಶ್ರೀಕೃಷ್ಣ. 2) ಧರ್ಮರಾಯ. 3)ಅರ್ಜುನ
12. ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಕೃತಿಯಲ್ಲಿರುವ ಒಟ್ಟು ಪಾತ್ರಗಳು ಎಷ್ಟು?
1) 303 2) 101 3) 252
13. ಲಕ್ಷ್ಮೀಶ ಕವಿಯು ‘ಜೈಮಿನಿ ಭಾರತ’ದಲ್ಲಿ ಬಳಸಿರುವ ಶಬ್ದಾಲಂಕಾರಗಳ ಸಂಖ್ಯೆ ಎಷ್ಟು?
1) 386 2) 186 3) 206
14. ಲಕ್ಷ್ಮೀಶ ಕವಿಯು ‘ಸುರ್ರನೆ, ಕಿರ್ರನೆ, ಕರ್ರನೆ, ಘರ್ರನೆ, ತಿರ್ರನೆ, ಸರ್ರನೆ’ ಈ ಶಬ್ದಗಳನ್ನು ಬಳಸಿ ವರ್ಣಿಸಿರುವ ಸನ್ನಿವೇಶ ಯಾವುದು?
1) ಪಟ್ಟಾಭಿಷೇಕ. 2) ಒಡ್ಡೋಲಗ. 3)ರಣರಂಗ
15. ಲಕ್ಷ್ಮೀಶ ಕವಿಯ “ಸ್ವರ್ಗಕ್ಕಿಂತಲೂ ನನಗೆ ನನ್ನೂರೆ ದೊಡ್ಡದು, ದೇವನೂರೇ _____” ಹೇಳಿಕೆಯಲ್ಲಿ ಬಿಟ್ಟ ಶಬ್ದ ಯಾವುದು?
1) ಕೈಲಾಸ. 2)ವೈಕುಂಠ. 3) ಅಮರಾವತಿ
~~~~~~~~~~~~~~~~~~~~~~~~~
★ಉತ್ತರಗಳು:-
1) ದೇವನೂರು 2)ವಾರ್ಧಕ ಷಟ್ಪದಿ 3) ಶ್ರೀಕಾಂತ 4) 34 5) ಉಪಮಾಲೋಲ 6) ಜೈಮಿನಿ ಮುನಿ 7) 16 ನೇ ಶತಮಾನ 8) ಅಣ್ಣಮಾಂಕ 9)ಅಶ್ವಮೇಧ ಪರ್ವ 10) ಶ್ರೀವಧು 11) ಶ್ರೀಕೃಷ್ಣ 12) 252 13) 186 14)ರಣರಂಗ 15)ಕೈಲಾಸ
********
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
ಚಂದ್ರಶೇಖರ ಕಂಬಾರ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]