ಹಾಸನ, ಜು. 4: ಈ ಫೋಟೋದಲ್ಲಿರುವ ವ್ಯಕ್ತಿಯು ಹಾಸನ ತಾಲ್ಲೂಕಿನ ಸಾಲಗಾಮೆ ಗ್ರಾಮದ ತಮ್ಮ ತಂಗಿಯ ಮನೆಯಿಂದ ಕಾಣೆಯಾಗಿದ್ದು, ಅವರ ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಲಾಗಿದೆ.
ಕಾಣೆಯಾದ ವ್ಯಕ್ತಿಯ ಹೆಸರು ಶಿವಯ್ಯ ಬಿ. ಚಿಕ್ಕಯ್ಯ (65). ಇವರಿಗೆ ದುಂಡು ಮುಖ, ಸುಮಾರು 172 ಸೆಂ.ಮೀ. ಎತ್ತರ, ಕಪ್ಪು ತಲೆಕೂದಲು ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಶರ್ಟ್ ಹಾಗೂ ಬಿಳಿ ಬಣ್ಣದ ಪಂಚೆ ಧರಿಸಿರುತ್ತಾರೆ. ಎರಡೂ ಕಾಲುಗಳ ಬೆರಳುಗಳ ಸುತ್ತ ಬಿಳಿ ಬಣ್ಣದ ತೊನ್ನು (ಬ್ಯಾಂಡೇಜ್) ಇರುತ್ತದೆ.
ಮೇಲ್ಕಂಡ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅವರ ಮೊಬೈಲ್ ಸಂಖ್ಯೆ 9480804746 ಅಥವಾ ಹಾಸನ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08172-268845 ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ:
ಹರೀಶ ಪಿ.ಎಸ್.
ಮೊ.: 8904907236
