” ಅನಕೃ ”
~~~~~~~~~~~~~
1. ಅ.ನ.ಕೃಷ್ಣರಾಯ ಅವರ ಜನ್ಮ ದಿನಾಂಕ ಯಾವುದು?
1) 09 ಮೇ 1908 2) 15 ಮೇ 1908 3) 03 ಮೇ 1908
2. ಅ.ನ.ಕೃಷ್ಣರಾಯ ಅವರ ಅವರ ತಂದೆಯ ಹೆಸರೇನು?
1) ನಾಗರಾಜ್ ರಾವ್. 2) ನರಸಿಂಹ ಮೂರ್ತಿ. 3) ನರಸಿಂಗ ರಾವ್
3. ಅ.ನ.ಕೃಷ್ಣರಾಯ ಅವರ ತಾಯಿಯ ಹೆಸರೇನು?
1) ಪೂರ್ಣಿಮಾ. 2) ಅನ್ನಪೂರ್ಣಮ್ಮ. 3)ಸುನಂದಮ್ಮ
4. ಅ.ನ.ಕೃಷ್ಣರಾಯ ಅವರ ಜನ್ಮಸ್ಥಳ ಯಾವುದು?
1) ಬಾಗೇಪಲ್ಲಿ. 2) ಅರಕಲಗೂಡು. 3)ಕೋಲಾರ
5. ನಟ ವರದಾಚಾರ್ಯರು ಒಡ್ಡಿದ ಸವಾಲಿಗೆ ಒಂದೇ ರಾತ್ರಿಯಲ್ಲಿ ರಚಿಸಿದ ನಾಟಕ ಯಾವುದು?
1) ಮದುವೆಯೊ ಮನೆಹಾಳೊ. 2) ಗೋಮುಖ ವ್ಯಾಘ್ರ. 3)ಜಗಜ್ಯೋತಿ ಬಸವೇಶ್ವರ
6. ಅ.ನ.ಕೃಷ್ಣರಾಯ ಅವರ ಕುಟುಂಬದ ಮೂಲ ಸ್ಥಳ ಯಾವುದು?
1) ಅರಕಲಗೂಡು. 2) ಅರಸೀಕೆರೆ. 3)ಆಲೂರು
7. ಅ.ನ.ಕೃಷ್ಣರಾಯ ಅವರು ಚಿಕ್ಕ ಪಾತ್ರವೊಂದರಲ್ಲಿ ನಟಿಸಿದ ಸಿನಿಮಾ ಯಾವುದು?
1) ಸಂಧ್ಯಾರಾಗ. 2)ಸಿಂಗಾರಿ. 3)ತುಂಬಿದ ಕೊಡ
8. ಅ.ನ.ಕೃಷ್ಣರಾಯ ಅವರು ಬರೆದ ಕಾದಂಬರಿಗಳ ಸಂಖ್ಯೆ ಎಷ್ಟು?
1)15 2)110 3)69
9. ಅ.ನ.ಕೃಷ್ಣರಾಯ ಅವರ ಬಗೆಗಿನ ಅಭಿನಂದನಾ ಗ್ರಂಥಥಳದ ಶೀರ್ಷಿಕೆ ಏನು?
1)ಸಾರ್ಥಕ ಸಾಹಿತ್ಯ. 2)ಕಾದಂಬರಿ ಸಾರ್ವಭೌಮ. 3)ರಸಚೇತನ
10. “ಅನಕೃ ಒಂದು ಜೀವಮಾನದಲ್ಲಿ ಮಾಡಿದ್ದು ನೂರು ಜೀವಮಾನಗಳ ಕೆಲಸ” ಎಂದು ಬಣ್ಣಿಸಿದ ಸಾಹಿತಿ ಯಾರು?
1)ಕುವೆಂಪು. 2)ಮಾಸ್ತಿವೆಂಕಟೇಶ ಅಯ್ಯಂಗಾರ್ 3)ನಿರಂಜನ
11. ಅ.ನ.ಕೃಷ್ಣರಾಯ ಅವರ ಮೊದಲ ಕಾದಂಬರಿಯ ಹೆಸರೇನು?
1) ಜೀವನ ಯಾತ್ರೆ. 2)ಅಪರಂಜಿ. 3)ಅಣ್ಣ ತಂಗಿ
12. ಅ.ನ.ಕೃಷ್ಣರಾಯ ಅವರ ನೂರನೇ ಕಾದಂಬರಿ ಯಾವುದು?
1)ದೀಪಾರಾಧನೆ. 2)ಗರುಡ ಮಚ್ಚೆ. 3)ಕಾಮನ ಬಿಲ್ಲು
13. ಅ.ನ.ಕೃಷ್ಣರಾಯ ಅವರ ಕಾದಂಬರಿ ಆಧಾರಿತ ಚಲನಚಿತ್ರ ಯಾವುದು?
1)ಶನಿ ಸಂತಾನ. 2)ಮಣ್ಣಿನ ದೋಣಿ. 3)ಸಂಧ್ಯಾರಾಗ
14. ಅನಕೃ ಅವರ “ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ, ನನಗಿರುವುದು ಒಂದೇ ______” ಸಾಲಿನಲ್ಲಿ ಬಿಟ್ಟ ಶಬ್ದ ಯಾವುದು?
1)ಕನ್ನಡ. 2)ದಾರಿ. 3)ಊರು
15. ಅ.ನ.ಕೃಷ್ಣರಾಯರು ಇಹಲೋಕ ತ್ಯಜಿಸಿದ ದಿನಾಂಕ ಯಾವುದು?
1)08 ಜುಲೈ 1970 2)08 ಜುಲೈ 1971 3)08 ಜುಲೈ 1972
~~~~~~~~~~~~~~~~~~~~~~~~
★ಉತ್ತರಗಳು:-
1)09 ಮೇ 1908
2)ನರಸಿಂಗರಾವ್
3)ಅನ್ನಪೂರ್ಣಮ್ಮ
4)ಕೋಲಾರ
5)ಮದುವೆಯೋ ಮನೆ ಹಾಳೋ
6)ಅರಕಲಗೂಡು
7)ತುಂಬಿದ ಕೊಡ
8)110
9)ರಸಚೇತನ
10)ನಿರಂಜನ
11)ಜೀವನ ಯಾತ್ರೆ
12)ಗರುಡಮಚ್ಚೆ
13)ಸಂಧ್ಯಾರಾಗ
14)ಕನ್ನಡ
15) 08 ಜುಲೈ 1971
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
