“ಚಂದ್ರಶೇಖರ ಕಂಬಾರ”
~~~~~~~~~~~~~~~~~~~
1. ಚಂದ್ರಶೇಖರ ಕಂಬಾರ ಅವರ ಜನ್ಮಸ್ಥಳ ಯಾವುದು?
1) ಘೋಡಗೇರಿ. 2) ಹುಕ್ಕೇರಿ. 3) ಬೆಳಗಾವಿ
2. ಚಂದ್ರಶೇಖರ ಕಂಬಾರ ಅವರು ಹುಟ್ಟಿದ ದಿನಾಂಕ ಯಾವುದು?
1) 02 ಜನವರಿ 1945 2) 02 ಜನವರಿ 1930 3) 02 ಜನವರಿ 1937
3. ಚಂದ್ರಶೇಖರ ಕಂಬಾರ ಅವರ ತಂದೆಯ ಹೆಸರೇನು?
1) ಆದಿಕೇಶವ ಕಂಬಾರ. 2) ಚನ್ನಬಸಪ್ಪ ಕಂಬಾರ. 3) ಬಸವಣ್ಣೆಪ್ಪ ಕಂಬಾರ
4. ಚಂದ್ರಶೇಖರ ಕಂಬಾರ ಅವರ ತಾಯಿಯ ಹೆಸರೇನು?
1) ಶಾರದಮ್ಮ. 2) ಚೆನ್ನಮ್ಮ. 3) ಬಸಮ್ಮ
5. ಚಂದ್ರಶೇಖರ ಕಂಬಾರ ಅವರು ಯಾವ ವಿಶ್ವವಿದ್ಯಾಲಯದ ಮೊದಲ ಉಪ ಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದರು?
1) ಕನ್ನಡ ವಿ.ವಿ, ಹಂಪಿ. 2) ಕುವೆಂಪು ವಿ.ವಿ, ಶಿವಮೊಗ್ಗ. 3) ಮಾನಸ ಗಂಗೋತ್ರಿ ವಿ.ವಿ, ಮೈಸೂರು
6. ಚಂದ್ರಶೇಖರ ಕಂಬಾರ ಅವರ ಯಾವ ಚಿತ್ರದಲ್ಲಿ “ಕಾಡು ಕುದುರೆ ಓಡಿ ಬಂದಿತ್ತಾ…” ಎಂಬ ಜನಪ್ರಿಯ ಗೀತೆ ಇದೆ?
1) ಕರಿಮಾಯಿ. 2) ಸಿಂಗಾರವ್ವ ಮತ್ತು ಅರಮನೆ. 3) ಕಾಡು ಕುದುರೆ
7. ಚಂದ್ರಶೇಖರ ಕಂಬಾರ ಅವರು ಕಿರುತೆರೆಗೆ ಅಳವಡಿಸಿರುವ ಕಾದಂಬರಿ ಯಾವುದು?
1) ಅಣ್ಣ ತಂಗಿ. 3) ಕರಿಮಾಯಿ. 3) ಜೀಕೆ ಮಾಸ್ತರರ ಪ್ರಣಯ ಪ್ರಸಂಗ
8. ಚಂದ್ರಶೇಖರ ಕಂಬಾರ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟ ನಾಟಕ ಯಾವುದು?
1)ಸಂಗ್ಯಾ ಬಾಳ್ಯ. 2) ಸಿರಿಸಂಪಿಗೆ. 3)ಹರಕೆಯ ಕುರಿ
9. ಚಂದ್ರಶೇಖರ ಕಂಬಾರ ಅವರ “ಕಾಡು ಕುದುರೆ ಓಡಿ ಬಂದಿತ್ತಾ…..” ಗೀತೆಯ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಗಾಯಕರು ಯಾರು?
1) ಎಸ್.ಪಿ.ಬಾಲಸುಬ್ರಹ್ಮಣ್ಯಂ. 2) ಶಿವಮೊಗ್ಗ ಸುಬ್ಬಣ್ಣ. 3) ಸಿ.ಅಶ್ವತ್ಥ್
10. ಡಾ. ವಿಷ್ಣುವರ್ಧನ್ ಅಭಿನಯದಲ್ಲಿ ಚಂದ್ರಶೇಖರ ಕಂಬಾರ ಅವರ ನಾಟಕವನ್ನಾಧರಿಸಿ ತೆರೆಕಂಡ ಚಲನಚಿತ್ರ
1) ಹರಕೆಯ ಕುರಿ. 2) ಬಂಧನ. 3)ಈ ಬಂಧನ
11. ಚಂದ್ರಶೇಖರ್ ಕಂಬಾರ ವಿರಚಿತ “ರೆಂಬೆ ಕೊಂಬಿಯ ಮ್ಯಾಗ ಗೂಡು ಕಟ್ಟಿದಾವ ರೆಕ್ಕೆ ಬಲಿತ ಹಕ್ಕಿ…” ಹಾಡು ಶೀರ್ಷಿಕೆ ಗೀತೆಯಾಗಿರುವ ಧಾರಾವಾಹಿ ಯಾವುದು?
1) ಬದುಕು. 2) ನಂದಗೋಕುಲ. 3)ಮೂಡಲ ಮನೆ
12. ಚಂದ್ರಶೇಖರ ಕಂಬಾರ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದ ವರ್ಷ ಯಾವುದು?
1) 2014 2) 2006 3) 2010
13. ಚಂದ್ರಶೇಖರ ಕಂಬಾರ ಅವರಿಗೆ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ತಂದುಕೊಟ್ಟ ನಾಟಕ ಯಾವುದು?
1) ಹುಲಿಯ ನೆರಳು. 2) ಜೋಕುಮಾರ ಸ್ವಾಮಿ. 3) ಋಷ್ಯಶೃಂಗ
14. ಚಂದ್ರಶೇಖರ ಕಂಬಾರ ಅವರು 2004 – 2010 ಅವಧಿಯಲ್ಲಿ ಯಾವ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು?
1) ಜೆಡಿಎಸ್. 2) ಬಿಜೆಪಿ. 3) ಕಾಂಗ್ರೆಸ್
15. ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ ಯಾವುದು?
1) ಧಾರವಾಡ. 2) ಕಲಬುರ್ಗಿ. 3)ರಾಯಚೂರು
~~~~~~~~~~~~~~~~~~~~~~~~~~
★ಉತ್ತರಗಳು:-
1) ಘೋಡಗೇರಿ
2) 02 ಜನವರಿ1937
3) ಬಸವಣ್ಣೆಪ್ಪ ಕಂಬಾರ
4) ಚೆನ್ನಮ್ಮ
5) ಕನ್ನಡ ವಿ.ವಿ. ಹಂಪಿ
6) ಕಾಡು ಕುದುರೆ
7) ಜೀಕೆ ಮಾಸ್ತರರ ಪ್ರಣಯ ಪ್ರಸಂಗ
8) ಸಿರಿಸಂಪಿಗೆ
9) ಶಿವಮೊಗ್ಗ ಸುಬ್ಬಣ್ಣ
10) ಹರಕೆಯ ಕುರಿ
11) ಮೂಡಲ ಮನೆ.
12) 2010
13) ಜೋಕುಮಾರ ಸ್ವಾಮಿ
14) ಕಾಂಗ್ರೆಸ್
15) ಧಾರವಾಡ
********
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
ಕವಿಚಕ್ರವರ್ತಿ ಜನ್ನನ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

[…] ಚಂದ್ರಶೇಖರ ಕಂಬಾರ ಕುರಿತು ತಿಳಿಯಲು ಇಲ್ಲಿ… […]